ಬೆಂಗಳೂರು ಜಲಮಂಡಳಿಯಲ್ಲಿ 270 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಹಾಕಿ

ಬೆಂಗಳೂರು, ಆಗಸ್ಟ್ 27 : ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 27/9/2018.

ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವಿಕ್ಕುಳಿದ ವೃಂದ (Non-Hyderabad Karnataka) ಮತ್ತು ಸ್ಥಳೀಯ ವೃಂದ (Hyderabad Karnataka)ದ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಗ್ರೂಪ್ ಬಿ ವೃಂದ (ತಾಂತ್ರಿಕ), ಗ್ರೂಪ್ ಸಿ ವೃಂದ (ತಾಂತ್ರಿಕ), ಗ್ರೂಪ್ ಸಿ ವೃಂದ (ತಾಂತ್ರಿಕೇತರ) ಸೇರಿ ಒಟ್ಟು 270 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಗಸ್ಟ್ 29 ರ ಬೆಳಗ್ಗೆ 11 ಗಂಟೆಯಿಂದ, 27/9/2018ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಂಚೆ ಅಥವ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ. www.bwssb.gov.in ಮೂಲಕ ಅರ್ಜಿಗಳನ್ನು ಸಲ್ಲಿಸುವಾಗ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಓದಿಕೊಳ್ಳಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವ-ಯಾವ ಹುದ್ದೆಗಳ ಭರ್ತಿ

ಯಾವ-ಯಾವ ಹುದ್ದೆಗಳ ಭರ್ತಿ

ಗ್ರೂಪ್ -ಬಿ ವೃಂದ (ತಾಂತ್ರಿಕ) : ಸಹಾಯಕ ಅಭಿಯಂತರ (ಸಿವಿಎಲ್) 33, ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್) 9, ಸಹಾಯಕ ಅಭಿಯಂತರ (ಮೆಕಾನಿಕಲ್) 5, ಸಹಾಯಕ ಇಂಜಿನಿಯರ್ (ಕಂಪ್ಯೂಟರ್ ವಿಜ್ಞಾನ) 2. ಒಟ್ಟು ಹುದ್ದೆಗಳು 49.

ಗ್ರೂಪ್ -ಸಿ ವೃಂದ (ತಾಂತ್ರಿಕ) : ಕಿರಿಯ ಅಭಿಯಂತರ (ಸಿವಿಎಲ್) 23, ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್) 12, ಕಿರಿಯ ಅಭಿಯಂತರ (ಮೆಕಾನಿಕಲ್) 4. ಒಟ್ಟು ಹುದ್ದೆಗಳು 39.

ಗ್ರೂಪ್ - ಸಿ ವೃಂದ (ತಾಂತ್ರಿಕೇತರ) : ಸಹಾಯಕ 20, ಆಪರೇಟರ್ 1, ಎರಡನೇ ದರ್ಜೆ ಉಗ್ರಾಣ ಪಾಲಕ 8, ಮಾಪನ ಓದುಗ 110, ಕಿರಿಯ ಸಹಾಯಕ 2, ಶೀಘ್ರಲಿಪಿಗಾರರು 2, ಬೆರಳಚ್ಚು-ಯಾ-ಡಾಟಾ ಎಂಟ್ರಿ ಆಪರೇಟರ್ 1 ಹುದ್ದೆ.

ವಯೋಮಿತಿಯ ವಿವರಗಳು

ವಯೋಮಿತಿಯ ವಿವರಗಳು

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ಅರ್ಜಿಗಳನ್ನು ಸಲ್ಲಿಸಲು ನಿಗದಿ ಪಡಿಸಿದ ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು ಗರಿಷ್ಠ ವಯೋಮಿತಿಯನ್ನು ಮೀರಬಾರದು.

ಅರ್ಜಿ ಶುಲ್ಕದ ವಿವರಗಳು

ಅರ್ಜಿ ಶುಲ್ಕದ ವಿವರಗಳು

ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿದ ಬಳಿಕ ಚಲನ್ ಡೌನ್‌ಲೋಡ್ ಮಾಡಿಕೊಂಡು ದೇಶದ ಯಾವುದೇ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಕಚೇರಿ ವೇಳೆಯಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ. ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ 28/9/2018. ಶುಲ್ಕ ಪಾವತಿ ಮಾಡಲು ನಿಗದಿ ಮಾಡಿರುವ ಕೊನೆಯ ದಿನಾಂಕ ಸರ್ಕಾರಿ ರಜೆ ದಿನವಾಗಿದ್ದರೆ. ಮುರುದಿನ ಅಂತಿಮ ದಿನವಾಗಿರುತ್ತದೆ.

ಬೆಂಗಳೂರಿನಲ್ಲಿ ಮಾತ್ರ ಪರೀಕ್ಷೆ

ಬೆಂಗಳೂರಿನಲ್ಲಿ ಮಾತ್ರ ಪರೀಕ್ಷೆ

ವಿವಿಧ ಹುದ್ದೆಗಳಿಗೆ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ. ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜೊತೆ ಚರ್ಚೆ ನಡೆಸಿ ಅಂತಿಮಗೊಳಿಸಲಾಗುತ್ತದೆ. ಪ್ರತ್ಯೇಕವಾಗಿ ಪರೀಕ್ಷಾ ವೇಳಾಪಟ್ಟಿ ಕಳಿಸಲಾಗುವುದಿಲ್ಲ. ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಸಹಾಯಕ್ಕಾಗಿ ಕರೆ ಮಾಡಿ

ಸಹಾಯಕ್ಕಾಗಿ ಕರೆ ಮಾಡಿ

ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು, ಅಧಿಸೂಚನೆಯನ್ನು ಓದಲು ವಿಳಾಸ ಇಲ್ಲಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ವಿವರವಾಗಿ ಓದಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+