ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಬೇಕೆ?; ಸ್ಕಿಲ್ ಕನೆಕ್ಟ್‌ ಪೋರ್ಟ್‌ಗೆ ಹೆಸರು ಸೇರಿಸಿ

|
Google Oneindia Kannada News

ಬೆಂಗಳೂರು, ಆಗಸ್ಟ್ 19 : ಸ್ಕಿಲ್ ಕನೆಕ್ಟ್ ಪೋರ್ಟಲ್‌ನಲ್ಲಿ ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಣಿ ಮಾಡುವಂತೆ ಸೂಚನೆ ನೀಡಲಾಗಿದೆ. ಯುವಜನರು ಕೆಲಸ ಹುಡುಕಲು ಅನುಕೂಲವಾಗುವಂತೆ ಈ ಪೋರ್ಟಲ್ ರಚನೆ ಮಾಡಲಾಗಿದೆ.

ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ www.kaushalkar.com ಜಾಲತಾಣದಲ್ಲಿ ಕೌಶಲ್ಯ ಸಂಪರ್ಕ ಎಂಬ ಪೋರ್ಟಲ್‍ ಆರಂಭಿಸಿದೆ. ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಇದು ಸಂಪರ್ಕ ಸೇತುವಾಗಲಿದೆ.

ಕೆಪಿಎಸ್‌ಸಿ ನೇಮಕಾತಿ; 990 ಹುದ್ದೆಗಳಿಗೆ ಅರ್ಜಿ ಹಾಕಿ ಕೆಪಿಎಸ್‌ಸಿ ನೇಮಕಾತಿ; 990 ಹುದ್ದೆಗಳಿಗೆ ಅರ್ಜಿ ಹಾಕಿ

ಸ್ಕಿಲ್ ಕನೆಕ್ಟ್ ಪೋರ್ಟಲ್ ಕೈಗಾರಿಕೆ, ಉದ್ದಿಮೆಗಳಿಗೆ ಅವಶ್ಯ ಹಾಗೂ ಯೋಗ್ಯ ಮಾನವ ಸಂಪನ್ಮೂಲವನ್ನು ದೊರಕಿಸಲಿದೆ. ಯುವ ಜನತೆಗೆ ಸೂಕ್ತ ಉದ್ಯೋಗ ಹೊಂದಲು ಅವಕಾಶ ಕಲ್ಪಿಸಲಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ

Enroll Your Name In Skill Connect Portal Karnataka

ವಿವಿಧ ಉದ್ದಿಮೆ, ಕೈಗಾರಿಕೆ, ಉದ್ಯೋಗದಾತರು ಅವಶ್ಯಕತೆಗೆ ಅನುಗುಣವಾಗಿ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಸಲ್ಲಿಸಿದಲ್ಲಿ, ಅದಕ್ಕನುಗುಣವಾಗಿ ಕೌಶಲ್ಯ ತರಬೇತಿಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ನೀಡುವ ಮೂಲಕ ಅವರನ್ನು ಸಜ್ಜುಗೊಳಿಸಿ ಉದ್ಯೋಗ ಕೈಗೊಳ್ಳಲು ಸಹಕರಿಸಲಾಗುತ್ತದೆ.

ಶ್ರೀ ಕೃಷ್ಣದೇವರಾಯ ವಿವಿ ನೇಮಕಾತಿ; 105 ಹುದ್ದೆಗಳು ಶ್ರೀ ಕೃಷ್ಣದೇವರಾಯ ವಿವಿ ನೇಮಕಾತಿ; 105 ಹುದ್ದೆಗಳು

ಈ ಹಿನ್ನಲೆಯಲ್ಲಿ ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳು ನಿಗಮದ ಜಾಲ ತಾಣ www.kaushalkar.comಕ್ಕೆ ಭೇಟಿ ನೀಡಬೇಕು. ಅದರಲ್ಲಿ Skill Connect ಪೋರ್ಟಲ್‍ನಲ್ಲಿ ಹೆಸರು ನೋಂದಾಯಿಸಿಲು ಕರೆ ನೀಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2972388ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.

English summary
Enroll your name in skill connect portal. I t will help youth to find jobs. Karnataka skill development corporation launched the website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X