BPNL Recruitment: ಕೇಂದ್ರ ಸರ್ಕಾರದ 2250 ಉದ್ಯೋಗಗಳ ನೇಮಕಾತಿ, ವೇತನ ವಿವರ
ಬೆಂಗಳೂರು, ಜುಲೈ 31: ಭಾರತೀಯ ಪಶುಪಾಲನಾ ನಿಗಮ ಕಂಪನಿ (BPNL) ತನ್ನಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಹಾಕಬೇಕಿದೆ.
ಭಾರತೀಯ ಪಶುಪಾಲನಾ ನಿಗಮ ಕಂಪನಿ (BPNL)ಯಲ್ಲಿ ಒಟ್ಟು 2250 ಪಶು ಸರ್ವೆಂಟ್, ಪಶು ಬ್ರೀಡಿಂಗ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಆಗಸ್ಟ್ 5ರಂದು ಕೊನೆ ದಿನವಾಗಿದೆ, ಕಡೆಯ ದಿನಾಂಕದೊಳಗೆ ಕಾಯದೇ ಅರ್ಹರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಮೊದಲು ಹುದ್ದೆಗೆ ಬೇಕಾದ ವಿದ್ಯಾರ್ಹತೆ, ಪೋಸ್ಟಿಂಗ್, ವಯಸ್ಸು, ಇನ್ನಿತರ ನೇಮಕಾತಿಯ ಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ನೇಮಕಾತಿ ಪೂರ್ಣ ವಿವರ
ಸಂಸ್ಥೆ ಹೆಸರು: ಭಾರತೀಯ ಪಶುಪಾಲನಾ ನಿಗಮ ಕಂಪನಿ (BPNL)
ಹುದ್ದೆ ಹೆಸರು: ಪಶು ಸರ್ವೆಂಟ್, ಪಶು ಬ್ರೀಡಿಂಗ್ ಅಸಿಸ್ಟೆಂಟ್
ಅರ್ಜಿ ಸಲ್ಲಿಕೆ ಕೊನೆ ದಿನ: ಆಗಸ್ಟ್ 5
ಪೋಸ್ಟಿಂಗ್: ಭಾರತದಲ್ಲಿ ಎಲ್ಲಿಯಾದರೂ
ಮಾಸಿಕ ವೇತನ: ₹18,000- ₹26,000
ಹುದ್ದೆಗಳ ಇತರ ಮಾಹಿತಿ
ಪಶು ಸರ್ವೆಂಟ್- 1350
ಪಶು ಪ್ರೊಮೋಶನ್ ಎಕ್ಸ್ಟೆಂಡರ್- 225
ಪಶು ಬ್ರೀಡಿಂಗ್ ಅಸಿಸ್ಟೆಂಟ್- 675
ಒಟ್ಟು ಹುದ್ದೆಗಳು: 2250

ವಿದ್ಯಾರ್ಹತೆ ಏನಿರಬೇಕು?
ಪಶು ಪ್ರೊಮೋಶನ್ ಎಕ್ಸ್ಟೆಂಡರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 'ಪದವಿ' ಆಗಿರಬೇಕು. ಪಶು ಬ್ರೀಡಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ 12ನೇ ತರಗತಿ ಆಗಿರಬೇಕು. ಇನ್ನೂ 10ನೇ ತರಗತಿ ಪಾಸಾದವರು ಪಶು ಸರ್ವೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಬೇಕು.
ವಯಸ್ಸಿನ ಮಿತಿ
ಪಶು ಪ್ರೊಮೋಶನ್ ಎಕ್ಸ್ಟೆಂಡರ್ ಹುದ್ದೆಯ ಅಭ್ಯರ್ಥಿಗಳಿಗೆ ಕನಿಷ್ಠ 25ರಿಂದ ಕನಿಷ್ಠ 45 ವರ್ಷ ವಯಸ್ಸಾಗಿರಬೇಕು. ಪಶು ಬ್ರೀಡಿಂಗ್ ಅಸಿಸ್ಟೆಂಟ್ ಹುದ್ದೆಯ ಅಭ್ಯರ್ಥಿಗಳು ಕನಿಷ್ಠ 21ರಿಂದ ಕನಿಷ್ಠ 40 ವರ್ಷ ವಯಸ್ಸಾಗಿರಬೇಕು ಹಾಗೂ ಪಶು ಸರ್ವೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 18 ರಿಂದ ಗರಿಷ್ಠ 40ವರ್ಷ ವಯಸ್ಸಾಗಿರಬೇಕು.
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಸಿಗಲಿದೆ.
ಆಯ್ಕೆ ಹೇಗೆ?
ಅಭ್ಯರ್ಥಿಗಳಿಗೆ ಮೊದಲು ಆನ್‌ಲೈನ್ ನಲ್ಲಿ ಪರೀಕ್ಷೆ ನಡೆಸಿ ನಂತರ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆ ಆಗುವವರಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುವುದು.
ಅರ್ಜಿ ಶುಲ್ಕದ ಮಾಹಿತಿ
ಪಶು ಪ್ರೊಮೋಶನ್ ಎಕ್ಸ್ಟೆಂಡರ್ ಹುದ್ದೆಗೆ ರೂ. 944 ರೂ, ಪಶು ಬ್ರೀಡಿಂಗ್ ಅಸಿಸ್ಟೆಂಟ್ ಹುದ್ದೆಗೆ 826 ರೂ. ಹಾಗೂ
ಪಶು ಸರ್ವೆಂಟ್ ಹುದ್ದೆಗೆ 708 ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ. ಈ ಹಣವನ್ನು ಅವರು ಆನ್‌ಲೈನ್ ಮೂಲಕವೇ ಪಾವತಿಸಬೇಕು ಎಂದು ಕಂಪನಿ ಹೇಳಿದೆ.
ಅರ್ಜಿ ಸಲ್ಲಿಕೆ ಲಿಂಕ್
ಅರ್ಜಿ ಸಲ್ಲಿಸುವವರು ಇಲ್ಲಿರುವ ಅಧಿಕೃತ ವೆಬ್‌ಸೈಟ್ https://pay.bharatiyapashupalan.com/onlinerequirment ಗೆ ಭೇಟಿ ನೀಡಬೇಕು. ಆಗಸ್ಟ್ 5ರ ಕೊನೆ ದಿನದವರೆಗೂ ಕಾಯದೇ ಈಕೂಡಲೇ ಅರ್ಜಿ ಹಾಕಬೇಕು.












Click it and Unblock the Notifications