800 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆನರಾ ಬ್ಯಾಂಕ್

ಬೆಂಗಳೂರು, ಅಕ್ಟೋಬರ್ 25 : ಕೆನರಾ ಬ್ಯಾಂಕ್ 800 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನವೆಂಬರ್ 13, 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೆನರಾ ಬ್ಯಾಂಕ್ 800 Probationary Officer ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ.

ಅಕ್ಟೋಬರ್ 23 ರಿಂದ ನವೆಂಬರ್ 13ರ ತನಕ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕಗಳನ್ನು ಪಾವತಿ ಮಾಡಲು ನವೆಂಬರ್ 13 ಅಂತಿಮ ದಿನವಾಗಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಕರ್ನಾಟಕದ 15 ಸೆಂಟರ್‌ಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಲಿಖಿತ ಪರೀಕ್ಷೆ ನಡೆಯಲಿದೆ... ವಿದ್ಯಾರ್ಹತೆ, ವೇತನದ ವಿವರ ಚಿತ್ರಗಳಲ್ಲಿ...

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆಯ ವಿವರ

ವಿದ್ಯಾರ್ಹತೆಯ ವಿವರ

ಕೆನರಾ ಬ್ಯಾಂಕ್ Probationary Officer ಹುದ್ದೆಗೆ ಅರ್ಜಿ ಸಲ್ಲಿಸುವವರು ಶೇ 60ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. (ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ 55 ಅಂಕ). ಅಥವ ಕೇಂದ್ರ ಅಥವ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ಸಂಸ್ಥೆಯಿಂದ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

ವಯೋಮಿತಿ ವಿವರ

ವಯೋಮಿತಿ ವಿವರ

Probationary Officer ಹುದ್ದೆಗೆ ಅರ್ಜಿಗಳನ್ನು ಸಲ್ಲಿಸಲು ಕನಿಷ್ಠ 20 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 1 ಅಕ್ಟೋಬರ್ 2018ಕ್ಕೆ ಅನ್ವಯವಾಗುವಂತೆ 20 ರಿಂದ 30 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕದ ವಿವರ

ಅರ್ಜಿ ಶುಲ್ಕದ ವಿವರ

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಅರ್ಜಿ ಶುಲ್ಕವನ್ನು ಪಾವತಿ ಮಾಡಲು ನವೆಂಬರ್ 13, 2018 ಕೊನೆಯ ದಿನವಾಗಿದೆ.

ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ 708 ರೂ. ಅರ್ಜಿ ಶುಲ್ಕ, ಉಳಿದ ವರ್ಗದವರಿಗೆ ಮತ್ತು ಎಸ್‌ಟಿ/ಎಸ್‌ಸಿ/ನಿವೃತ್ತಯೋಧರಿಗೆ/ಅಂಗವಿಕಲ ಅಭ್ಯರ್ಥಿಗಳಿಗೆ 118 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

ವೇತನ ಮತ್ತು ಇತರ ಮಾಹಿತಿ

ವೇತನ ಮತ್ತು ಇತರ ಮಾಹಿತಿ

ಆಯ್ಕೆಯಾದ ಅಭ್ಯರ್ಥಿಗಳಿಗೆ 23,700 - 42,020 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಪಾವತಿ ಮಾಡಲು ನವೆಂಬರ್ 13 ಕೊನೆಯ ದಿನವಾಗಿದೆ.

ಪರೀಕ್ಷಾ ಕೇಂದ್ರಗಳು

ಪರೀಕ್ಷಾ ಕೇಂದ್ರಗಳು

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕ ಅಯ್ಕೆ ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಲಿಖಿತ ಪರೀಕ್ಷೆಗಳು ನಡೆಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+