Bosch Layoffs: ಬರೋಬ್ಬರಿ 7000 ಉದ್ಯೋಗಿಗಳ ವಜಾ...
ನವದೆಹಲಿ, ನವೆಂಬರ್ 05: ಗೃಹ ಉಪಯೋಗಿ ಉಪಕರಣ ಒದಗಿಸುವ ಪ್ರತಿಷ್ಠಿತ ಬಾಷ್ ಕಂಪನಿಯು (Bosch Layoffs) ತನ್ನ ಸಾವಿರಾರು ಉದ್ಯೋಗಿಗಳಿಗೆ ಆಘಾತ ನೀಡಿದೆ. ಹೌದು, ಸಾವಿರಾರು ಉದ್ಯೋಗಿಗಳನ್ನು ಕಡಿತಗೊಳಿಸಲು ಈ ಕಂಪನಿಯು ಪ್ಲಾನ್ ಮಾಡಿಕೊಂಡಿದೆ ಎಂದು ವರದಿ ಆಗಿದೆ. ಉದ್ಯೋಗ ಕಡಿತ ಬಗ್ಗೆ ಬಾಷ್ ಘೋಷಣೆ ಇದೇ ಮೊದಲೇನಲ್ಲ ಎಂದು ವರದಿ ಆಗಿದೆ.
ಹೌದು, Bosch ಪ್ರಪಂಚದಾದ್ಯಂತ ನೌಕರರನ್ನು ಕೆಲಸದಿಂದ ತೆಗೆಯು ಬಗ್ಗೆ, ಉದ್ಯೋಗ ಕಡಿತದ ಯೋಚನೆ ಬಗ್ಗೆ ಘೋಷಿಸುತ್ತಲೇ ಇದೆ. ಇದೀಗ ಜರ್ಮನಿ ಪ್ಲಾಂಟ್ ವಿಭಾಗಕ್ಕೆ ಸಂಬಂಧಿಸಿದಂತೆ ಬೃಹತ್ ಉದ್ಯೋಗ ವಜಾ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಬಾಷ್ ಜರ್ಮನಿ ಪ್ಲಾಂಟ್‌ನ 7,000 ಉದ್ಯೋಗಿಗಳನ್ನು ವಜಾ ಮಾಡಲು ಕಂಪನಿಯು ಪ್ಲಾನ್ ಮಾಡಿಕೊಂಡಿದೆ. ಈ ಕುರಿತು ವರದಿ ಮಾಡದಂತೆ ಕಂಪನಿಯ ಸಿಇಒ ಸ್ಟೇಫನ್ ಹಾರ್ತಂಗ್ ಅವರು ತಿಳಿಸಿದ್ದಾರೆ. ಬಾಷ್ ಕಂಪನಿಯ ನಿರ್ಧಾರವು ಭರ್ತಿ 7,000 ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ.
ಬೃಹತ್ ಉದ್ಯೋಗ ಕಡಿತಕ್ಕೆ ಕಾರಣವೇನು?
ಪ್ರಸಕ್ತ ವರ್ಷದಲ್ಲಿ 2024 ಬಾಷ್ ಕಂಪನಿಯು ಆರ್ಥಿಕ ಗುರಿಗಳನ್ನು ಸಾಧಿಸಿಲ್ಲ. ಇದರಿಂದ ಕಂಪನಿ ಆದಾಯ ಗಳಿಕೆಯು ಇಳಿಕೆ ಮುಖವಾಗಿದೆ. 2023 ರಲ್ಲಿ ಕಂಪನಿಯು ಸುಮಾರು 98 ಬಿಲಿಯನ್ ಯುಎಸ್ ಡಾಲರ್ ಆದಾಯ ಸಂಗಹಿಸುವಲ್ಲಿ ಯಶಸ್ವಿಯಾಗಿತ್ತು.
ಬಾಷ್ ಉತ್ಪನ್ನ ಮಾರಾಟದ ಈ ವರ್ಷದ ಆದಾಯವು ಕಳೆದ ವರ್ಷ 5 ಪ್ರತಿಶತಕ್ಕೆ ಹೋಲಿಸಿದರೆ 4 ಶೇಕಡಾ ಅಧಿಕ ಗುರಿ ಹೊಂದಲಾಗಿತ್ತು. ಆದರೆ ಅದನ್ನು ಸಾಧಿಸಲಾಗಿಲ್ಲ. 2026ರ ವೇಳೆಗೆ ಆದಾಯ ಹೆಚ್ಚಳದಲ್ಲಿ ಶೇಕಡಾ 7 ಗುರಿ ಇಟ್ಟುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಒಂದಷ್ಟು ಬದಲಾವಣೆ, ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಕಾರಣ ಎದುರಾಗಿದೆ ಎಂದು ಸ್ವತಃ ಸಿಇಓ ಸ್ಟೇಫನ್ ಹಾರ್ತಂಗ್ ಅವರು ತಿಳಿಸಿದ್ದಾರೆ ಎಂದು ವರದಿ ಆಗಿದೆ.
ಒಂದು ಕಡೆ ಉದ್ಯೋಗ ಕಡಿತಕ್ಕೆ ಮುಂದಾಗಿರುವ ಬಾಷ್ ಕಂಪನಿಯು ಐರಿಶ್ ಕಂಪನಿ ಜಾನ್ಸನ್ ಕಂಟ್ರೋಲ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಯೋಚನೆ ನಡೆಸಿದೆ ಅಂತಲೂ ಹೇಳಲಾಗುತ್ತಿದೆ. ಇದು ಕಂಪನಿಯ ಐತಿಹಾಸಿಕ ಸ್ವಾಧೀನ ಎಂದು ಬಣ್ಣಿಸಲಾಗಿದೆ. ಕಂಪನಿ ಆದಾಯ ಗಳಿಕೆ ಇಳಿಕೆ ಹಿನ್ನೆಲೆಯಲ್ಲಿ ಸಾವಿರಾರು ಉದ್ಯೋಗಿಗಳ ಕಡಿತಕ್ಕೆ ಬಾಷ್ ನಿರ್ಧರಿಸುವ ಸಂಗತಿ ತಿಳಿದಿದೆ. ಆದರೆ ಯಾವಾಗ ಈ ನಿರ್ಧಾರದಂತೆ ವಜಾಪ್ರಕ್ರಿಯೆ ನಡೆಯಲಿದೆ, ಎಂಬಿತ್ಯಾದಿ ಮಾಹಿತಿ ಗೊತ್ತಾಗಬೇಕಿದೆ.












Click it and Unblock the Notifications