India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ; ನರೇಗಾ ಅಡಿ ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

|
Google Oneindia Kannada News

ಧಾರವಾಡ, ಜೂನ್ 03; ಧಾರವಾಡ ಜಿಲ್ಲಾ ಪಂಚಾಯತಿ ಪ್ರಧಾನ ಕಛೇರಿಯಲ್ಲಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕ ಪಂಚಾಯತಿಗಳಲ್ಲಿ ಕಾರ್ಯ ನಿರ್ವಹಣೆ ಮಾಡಲು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯವಿರುವ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ವಿವರಗಳು ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ವಿವರಗಳು

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಜೂನ್ 3ರಿಂದ ಜೂನ್ 18ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ.

ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ತಕ್ಷಣ ಅರ್ಜಿ ಹಾಕಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ; ತಕ್ಷಣ ಅರ್ಜಿ ಹಾಕಿ

ಹೊರಗುತ್ತಿಗೆ ಆಧಾರದ ಮೇಲೆ ಒಟ್ಟು 14 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ವಿದ್ಯಾರ್ಹತೆ, ವಯೋಮಿತಿಗಳ ವಿವರ ವೆಬ್‌ ಸೈಟ್‌ನಲ್ಲಿ ಲಭ್ಯವಿದೆ. ವೇತನ, ಆಯ್ಕೆ ವಿಧಾನ ಮುಂತಾದ ಮಾಹಿತಿಗಳು ಚಿತ್ರಗಳಲ್ಲಿದೆ.
http://zpdharwad.kar.nic.in/

ಹುದ್ದೆಗಳ ವಿವರಗಳು

ಹುದ್ದೆಗಳ ವಿವರಗಳು

ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ (ಎಡಿಪಿಸಿ) 1, ಜಿಲ್ಲಾ ಐ. ಇ. ಸಿ. ಸಂಯೋಜಕರು(ಡಿಐಇಸಿ) 1, ತಾಲೂಕಾ ಎಂ. ಐ. ಎಸ್. ಸಂಯೋಜಕರು (ಟಿಐಎಂಎಸ್) 2, ತಾಲೂಕಾ ಐ. ಇ. ಸಿ. ಸಂಯೋಜಕರು (ಟಿಐಇಎಸ್) 2, ತಾಲೂಕಾ ಸಂಯೋಜಕರು (ಟಿಸಿ) 2, ಡಾಟಾ ಎಂಟ್ರಿ ಆಪರೇಟರ್ಸ್ (ಡಿಇಓ) 2, ತಾಂತ್ರಿಕ ಸಹಾಯಕರು (ಕೃಷಿ) 1, ತಾಂತ್ರಿಕ ಸಹಾಯಕರು (ಅರಣ್ಯ) 2, ತಾಲೂಕಾ ತಾಂತ್ರಿಕ ಸಹಾಯಕರು (ಟಿಎಇ) 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ವೇತನದ ವಿವರಗಳು

ವೇತನದ ವಿವರಗಳು

ಸಹಾಯಕ ಜಿಲ್ಲಾ ಸಮನ್ವಯ ಅಧಿಕಾರಿ 38,000. ಜಿಲ್ಲಾ ಐ. ಇ. ಸಿ. ಸಂಯೋಜಕರು 23,000+ 2000. ತಾಲೂಕಾ ಎಂ. ಐ. ಎಸ್. ಸಂಯೋಜಕರು 18,000. ತಾಲೂಕಾ ಐ. ಇ. ಸಿ. ಸಂಯೋಜಕರು 18,000+2000. ತಾಲೂಕಾ ಸಂಯೋಜಕರು 29,000. ಡಾಟಾ ಎಂಟ್ರಿ ಆಪರೇಟರ್ಸ್ 16,724. ತಾಂತ್ರಿಕ ಸಹಾಯಕರು (ಕೃಷಿ) 24,000 (ಪ್ರಯಾಣ ಭತ್ಯೆ ಇದೆ). ತಾಂತ್ರಿಕ ಸಹಾಯಕರು (ಅರಣ್ಯ) 24,000 (ಪ್ರಯಾಣ ಭತ್ಯೆ), ತಾಲೂಕಾ ತಾಂತ್ರಿಕ ಸಹಾಯಕರು 24,000 (ಪ್ರಯಾಣ ಭತ್ಯೆ).

ಆಯ್ಕೆ ವಿಧಾನಗಳು

ಆಯ್ಕೆ ವಿಧಾನಗಳು

ಆಯ್ಕೆಯಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನಿಗದಿಪಡಿಸಿದ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು. ನೇಮಕಾತಿ ಅವಧಿ 11 ತಿಂಗಳಾಗಿದ್ದು, ಕಾರ್ಯಕ್ಷಮತೆ ಪರಿಶೀಲಿಸಿ ಮುಂದುವರೆಸುವ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.

ಮೆರಿಟ್ ಆಯ್ಕೆಯ ಕುರಿತು ಮಾಹಿತಿ

ಮೆರಿಟ್ ಆಯ್ಕೆಯ ಕುರಿತು ಮಾಹಿತಿ

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ ದಾಖಲಾತಿಗಳ ಪರಿಶೀಲನೆ ನಂತರ ಬಳಿಕ ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ಸಿದ್ಧಗೊಳಿಸಲಾಗುತ್ತದೆ. ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ಈ ಕೆಳಕಂಡ ಮಾನದಂಡದಲ್ಲಿ ಮೆರಿಟ್ ಪಟ್ಟಿ ತಯಾರಾಗಲಿದೆ.

English summary
Dharwad zilla panchayat invited applications for the various post under NREGA. Candidates can submit applications online till June 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X