Layoffs: ಉದ್ಯೋಗ ವಜಾ ವೇಳೆ ನೌಕರರನ್ನು ಕುಟುಂಬದವರಂತೆ ಕಾಣಬೇಕು: ಬೆಂಗಳೂರು CEO
Layoffs News: ಐಟಿ ಸೇರಿದಂತೆ ಕಾರ್ಪೋರೇಟ್ ಹಾಗೂ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಉದ್ಯೋಗಿಗಳನ್ನು ನಿರ್ಧಾಕ್ಷಿಣ್ಯವಾಗಿ ತೆಗೆದು ಹಾಕಲಾಗುತ್ತದೆ. ನೀವೆಲ್ಲರು ನಮ್ಮ ಕುಟುಂಬವಿದ್ದಂತೆ ಎಂದು ಕೆಲಸ ಮಾಡಿಸಿಕೊಳ್ಳುವ ಉದ್ಯೋಗದಾತರು ನೌಕರರನ್ನು ಕೆಲಸದಿಂದ ತೆಗೆಯುವಾಗ ಉತ್ತಮವಾಗಿ ನಡೆಸಿಕೊಳ್ಳುವುದೇ ಇಲ್ಲ. ಈ ಕುರಿತು ಬೆಂಗಳೂರು ಮೂಲಕ ಓಕ್‌ಕ್ರೆಡಿಟ್ ಸಿಇಒ ಹರ್ಷ ಪೋಖರ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಜಾಗತಿಕವಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳಲ್ಲಿ ಉದ್ಯೋಗ ವಜಾ ಹೆಚ್ಚಾಗುತ್ತಲೇ ಇದೆ. ಕಂಪನಿಗಳು ನೌಕರರನ್ನು ನೇಮಕ ಮಾಡಿಕೊಳ್ಳುವಾಗ ಹೇಗೆ ನಡೆಸಿಕೊಳ್ಳುತ್ತವೆಯೋ ಅದೇ ರೀತಿ ಅವರನ್ನು ಉದ್ಯೋಗದಿಂದ ತೆಗೆಯುವಾಗ ನಡೆಸಿಕೊಳ್ಳುವುದಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.

ಸದರಿ ವರ್ಷ 120,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದರಲ್ಲಿ ಅನೇಕರಿಗೆ ಕರೆ ಮಾಡದೇ ಉದ್ಯೋಗ ಕಟ್ ಮಾಡಲಾಗಿದೆ. ಇನ್ನು ಕೆಲವು ನೌಕರರಿಗೆ ಬ್ಲಾಕ್ ಮಾಡಲಾದ ಇಮೇಲ್ ನಿಂದ ತಾವು ಕೆಲಸ ಕಳೆದುಕೊಂಡಿದ್ದನ್ನು ಕಂಡು ಕೊಂಡಿದ್ದಾರೆ. ಕೆಲವರಿಗೆ ಕೆಲಸದ ಅವಧಿಯಲ್ಲೇ ಗೊತ್ತಾಗಿ ಕೆಲಸ ಬಿಟ್ಟು ಹೋಗಿದ್ದಾರೆ. ಇದೆಲ್ಲವು ಉದ್ಯೋಗ ಕಡಿತದ ಸಂದರ್ಭದಲ್ಲಿ ನಡೆದುಕೊಳ್ಳುವ ಅಮಾನವೀಯ ನಡೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉದ್ಯೋಗ ಕಡಿತದ ವೇಳೆ ನೌಕರರೊಂದಿಗೆ ಸಂಭಾಷಣೆಗಳನ್ನು ನಡೆಸುವುದು ಕಷ್ಟ ಎಂಬುದು ತಿಳಿದಿದೆ. ಆದರೆ ನೀವು ಸಂಸ್ಥಾಪಕರಾಗಿದ್ದರೆ, ಕಂಪನಿ ಮುಖ್ಯಸ್ಥರಾಗಿದ್ದರು. ಯಾರನ್ನಾದರೂ ನೇಮಕ ಮಾಡಿಕೊಳ್ಳುವಾಗ "ಕುಟುಂಬ" ಎಂದು ಕರೆಯುತ್ತೀರಿ. ಅದೇ ರೀತಿ ನೌಕರರನ್ನು ಹೊರ ಕಳಿಸುವಾಗ ಕುಟುಂಬದವರಂತೆ ಕಳುಹಿಸಬೇಕು. ನೋಡಿಕೊಳ್ಳಬೇಕು ಎಂದು ಅವರು ಹೇಳಿದರು. ಈ ಕುರಿತು ಅವರು ಲಿಂಕ್ಡ್ ಇನ್ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು ಸಿಇಒ ಪೋಸ್ಟ್‌ನಲ್ಲಿ ಏನಿದೆ?
