ಬಳ್ಳಾರಿಯಲ್ಲಿ ಮಿನಿ ಉದ್ಯೋಗ ಮೇಳ, ಚಿತ್ರದುರ್ಗದಲ್ಲಿ ಸಹಾಯಕ ಹುದ್ದೆ

ಬಳ್ಳಾರಿ,ಜೂ.17: ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಜೂ.18ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಮಯ ಕಚೇರಿಯ ಉದ್ಯೋಗಾಧಿಕಾರಿಗಳಾದ ಪಿ.ಎಸ್.ಹಟ್ಟಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಮೇಳದಲ್ಲಿ 4 ರಿಂದ 5 ಕಂಪನಿಗಳು ಭಾಗವಹಿಸುತ್ತಿದ್ದು, ಇವರು ತಮ್ಮಲ್ಲಿನ ಖಾಲಿ ಇರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ.

ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಯಾವುದೇ ಪದವಿ ಹೊಂದಿರಬೇಕು.
ಈ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಪ್ರತಿ, ಮತ್ತು ಸ್ವ-ವಿವರ ಗಳೊಂದಿಗೆ ಬಳ್ಳಾರಿಯ ತಾಲ್ಲೂಕು ಕಚೇರಿ ಹಿಂಭಾಗದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅಭ್ಯರ್ಥಿಗಳು ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿಯ ಜಿಲ್ಲಾ ಉದ್ಯೋಗ ವಿನಮಯ ಕಚೇರಿ ಹಾಗೂ ಮೊ.8073365184 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Ballari: Mini Job Fair on June 18
ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ
*****
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ಹಿರೇಗುಂಟನೂರು ಹೋಬಳಿ ಲಕ್ಷ್ಮೀ ಸಾಗರದ ಕಂದಾಯ ವೃತ್ತದಲ್ಲಿ ಖಾಲಿ ಇರುವ ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 28 ಅರ್ಜಿ ಸಲ್ಲಿಸಲು ಕೊನೆದಿನ.

ಲಕ್ಷ್ಮೀ ಸಾಗರದ ಕಂದಾಯ ವೃತ್ತದ ಓಬಪ್ಪ ಬಿನ್ ಬೋರಪ್ಪ ಅವರು 2022ರ ಮೇ 31 ರಂದು ನಿವೃತ್ತಿಗೊಳಿಸಲಾಗಿರುತ್ತದೆ. ಇವರ ನಿವೃತ್ತಿಯಿಂದ ಖಾಲಿ ಇರುವ ಹಿರೇಗುಂಟನೂರು ಹೋಬಳಿ ಲಕ್ಷ್ಮೀ ಸಾಗರ ಕಂದಾಯ ವೃತ್ತದ ಗ್ರಾಮ ಸಹಾಯಕ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಈ ಹುದ್ದೆಯು ತಾತ್ಕಾಲಿಕವಾಗಿರುತ್ತದೆ.

ಅರ್ಹತೆಗಳು: ಅಭ್ಯರ್ಥಿಗೆ ಅರ್ಜಿ ಸಲ್ಲಿಸುವ ದಿನಾಂಕಕ್ಕೆ 25 ವರ್ಷ ಪೂರ್ಣಗೊಂಡಿರಬೇಕು, ಕನ್ನಡ ಓದಲು ಮತ್ತು ಮಾತನಾಡಲು ಬರಬೇಕು. ವಿದ್ಯಾಭ್ಯಾಸದ ಬಗ್ಗೆ ಅಂಕಪಟ್ಟಿ, ಟಿ.ಸಿ. ಲಗತ್ತಿಸುವುದು, ಈ ಹಿಂದೆ ಬರಾವರ್ದ ವಂಶಸ್ಥರಾಗಿದದ್ದಲ್ಲಿ ದಾಖಲೆ ಸಲ್ಲಿಸುವುದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೊದಲ ಅದ್ಯತೆ, ಯಾವುದೇ ಕ್ರಿಮಿನಲ್ ಮೊಕದ್ದಮೆಯ ಹಿನ್ನೆಲೆಯುಳ್ಳವರಾಗಿರಬಾರದು. (ಪೊಲೀಸ್ ಇಲಾಖೆಯಿಂದ ದೃಢೀಕರಣ ಪತ್ರ ಲಗತ್ತಿಸುವುದು) ಕಂದಾಯ ವೃತ್ತದ ನಿವಾಸಿಯಾಗಿರಬೇಕು ಎಂದು ಚಿತ್ರದುರ್ಗ ತಹಶೀಲ್ದಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+