ಬೀದರ್ ಜಿಲ್ಲಾ ಕೋರ್ಟಿನಲ್ಲಿ ವಿವಿಧ ಹುದ್ದೆಗಳಿವೆ, ಅರ್ಜಿಹಾಕಿ

Posted By:
Subscribe to Oneindia Kannada

ಬೀದರ್, ಮಾರ್ಚ್ 20 : ಬೀದರ್ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರು ಜವಾನರ ಹುದ್ದೆ ಸೇರಿದಂತೆ ಒಟ್ಟು 55 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಏಪ್ರಿಲ್ 4ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಬೀದರ್ ಜಿಲ್ಲಾ ಕೋರ್ಟ್ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದು.[ಉಡುಪಿ ಜಿಲ್ಲಾ ಕೋರ್ಟಿನಲ್ಲಿ ವಿವಿಧ ಹುದ್ದೆಗಳಿವೆ, ಅರ್ಜಿಹಾಕಿ]

Bidar district court stenographer typist peon job details

ಹುದ್ದೆಗಳು:
1. ಶೀಘ್ರಲಿಪಿಗಾರ ಒಟ್ಟು ಹುದ್ದೆಗಳು: 5
* ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ.
* ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆ ಸುವ ಹಿರಿಯ ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರಬೇಕು.

2. ಬೆರಳಚ್ಚುಗಾರ ಹುದ್ದೆ: 17
* ವಿದ್ಯಾರ್ಹತೆ: ಬೆರಳಚ್ಚುಗಾರ ಅರ್ಹತೆ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.

3. ಜವಾನ ಹುದ್ದೆ: 20
* ವಿದ್ಯಾರ್ಹತೆ: ಏಳನೇ ತರಗತಿ ಪಾಸ್, ಕನ್ನಡ ಓದಲು ಬರಬೇಕು.

4. ಪ್ರೋಸೆಸ್ ಸರ್ವರ್ ಹುದ್ದೆ: 10
* ವಿದ್ಯಾರ್ಹತೆ: ಮಾನ್ಯತೆ ಪಡೆದ ಬೋರ್ಡ್ ನಲ್ಲಿ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ.

5. ಟೈಪಿಸ್ಟ್ ಕಾಪಿಸ್ಟ್ ಹುದ್ದೆ: 03
* ವಿದ್ಯಾರ್ಹತೆ: ಆಯ್ಕೆ ವಿಧಾನ: ಸ್ಟೆನೋಗ್ರಾಫರ್ ಗೆ ಅನ್ವಯವಾಗುವ ಅರ್ಹತೆ ಇದಕ್ಕೂ ಅನ್ವಯ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

* ಅರ್ಜಿ ಶುಲ್ಕ: ಈ ಎಲ್ಲಾ ಹುದ್ದೆಗಳಿಗೆ ಸಾಮಾನ್ಯ ಅಭ್ಯರ್ಥಿಗಳಿಗೆ 200 ರು. ಮತ್ತು ಇತರೆ ಹಿಂದುಳಿದ, ಎಸ್ ಸಿ ಮತ್ತು ಎಸ್ ಟಿ ಅಭ್ಯರ್ಥಿಗಳಿಗೆ 100 ರು ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ.

* ಅರ್ಜಿ ಸಲ್ಲಿಸಬೇಕಾದ ವಿಳಾಸ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೀದರ್ ಜಿಲ್ಲೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bidar District Court has published notification for the recruitment of 55 Stenographer, Typist, Typist Copyist, Process Server & Peon vacancies. Eligible candidates may apply in prescribed application format on or before 03-04-2017.
Please Wait while comments are loading...