ಬಿಎಚ್ಇಎಲ್ ನಲ್ಲಿ 320 ಹುದ್ದೆಗಳಿವೆ ಈಗಲೇ ಅರ್ಜಿ ಹಾಕಿ
ಬೆಂಗಳೂರು, ಅಕ್ಟೋಬರ್ 01: ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕ್ ಲಿಮಿಟೆಡ್ (ಬಿಎಚ್ಇಎಲ್) ನಲ್ಲಿ 320ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಹಾಕಬಹುದಾಗಿದೆ. ಟೆಕ್ನಿಕಲ್ ಅಪ್ರೆಂಟಿಶಿಪ್ ಹುದ್ದೆಗೆ ಅರ್ಜಿ ಹಾಕುವವರು ಅಕ್ಟೋಬರ್ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು : ಭಾರತ್ ಹೆವಿ ಎಲೆಕ್ಟ್ರಿಕ್ ಲಿಮಿಟೆಡ್ (ಬಿಎಚ್ಇಎಲ್)
ಒಟ್ಟು ಹುದ್ದೆಗಳ ಸಂಖ್ಯೆ: 320
ಹುದ್ದೆ ಹೆಸರು: ತಾಂತ್ರಿಕ ಶಿಶಿಕ್ಷು(Technician Apprentice)
ಹುದ್ದೆ ಸ್ಥಳ : ಬೆಂಗಳೂರು (ಕರ್ನಾಟಕ)
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31 ಅಕ್ಟೋಬರ್ 2018.

ವಿದ್ಯಾರ್ಹತೆ: ಅಭ್ಯರ್ಥಿಗಳು 2016/2017/2018ರ ಬ್ಯಾಚಿನಲ್ಲಿ ಡಿಪ್ಲೋಮಾ ಪೂರೈಸಿರಬೇಕು. 1/01/2016ರ ನಂತರ ಅರ್ಹತಾ ಸುತ್ತಿನ ಪರೀಕ್ಷೆ ಬರೆದಿರಬೇಕು.
ವಯೋಮಿತಿ :
ಸಾಮಾನ್ಯ ವರ್ಗ : 18 ರಿಂದ 27 ವರ್ಷ
ಒಬಿಸಿ : 18 ರಿಂದ 30 ವರ್ಷ
ಎಸ್ ಸಿ/ ಎಸ್ಟಿ : 18 ರಿಂದ 32 ವರ್ಷ
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ: ಅರ್ಹ, ಆಸಕ್ತ ಅಭ್ಯರ್ಥಿಗಳು ಸೂಕ್ತ ಅರ್ಜಿ ಮಾದರಿಯನ್ನು ಬಿಎಚ್ ಇಎಲ್ ವೆಬ್ ತಾಣದಿಂದ ಪಡೆದುಕೊಂಡು ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದು.
ಡಿಜಿಎಂ/ ಎಚ್ಆರ್
ಭಾರತ್ ಹೆವಿ ಎಲೆಕ್ಟ್ರಿಕ್ ಲಿಮಿಟೆಡ್
ಎಲೆಕ್ಟ್ರಾನಿಕ್ಸ್ ವಿಭಾಗ, ಮೈಸೂರು ರಸ್ತೆ
ಬೆಂಗಳೂರು -560 026.
ತುಂಬಿದ ಅರ್ಜಿಯನ್ನು ಅಂಚೆ ಮೂಲಕ ಅಥವಾ ಖುದ್ದು ಸಲ್ಲಿಸಬಹುದು. ಅಗತ್ಯ ದಾಖಲೆ ಪತ್ರಗಳನ್ನು ಲಗತ್ತಿಸಿರತಕ್ಕದ್ದು
ಮುಖ್ಯ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಅಕ್ಟೋಬರ್ 31, 2018
ವೈಯಕ್ತಿಕ ಸಂದರ್ಶನದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.












Click it and Unblock the Notifications