ಚಿತ್ರದುರ್ಗದಲ್ಲಿ ಮಾ.18, 19ರಂದು ಸೇನಾ ನೇಮಕಾತಿ

Posted By: Gururaj
Subscribe to Oneindia Kannada

ಚಿತ್ರದುರ್ಗ, ಮಾರ್ಚ್ 10 : ಭಾರತೀಯ ವಾಯುಪಡೆಯ ಗ್ರೂಪ್-ವೈ ಟ್ರೇಡ್‍ಗಳ ಏರ್‍ಮೆನ್ ಹುದ್ದೆಗಳ ಭರ್ತಿಗಾಗಿ ಮಾ. 18 ಮತ್ತು 19 ರಂದು ಚಿತ್ರದುರ್ಗದಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ.

ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ.

ಗ್ರೂಪ್-ವೈ ಟ್ರೇಡ್‍ಗಳ (ಮೆಡಿಕಲ್ ಅಸಿಸ್ಟೆಂಟ್) ಏರ್‍ಮೆನ್ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ. ಮಾ. 18 ರಂದು ದೈಹಿಕ ಕ್ಷಮತೆ ಹಾಗೂ ಲಿಖಿತ ಪರೀಕ್ಷೆ ನಡೆಯಲಿದೆ.

Army recruitment rally in Chitradurga on March 18, 19

ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರಿಗೆ ಮಾ. 19 ರಂದು ದೈಹಿಕ ಪರೀಕ್ಷೆ ನಡೆಯಲಿದೆ. 1998ರ ಜನವರಿ 12 ರಿಂದ 2002 ರ ಜನವರಿ 02 ರ ನಡುವೆ ಜನಿಸಿದ ಕನಿಷ್ಠ 152.5 ಸೆಂಮೀ. ಎತ್ತರದ ಕರ್ನಾಟಕ ರಾಜ್ಯದ ಅವಿವಾಹಿತ ಪುರುಷರು ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಬಹುದು.

ಭಾಗವಹಿಸಲು ಅಭ್ಯರ್ಥಿಗಳು ಕೇಂದ್ರ/ ರಾಜ್ಯ ಶಿಕ್ಷಣ ಮಂಡಳಿಗಳು ಅನುಮೋದಿಸಿದ ಇಂಟರ್‌ಮಿಡಿಯಟ್, ಪಿ.ಯು.ಸಿ./ 10+2 ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಶೇ. 50 ರಷ್ಟು ಸರಾಸರಿ ಅಂಕ ಹಾಗೂ ಇಂಗ್ಲೀಷ್ ನಲ್ಲಿ ಕನಿಷ್ಠ ಶೇ.50 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅರ್ಹ ಅಭ್ಯರ್ಥಿಗಳು ಪರೀಕ್ಷಾ ಸ್ಥಳದಲ್ಲಿ ಮೂಲ ಅಂಕಪಟ್ಟಿ ಹಾಗೂ ಎಸ್.ಎಸ್.ಎಲ್.ಸಿ ಪ್ರಮಾಣಪತ್ರ, ವ್ಯಾಸಂಗದ ಪ್ರಮಾಣ ಪತ್ರವನ್ನು ನೀಡಬೇಕಾಗಿದೆ. ಎಲ್ಲ ಪ್ರಮಾಣ ಪತ್ರಗಳ 4 ಸ್ವಯಂ ದೃಢೀಕೃತ ಪ್ರತಿಗಳು ಮತ್ತು ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಬಣ್ಣದ 8 ಭಾವಚಿತ್ರಗಳೊಂದಿಗೆ ಅಭ್ಯರ್ಥಿಗಳು ನೇಮಕಾತಿ ರ‍್ಯಾಲಿಗೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian air force organized recruitment rally in Chitradurga on March 18, 19, 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