ಬಿಬಿಎಂಪಿಯಲ್ಲಿ ಕೆಲಸ ಖಾಲಿ ಇದೆ; 40 ಸಾವಿರ ರೂ. ವೇತನ
ಬೆಂಗಳೂರು, ಡಿಸೆಂಬರ್ 20 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 42 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಡಿಸೆಂಬರ್ 23ರಂದು ನೇರ ಸಂದರ್ಶನದಲ್ಲಿ ಪಾಲ್ಗೊಂಡು ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಬಿಬಿಎಂಪಿ ಪರಿಸರ ಇಂಜಿನಿಯರ್ 30, ಸಿವಿಲ್ ಇಂಜಿನಿಯರ್ 12 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅಭ್ಯರ್ಥಿಗಳು ಆಯಾ ಕ್ಷೇತ್ರದಲ್ಲಿ ಬಿಇ/ಎಂಟೆಕ್ ಪಾಸಾಗಿರಬೇಕು. ಎಲ್ಲಾ ಸೆಮಿಸ್ಟರ್/ಶೈಕ್ಷಣಿಕ ವರ್ಷಗಳಲ್ಲಿ ಸರಾಸರಿ ಒಟ್ಟು ಶೇ 60 ಅಂಕಗಳನ್ನು ಹೊಂದಿರಬೇಕು.
ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ, ಗರಿಷ್ಠ 35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಕನ್ನಡ ಮತ್ತು ಇಂಗ್ಲಿಶ್ ಬರೆಯಲು, ಓದಲು ತಿಳಿದಿರಬೇಕು. ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬೇಕು. ಮೆರಿಟ್ ಹಾಗೂ ಅನುಭವದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಮಾಸಿಕ ವೇತನ ಶ್ರೇಣಿ 40,000 ರೂ.ಗಳು.
ಡಿಸೆಂಬರ್ 23ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ಹೆಸರು ನೋಂದಾಯಿಸಿಕೊಳ್ಳಬೇಕು. ಅಂತಿಮ ಆಯ್ಕೆ ವೇಳೆ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ ಅಥವ ಕಡಿತಗೊಳಿಸುವ ಹಕ್ಕನ್ನು ಬಿಬಿಎಂಪಿ ಹೊಂದಿರುತ್ತದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಲ್ಲಾ ಅಗತ್ಯ ದಾಖಲಾತಿಗಳೊಂದಿಗೆ ಫೋಟೋ, ಗುರುತಿನ ಚೀಟಿ ಮತ್ತು ಎಲ್ಲಾ ಝೆರಾಕ್ಸ್ ಪ್ರತಿ, 2 ಪಾಸ್ ಪೋರ್ಟ್ ಅಳತೆಯ ಫೋಟೋದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಸಂದರ್ಶನ ನಡೆಯುವ ಸ್ಥಳ: ಐಪಿಪಿ ಸೆಂಟರ್, 16ನೇ ಅಡ್ಡರಸ್ತೆ, ಚೌಡಯ್ಯ ಮೆಮೋರಿಯಲ್ ಹಾಲ್ ಎದುರು, ಮಲ್ಲೇಶ್ವರ, ಬೆಂಗಳೂರು 560003.
ಹೆಚ್ಚಿನ ಮಾಹಿತಿಗಾಗಿ ಪರಿಸರ ಇಂಜಿನಿಯರ್ 22975541 ಮತ್ತು ಸಿವಿಲ್ ಇಂಜಿನಿಯರ್ ಹುದ್ದೆಗೆ 9480683337 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications