BBMP Recruitment: ಅತಿಥಿ ಶಿಕ್ಷಕರು-ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶ, ವೇತನ ವಿವರ
ಬೆಂಗಳೂರು, ಜೂನ್ 09: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯಲ್ಲಿರುವ ಶಾಲಾ ಕಾಲೇಜುಗಳಿಗೆ ಹೊರಗುತ್ತಿಗೆ ಆಧಾರದಡಿ 'ಅತಿಥಿ ಶಿಕ್ಷಕರು' ಹಾಗೂ 'ಅತಿಥಿ ಉಪನ್ಯಾಸಕರ' ನೇಮಕಕ್ಕೆ ಆದೇಶವನ್ನು ಶನಿವಾರ ಹೊರಡಿಸಿದೆ.
ಬೆಂಗಳೂರು ವ್ಯಾಪ್ತಿಯಲ್ಲಿರುವ ಬಿಬಿಎಂಪಿಯ ಶಾಲಾ ಕಾಲೇಜುಗಳಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ' (SDMC) ಹಾಗೂ 'ಕಾಲೇಜು ಅಭಿವೃದ್ಧಿ ಸಮಿತಿ' (CDC) ಮುಖೇನ ಹೊರಗುತ್ತಿಗೆ ಆಧಾರದಲ್ಲಿ ಅತಿಥಿ ಶಿಕ್ಷಕರು-ಉಪನ್ಯಾಸಕರ ನೇಮಿಸಿಕೊಳ್ಳಬೇಕು ಎಂದು ಗಡುವು ನೀಡಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶದ ಮೂಲಕ ಸೂಚನೆ ನೀಡಿದ್ದಾರೆ.

ಜೂನ್ 16ರೊಳಗೆ ನೇಮಕಕ್ಕೆ ಸೂಚನೆ
2024-2025ರ ಶೈಕ್ಷಣಿಕ ಸಾಲಿಗೆ ಬಿಬಿಎಂಪಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅತಿಥಿ ಶಿಕ್ಷಕರು ಇದೇ ಜೂನ್ 16ರೊಳಗೆ ನೇಮಕ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಈ ಹಿಂದೆ ಬಿಬಿಎಂಪಿ ಸೆಕ್ಯೂರಿಟಿ ಏಜೆನ್ಸಿ ಮೂಲಕ ಹೊರ ಗುತ್ತಿಗೆ ಆಧಾರದಲ್ಲಿ ಶಿಕ್ಷಕರ ನೇಮಕಕ್ಕೆ ನಿರ್ಧರಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ಕೈ ಬಿಟ್ಟ ಬಿಬಿಎಂಪಿ, ಎಸ್‌ಡಿಎಂಸಿ ಹಾಗೂ ಸಿಡಿಸಿ ಮೂಲಕ ನೇಮಕಾತಿ ಮುಂದಾಗಿ ಆದೇಶ ಮಾಡಿದೆ.
ಶಿಶುವಿಹಾರ ಶಾಲೆಗಳಿಗೆ ಬೇಕಾಗಿರುವ ಶಿಕ್ಷಕರನ್ನು ಶಿಶಿವಿಹಾರಗಳಿಗೆ ಹತ್ತಿರವಿರುವ ಪ್ರಾಥಮಿಕ ಶಾಲಾ ಮುಖ್ಯಸ್ಥರು ಎಸ್‌ಡಿಎಂಸಿ ಮೂಲಕ ನಿಯೋಜಿಸಬೇಕು ಎಂದು ಪಾಲಿಕೆ ಹೇಳಿದೆ.
ಇದರೊಂದಿಗೆ ಶಾಲಾ-ಕಾಲೇಜುಗಳಲ್ಲಿ ಸೂಚನಾ ಫಲಕದಲ್ಲಿ ಪ್ರಕಟಣೆ ಹೊರಡಿಸಬೇಕು. ನೇಮಕಕ್ಕೆ ಬರುವ ಅರ್ಜಿಗಳನ್ನು ಸಮಿತಿಯಲ್ಲಿ ಮಂಡಿಸಿ ನೇಮಕ ಮಾಡಿಕೊಳ್ಳಬೇಕು. 2017ರಲ್ಲಿ ಕೌನ್ಸಿಲ್ ನಿರ್ಣಯದಂತೆ ಗೌರವ ಸಂಭಾವನೆ ನಿಗದಿ ಪಡಿಸಲಾಗಿದೆ.
ಯಾವ ಶಿಕ್ಷಕರಿಗೆ ಎಷ್ಟಿದೆ ವೇತನ? ಪಟ್ಟಿ
ಅತಿಥಿ ಶಿಕ್ಷಕರು (ಶಿಶುವಿಹಾರ/ಪ್ರಾಥಮಿಕ ಶಾಲೆ) - ಮಾಸಿಕ ವೇತನ 19336 ರೂ.
ಅತಿಥಿ ಶಿಕ್ಷಕರು (ಪ್ರೌಢಶಾಲೆ) - ಮಾಸಿಕ ವೇತನ 22840 ರೂ.
ಅತಿಥಿ ಉಪನ್ಯಾಸಕ (ಪಿಯುಸಿ) - ಮಾಸಿಕ ವೇತನ 22567 ರೂ.
ಅತಿಥಿ ಉಪನ್ಯಾಸಕ (ಪದವಿ) - ಮಾಸಿಕ ವೇತನ 27897 ರೂ.
ಅತಿಥಿ ಉಪನ್ಯಾಸಕ (ಸ್ನಾತಕೋತ್ತರ ಪದವಿ)- ಮಾಸಿಕ ವೇತನ 30897
ಅತಿಥಿ ಉಪನ್ಯಾಸಕ (ಗಣಕಯಂತ್ರ)- ಮಾಸಿಕ ವೇತನ 22053 ರೂ.
ಸದ್ಯ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜುಗಳು ಜೂನ್ 01ರಿಂದ ಆರಂಭವಾಗಿವೆ. ಈ ಕಾರಣದಿಂದ ಜೂನ್ 16ರೊಳಗೆ ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವಂತೆ ಬಿಬಿಎಂಪಿ ಕಟ್ಟುನಿಟ್ಟಿನ ಸೂಚನೆ ನೀಡಿ ಆದೇಶ ಹೊರಡಿಸಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ











Click it and Unblock the Notifications