ಬೆಂಗಳೂರು ಮೂಲಕ ಸಿಇಓ ಅವರು ತಮ್ಮ ಕಂಪನಿಯಿಂದ ಒಂದೂವರೆಗೆ ವರ್ಷದ ಹಿಂದೆ 70 ಜನರ ಉದ್ಯೋಗ ಕಡಿತ ಮಾಡಲಾಗಿದೆ. ನಮ್ಮಲ್ಲೂ ಉದ್ಯೋಗ ವಜಾ ಮಾಡಲಾಗಿದೆ. ಕಂಪನಿಯಲ್ಲಿ ತುಂಬಾ ವೇಗವಾಗಿ ನೇಮಕ ಮಾಡಿಕೊಳ್ಳಲಾಯಿತು. ವೇಗದ ನೇಮಕದಿಂದ ತಪ್ಪು ಮಾಡಲಾಯಿತು. ಸಂಸ್ಥಾಪಕನಾಗಿ ಈ ತಪ್ಪು ಆಗಬಾರದಿತ್ತು. ಆಗಿದ್ದನ್ನು ಸುಸೂತ್ರ ರೀತಿಯಲ್ಲಿ ಸರಿಪಡಿಸಲು ಶ್ರಮಿಸಿದ್ದಾರೆ.
70 ನೌಕರರನ್ನು ವಜಾಗೊಳಿಸುವಾಗ ಪ್ರತಿಯೊಬ್ಬರಲ್ಲೂ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಆಗಿರುವ ತಪ್ಪುಗಳು ಏನು? ಬೆಳವಣಿಗೆ, ಈ ನಿರ್ಧಾರ ಕಂಪನಿ ತೆಗೆದುಕೊಳ್ಳು ಕಾರಣವೇನು?. ವಜಾಗೆ ಪ್ರಮುಖ ಕಾರಣ ಎಲ್ಲವನ್ನು ಹೊರಕ್ಕೆ ಕಳುಹಿಸುವ ನೌಕರರ ಜೊತೆಗೆ ಮಾತನಾಡಿದ್ದೇನೆ. ಜೊತೆಗೆ ಅವರಿಗೆ 3 ತಿಂಗಳ ನೋಟಿಸ್ ಅವಧಿ ನೀಡಿದ್ದೇವೆ. ಅಗತ್ಯ ಎಲ್ಲ ಸಹಾಯ, ಸಹಕಾರ ನೀಡಿ ಕಡಿತಗೊಳಿಸಲಾಗಿದೆ. ನೇಮಕ ಮಾಡಿಕೊಂಡಂತೆ, ವಜಗೊಳಿಸಲಾಗಿದೆ ಎಂದರು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಒಟ್ಟು ವಜಾ ನೌಕರರಲ್ಲಿ ನೋಟಿಸ್ ಅವಧಿ ಮುಗಿಯುವ ಮೊದಲು ಕೆಲಸ ಮುಗಿಸಿದ 67 ಕಾರ್ಮಿಕರಿಗೆ ಸಹಾಯ ಮಾಡಿದ್ದೇವೆ. ಉಳಿದ ಮೂವರಿಗೆ ಎರಡು ತಿಂಗಳ ಹೆಚ್ಚುವರಿ ವೇತನ ನೀಡಿ ಕಳುಹಿಸಲಾಗಿದೆ ಎಂದರು.
ಇತ್ತೀಚೆಗೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು, ಉದ್ಯೋಗಿಗಳನ್ನು ಮನುಷ್ಯರಂತೆ ನೋಡಿಕೊಳ್ಳಬೇಕು. ಅವರಿಗೆ ಕಂಪನಿ ಲಾಭ ಹಂಚಬೇಕು. ಅವರು ನಮ್ಮಂತೆ ಮನುಷ್ಯಂತೆ ಕಾಣಬೇಕು ಎಂದು ಸಲಹೆ ನೀಡಿದ್ದರು.











Click it and Unblock the Notifications