• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

88,585 ಹುದ್ದೆಗಳ ನೇಮಕಾತಿ ಆದೇಶ ನಕಲಿ; ಅರ್ಜಿ ಹಾಕದಿರಿ

|

ಬೆಂಗಳೂರು, ಆಗಸ್ಟ್ 19 : ಕೋಲ್ ಇಂಡಿಯಾದ ಅಂಗ ಸಂಸ್ಥೆ ಎಂದು ಹೇಳಿಕೊಂಡು 88,585 ಹುದ್ದೆಗಳಿಗೆ ಅರ್ಜಿ ಕರೆದ ಅಧಿಸೂಚನೆ ನಕಲಿ. ಕೇಂದ್ರ ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಈ ಕುರಿತು ಸ್ಪಷ್ಟನೆ ನೀಡಿದೆ.

South Central Coalfields Limited ಕೆಲವು ದಿನಗಳ ಹಿಂದೆ 88, 585 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ನೋಡಿ ಉದ್ಯೋಗಾಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಸಬಾರದು ಎಂದು ಕೋಲ್ ಇಂಡಿಯಾ ಹೇಳಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ 30ಹುದ್ದೆಗಳಿಗೆ ನೇಮಕಾತಿ

ಕೋಲ್ ಇಂಡಿಯಾ South Central Coalfields Limited ಎಂಬ ಯಾವುದೇ ಅಂಗ ಸಂಸ್ಥೆಯನ್ನು ಹೊಂದಿಲ್ಲ. ಕೇಂದ್ರ ಸರ್ಕಾರದ ಉದ್ಯೋಗ ಎಂದು ನಕಲಿ ಜಾಹೀರಾತು ನೋಡಿ ಅಭ್ಯರ್ಥಿಗಳು ವಂಚನೆಗೊಳಗಾಗಬಾರದು ಎಂದು ಮನವಿ ಮಾಡಲಾಗಿದೆ.

ಬೆಂಗಳೂರಿನ ರೈಲ್ವೆ ಕೋಚ್‌ ಫ್ಯಾಕ್ಟರಿಯಲ್ಲಿ ಕೆಲಸ ಖಾಲಿ ಇದೆ

ಅರ್ಜಿ ಶುಲ್ಕವನ್ನು ವಾಪಸ್ ನೀಡುವುದಿಲ್ಲ ಎಂದು ಜಾಹೀರಾತು ನೀಡಲಾಗಿದೆ. ಇದನ್ನು ನೋಡಿ ಅರ್ಜಿ ಸಲ್ಲಿಸಿ ಹಣ ಕಳೆದುಕೊಳ್ಳಬೇಡಿ ಎಂದು ಕೋಲ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಂಚೆ ಇಲಾಖೆ ನೇಮಕಾತಿ; ವಿದ್ಯಾರ್ಹತೆ 10ನೇ ತರಗತಿ

ಕೋಲ್ ಇಂಡಿಯಾದಲ್ಲಿ ಖಾಲಿ ಇರುವ ಉದ್ಯೋಗದ ಬಗ್ಗೆ ಮಾಹಿತಿ ಬೇಕಿದ್ದರೆ ವೆಬ್‌ಸೈಟ್‌ಗೆ ಭೇಟಿ ನೀಡಿ. 033-7110 ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ನಕಲಿ ಜಾಹೀರಾತು ನೋಡಿ 88,585 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹೋಗಿ ಹಣ ಕಟ್ಟಿ ವಂಚನೆಗೆ ಒಳಗಾಗದಿರಿ ಎಂದು ಉದ್ಯೋಗ ನಿರೀಕ್ಷೆಯಲ್ಲಿರುವ ಯುವಕ/ಯುವತಿಯರಿಗೆ ಮನವಿ ಮಾಡಲಾಗಿದೆ.

English summary
Coal India does not have any subsidiary named SCCLCIL. In a announcement it clarified that recruitment notice for 88,585 vacancies at South Central Coalfields Limited (SCCLCIL) is fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X