CeNS Recruitment 2023: ಎಂಎಸ್‌ಸಿ ಆದವರಿಗೆ ಬೆಂಗಳೂರಿನಲ್ಲೇ 32,000 ರೂ. ಉದ್ಯೋಗ, ಆನ್‌ಲೈನ್ ಅರ್ಜಿ ಹಾಕಿ
ಬೆಂಗಳೂರು, ಜೂನ್ 28: ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ (CeNS) ತನ್ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹರಿಂದ ಅರ್ಜಿ ಆಹ್ವಾನಿಸಿದ್ದು, ಬೆಂಗಳೂರಿನಲ್ಲೇ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ (CeNS) ತನ್ನಲಿ ಖಾಲಿ ಇರುವ ವಿವಿಧ ಆರ್ ಮತ್ತು ಡಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಜುಲೈ 9 ರೊಳಗೆ ಅರ್ಜಿ ಸಲ್ಲಿಸಬೇಕು. ಆಯ್ಕೆಯಾಗುವ ಅಭ್ಯರ್ಥಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುನ್ನ ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಬೇಕು. ಇನ್ನೂ ಹುದ್ದೆಗಳ ಮಾಹಿತಿ, ಅರ್ಜಿ ಸಲ್ಲಿಕೆ, ವೇತನ, ವಯೋಮಿತಿ ಕುರಿತು ಇಲ್ಲಿ ಮಾಹಿತಿ ತಿಳಿಯಬಹುದು.
ಹುದ್ದೆಗಳ ಸಂಪೂರ್ಣ ವಿವರ
ಹುದ್ದೆಗಳ ಹೆಸರು - ಆರ್ & ಡಿ ಅಸಿಸ್ಟೆಂಟ್ ಹುದ್ದೆ
ಶೈಕ್ಷಣಿಕ ಅರ್ಹತೆ - MSc ಪದವಿ
ಮಾಸಿಕ ವೇತನ - 32,000 ರೂಪಾಯಿ
ಉದ್ಯೋಗದ ಸ್ಥಳ- ಬೆಂಗಳೂರು

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಎಸ್ಸಿ ಪೂರ್ಣಗೊಳಿಸಿರಬೇಕು ಎಂದು ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ ನೇಮಕಾತಿ ಅಧಿಸೂಚನೆ ತಿಳಿಸಿದೆ. ಇನ್ನೂ ಅಭ್ಯರ್ಥಿಗಳ ವಯಸ್ಸು ಬಗ್ಗೆ ಹೇಳಲಾಗಿಲ್ಲ. ಆದರೆ ನಿಯಮಾನುಸಾರ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ ಎಂದು ಹೇಳಿದೆ.
ಅರ್ಜಿ ಶುಲ್ಕ- ವೇತನ
ಖಾಲಿ ಇರುವು ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆದರೆ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಯಾವ ಶುಲ್ಕ ವಿಧಿಸಲಾಗಿಲ್ಲ. ಅರ್ಜಿ ಸಲ್ಲಿಕೆ ಬಳಿಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಲಾಗುತ್ತದೆ. ಅವರಿಗೆ ಮಾಸಿಕ 32,000 ರೂಪಾಯಿ ಸಂಬಳ ನೀಡಲಾಗುವುದು.
ಅಭ್ಯರ್ಥಿಗಳ ಆಯ್ಕೆ ಹೇಗೆ
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂಸ್ಥೆಯು ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಅಲ್ಲಿ ಆಯ್ಕೆಯಾದವರಿಗೆ ಮತ್ತೆ ನೇರ ಸಂದರ್ಶನ ನಡೆಸುತ್ತದೆ. ಅರ್ಜಿ ಸಲ್ಲಿಕೆಯು ಇದೇ ಜೂನ್ 26ಕ್ಕೆ ಆರಂಭವಾಗಿದ್ದು, ಕೊನೆಯ ದಿನ ಜುಲೈ 9 ಎಂದು ಅಧಿಸೂಚನೆ ತಿಳಿಸಿದೆ.












Click it and Unblock the Notifications