ಬಸವೇಶ್ವರ ಸಹಕಾರಿ ಬ್ಯಾಂಕ್ ಲಿಮಿಟೆಡ್ ನೇಮಕಾತಿ
ಬಾಗಲಕೋಟೆ, ಆಗಸ್ಟ್ 31; ಬಸವೇಶ್ವರ ಸಹಕಾರ ಬ್ಯಾಂಕ್ ನಿಯಮಿತ, ಜಮಖಂಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಆರ್ಹರು ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಸೆಪ್ಟೆಂಬರ್ 4 ಕೊನೆಯ ದಿನವಾಗಿದೆ.
ಕಿರಿಯ ಸಹಾಯಕರು 1, ಸಿಪಾಯಿ/ ರಾತ್ರಿ ಕಾವಲುಗಾರ 6 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬಾಗಲಕೋಟೆಯಲ್ಲಿ ಕೆಲಸ ಮಾಡಬೇಕಿದೆ.

ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳಾಗಿರಬೇಕು. ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು.
ಕಿರಿಯ ಸಹಾಯಕ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಸಿಪಾಯಿ/ ರಾತ್ರಿ ಕಾವಲುಗಾರ ಹುದ್ದೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಕಿರಿಯ ಸಹಾಯಕ ಹುದ್ದೆಗೆ ವೇತನ 21,400- 42,000 ರೂ.ಗಳು, ಸಿಪಾಯಿ/ ರಾತ್ರಿ ಕಾವಲುಗಾರ ಹುದ್ದೆಗೆ 21,400 ರಿಂದ 42,000 ರೂ. ವೇತನ ನಿಗದಿ ಮಾಡಲಾಗಿದೆ.
ಅರ್ಜಿಗಳನ್ನು ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಎಸ್‌ಸಿ/ ಎಸ್‌ಟಿ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 250 ರೂ. ಮತ್ತು ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು 500 ರೂ. ಶುಲ್ಕ ಪಾವತಿಸಬೇಕು.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಭರ್ತಿ ಮಾಡಿ, ನಿಗದಿತ ದಾಖಲೆಗಳ ಜೊತೆ ಸಲ್ಲಿಕೆ ಕೆಳಗಿನ ವಿಳಾಸಕ್ಕೆ ಕಳಿಸಬೇಕು.
ಅರ್ಜಿ ಸಲ್ಲಿಕೆಗೆ ವಿಳಾಸ Member Staff Recruitment & Manager, Basaveshwara Co-operative Bank Limited, Parthanahalli Complex, Opposite to Bhagat Singh Complex, 1st Floor, Theatre Road, Jamakhandi-587301, Bagalkot, Karnataka.
ಅಭ್ಯರ್ಥಿಗಳಿಗೆ ನಿಯರುಗಳು
* ಬ್ಯಾಂಕಿನಲ್ಲಿ ಹಣ ಪಾವತಿಸಿ ಅರ್ಜಿ ಪಡೆದುಕೊಂಡ ಪಾವತಿಯನ್ನು ಅರ್ಜಿಯ ಜೊತೆಗೆ ಕಡ್ಡಾಯವಾಗಿ ಲಗತ್ತಿಸಬೇಕು.
* ನೇಮಕಾತಿಯನ್ನು ಯಾವುದೇ ಕಾರಣವನ್ನು ನೀಡದೆ ಮುಂದೂಡುವ, ರದ್ದುಪಡಿಸುವ, ನಿಬಂಧನೆಗಳನ್ನು ಹಾಗೂ ಹುದ್ದೆಗಳ ಸಂಖ್ಯೆಯನ್ನು ಬದಲಾಯಿಸುವ ಸಂಪೂರ್ಣ ಹಕ್ಕನ್ನು ನೇಮಕಾತಿ ಸಮಿತಿ ಕಾಯ್ದಿರಿಸಿಕೊಂಡಿದೆ.
* ಯಾವುದೇ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆ ಬಂದಿಲ್ಲವೆಂದರೆ ಅರ್ಹತೆ ಹೊಂದಿಲ್ಲವೆಂದು ತಿಳಿಯಬೇಕು, ಈ ಕುರಿತು ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ.
* ಆಯ್ಕೆಗೊಂಡ ಅಭ್ಯರ್ಥಿಗಳು ಒಂದು ವರ್ಷ ಪರಿಕ್ಷಾರ್ಥ ಅವಧಿಯಲ್ಲಿ ಇರಬೇಕಾಗುವುದು ಮತ್ತು ಆಯ್ಕೆಗೊಂಡ ಅಭ್ಯರ್ಥಿಗಳು ಬ್ಯಾಂಕು ಸೂಚಿಸಲ್ಪಟ್ಟಂತಹ ಭದ್ರತೆಯೊಂದಿಗೆ ನಿಯೋಜಿಸಿದ ಶಾಖೆಯಲ್ಲಿ ಕಾರ್ಯನಿರ್ವಹಿಸಬೇಕು.
* ಅರ್ಜಿಯೊಂದಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ರೂ. 500 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರೂ. 250 ಗಳ ಮೊತ್ತದ ಡಿಡಿ/ ಪೇ ಆರ್ಡರ್/ ಬೋಸ್ಟಲ್ ಆರ್ಡರ್ ಅನ್ನು ಲಗತ್ತಿಸಬೇಕು, ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಪ್ರವೇಶ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.
* ಡಿಡಿ ಪೇಆರ್ಡರ್/ ಪೋಸ್ಟಲ್ ಆರ್ಡರ್ ಅನ್ನು ಸಂಚಾಲಕ ಸದಸ್ಯರು ಸಿಬ್ಬಂದಿ ನೇಮಕಾತಿ ಸಮಿತಿ, ಬಸವೇಶ್ವರ ಸಹಕಾರ ಬ್ಯಾಂಕ್ ನಿಯಮಿತ ಜಮಖಂಡಿಗೆ ಈ ಹೆಸರಿನಲ್ಲಿ ಸಲ್ಲಿಸಬೇಕು.
* ಸಂದರ್ಶನದ ಕರೆಯೋಲೆ ನಿಗದಿತ ಅವಧಿಯಲ್ಲಿ ಯಾವುದೇ ಕಾರಣಕ್ಕಾಗಿ ತಲುಪದಿದ್ದಲ್ಲಿ ಬ್ಯಾಂಕು ಜವಾಬ್ದಾರ ಇರುವದಿಲ್ಲ.
* ಅಪೂರ್ಣ, ಸ್ಪಷ್ಟವಾಗಿ ಬರೆಯದ, ಸಹಿ ಮಾಡದೇ ಇರುವ, ಅವಶ್ಯಕ ದಾಖಲಾತಿಗಳನ್ನು ಲಗತ್ತಿಸದ ಹಾಗೂ ಅವಧಿ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವದು.
* ಆಯ್ಕೆಗೊಂಡ ಅಭ್ಯರ್ಥಿಗಳು ಬ್ಯಾಂಕಿನಿಂದ ಸೂಚಿಸಲಾದ ನಗದು ಭದ್ರತೆ ಠೇವಣೆ ಹಾಗೂ ಇಬ್ಬರು ಗಣ್ಯ ವ್ಯಕ್ತಿಗಳಿಂದ ನಷ್ಟಭರ್ತಿ ಬಾಂಡ್ ನೀಡಬೇಕು.












Click it and Unblock the Notifications