Infosys Recruitment: ಇನ್ಫೋಸಿಸ್‌ನಿಂದ ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳ ನೇಮಕಾತಿ

Infosys Recruitment: ಎಐ ಕಾಲಿಡುತ್ತಿದ್ದಂತೆ ಐಟಿ ವಲಯದಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳ ಕಡಿತ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗಷ್ಟೇ ಟಿಸಿಎಸ್‌ ಮೊಟ್ಟ ಮೊದಲ ಬಾರಿಗೆ 12,000ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಾಗಿ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ದೇಶದ ಅತೀ ದೊಡ್ಡ ಐಟಿ ಕಂಪನಿಗಳಲ್ಲೊಂದಾದ ಇನ್ಫೋಸಿಸ್ ನೇಮಕಾತಿ ಮಾಡಿಕೊಳ್ಳುವುದಾಗಿ ಘೋಷಿಸಿ ಗಮನ ಸೆಳೆದಿದೆ. ಹಾಗಾದ್ರೆ ಪ್ರಕ್ರಿಯೆ ಯಾವಾಗಿನಿಂದ ಶುರುವಾಗಲಿದೆ ಹಾಗೂ ಯಾರನೆಲ್ಲ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಇಲ್ಲಿ ತಿಳಿಯಿರಿ.

ದೇಶದ ಅತೀ ದೊಡ್ಡ ಐಟಿ ಕಂಪನಿಗಳಲ್ಲೊಂದಾದ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಉದ್ಯೋಗಿಗಳ ಕೆಲಸದ ಅವಧಿ ವಿಸ್ತರಣೆ ಕುರಿತು ಮಾತನಾಡಿ ಉದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ, ಇದೀಗ ಬಹುತೇಕ ಐಟಿ ಕಂಪನಿಗಳ ಉದ್ಯೋಗಗಳ ಕಡಿತದ ನಡುವೆಯೇ ಇನ್ಫೋಸಿನ್‌ ಬೃಹತ್ ಪ್ರಮಾಣದ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಎಷ್ಟು ಹುದ್ದೆಗಳ ನೇಮಕಾತಿಗೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ.

Cat Infosys Decides to Recruit 20 000 freshers in This year

ಇದೀಗ ಸಸದ್ಯ ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತದ ಸದ್ದು ಜೋರಾಗಿದೆ. ಈ ನಡುವೆಯೇ ಐಟಿ ಉದ್ಯೋಗಾಕಾಂಕ್ಷಿಗಳಿಗೆ ಇನ್ಫೋಸಿಸ್‌ ಗುಡ್‌ ನ್ಯೂಸ್‌ ಕೊಟ್ಟಿದ್ದು, ಇದೇ ವರ್ಷದಲ್ಲಿ 20,000 ಹೊಸಬರನ್ನು ನೇಮಕ ಮಾಡಿಕಿಳ್ಳುವುದಾಗು ಘೋಷಣೆ ಮಾಡಿ. ಈ ಬಗ್ಗೆ ಸ್ವತಃ ಕಂಪನಿಯ ಸಿಇಒ ಸಲೀಲ್‌ ಪರೇಖ್‌ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 17,000ಕ್ಕೂ ಹೆಚ್ಚು ಜನರನ್ನು ನೇಮಕ ಮಾಡಿಕೊಂಡಿದ್ದೇವೆ. ಈ ವರ್ಷ ಸುಮಾರು 20,000 ಕಾಲೇಜು ಪದವೀಧರರನ್ನು ಕಂಪನಿಗೆ ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದೇವೆ ಎಂದು ಇನ್ಫೋಸಿಸ್ ಸಿಇಒ ಸಲೀಲ್‌ ಪರೇಖ್‌ ತಿಳಿಸಿದ್ದಾರೆ.

ಕೃತಕ ಬುದ್ಧಿಮತ್ತೆ (ಎಐ)ಕಾರ್ಯತಂತ್ರವಾಗಿ ಹೂಡಿಕೆ ಮಾಡಲಾಗುತ್ತಿದೆ. ಇದು ಕಂಪನಿಗೆ ಮುಂಚೂಣಿಗೆ ಬರಲು ಸಹಾಯ ಮಾಡಿದೆ. ಹಲವು ಹಂತಗಳಲ್ಲಿ ಕಂಪನಿಯ ಸುಮಾರು 2,75,000 ಉದ್ಯೋಗಿಗಳಿಗೆ ತರಬೇತಿ ನೀಡಲಾಗಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

ಎಐ ಕುರಿತು ಮಾತನಾಡಿರುವ ಅವರು, ಎಐ ಆಧಾರಿತ ಆಟೋಮೆಷನ್‌ನಿಂದ ಸಾಫ್ಟ್‌ವೇರ್‌ ಅಭಿವೃದ್ಧಿ ವಿಷಯದಲ್ಲಿ 5-15ರಷ್ಟು ಉತ್ಪಾದಕತೆ ಹೆಚ್ಚಾಗಲಿದೆ. ನಿಪುಣರ ಮೇಲ್ವಿಚಾರಣೆಯಲ್ಲಿ ಆಟೋಮೆಷನ್‌ ಕಾರಣ ತಮ್ಮ ಬ್ಯಾಂಕಿಂಗ್‌ ಪ್ಲಾಟ್‌ಫಾರ್ಮ್‌ ಇನ್ಫೋಸಿಸ್‌ ಫಿನಾಕಲ್‌ ಶೇಕಡ 20ರಷ್ಟು ಹೆಚ್ಚುವರಿ ಉತ್ಪಾದಕತೆ ಸಾಧಿಸಿದೆ. ಆದ್ದರಿಂದ ಎಐಗೆ ಕೌಶಲ್ಯಯುತ ಮಾನವ ಸಂಪನ್ಮೂಲ ಸಿಕ್ಕರೆ ಇನ್ನೂ ಉತ್ತಮ ಫಲಿತಾಂಶ ಸಿಕ್ಕಂತಾಗಲಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಸಂಬಳ ಏರಿಕೆ ಬಗ್ಗೆ ಮಾತನಾಡಿ, ಕಳೆದ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ ವೇತನ ಏರಿಕೆ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಪ್ರಕಟ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ಎಐ ಉದಾಹರಣೆ ಕೊಟ್ಟು ಹಲವು ದೊಡ್ಡ ದೊಡ್ಡ ಐಟಿ ಕಂಪನಿಗಳು ಬೃಹತ್ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕಡಿತಗೊಳಿಸಿವೆ. ಈ ನಡುವೆಯೇ ಇನ್ಫೋಸಿಸ್‌ ನೇಮಕಕ್ಕೆ ಮುಂದಾಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+