ಬಿಬಿಎಂಪಿಯಲ್ಲಿ ವಾಕ್ ಇನ್ ಸಂದರ್ಶನ; 420 ಹುದ್ದೆಗಳು
ಬೆಂಗಳೂರು, ಸೆಪ್ಟೆಂಬರ್ 03; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಹುದ್ದೆಗಳನ್ನು ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ 1 ವರ್ಷದ ಅವಧಿಗೆ ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ.
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಅಡಿಯಲ್ಲಿ, ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ (ರಿ) ವ್ಯಾಪ್ತಿಯಲ್ಲಿ ಹಾಗೂ ಆರ್. ಸಿ. ಹೆಚ್ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ 420 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ನೇರ ಸಂದರ್ಶನದ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 35 ವರ್ಷ, 2ಎ/ 2ಬಿ/ 3ಎ/ 3ಬಿ ವರ್ಗಕ್ಕೆ 40 ವರ್ಷಗಳು.

ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನ ಕಡ್ಡಾಯವಾಗಿದೆ. ಆಸಕ್ತರು ಸಂಬಂಧಿಸಿದಂ ಮೂಲ ದಾಖಲೆಗಳ ಜೊತೆ ಸೆಪ್ಟೆಂಬರ್ 16 ರಿಂದ 22ರ ತನಕ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಹೆಲ್ತ್ ಆಫೀಸರ್ (ಪುರುಷ) 217 ಹುದ್ದೆಗಳು, ಫಿಜಿಶಿಯನ್ 5, ರೆಡಿಯೋಲಜಿಸ್ಟ್ 5, ಓಟಿ ಟೆಕ್ನಿಶಿಯನ್ 1, ಸ್ಟಾಫ್ ನರ್ಸ್ 18, ಫಾರ್ಮಸಿಸ್ಟ್ 18, ಲ್ಯಾಬ್ ಟೆಕ್ನಿಶಿಯನ್ 1, ವ್ಯಾಕ್ಸಿನೇಷನ್ ಸೂಪರ್ ವೈಸರ್ 1, ತಜ್ಞರು 1, ಮೆಡಿಕಲ್ ಆಫೀಸರ್ 3, ಸ್ಟಾಫ್ ನರ್ಸ್ (ಮಕ್ಕಳ ಆರೋಗ್ಯ) 20, ಸ್ಟಾಫ್ ನರ್ಸ್ (ಆರ್‌ಬಿಎಸ್‌ಕೆ) 2, ಕಮ್ಯುನಿಟಿ ನರ್ಸ್ 1 ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ನೇರ ಸಂದರ್ಶನ ನಡೆಯುವ ಸ್ಥಳ; Naukarara Bhavana, BBMP Head Office, Bengaluru, Karnataka.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 080-22110445 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಪಾಲಿಕೆಯ ವೆಬ್ ಸೈಟ್ http://bbmp.gov.in ನಂಬರ್ ಸಂಪರ್ಕಿಸಲು ಕೋರಿದೆ.












Click it and Unblock the Notifications