ಬೀದರ್‌; ಕೆಲಸ ಖಾಲಿ ಇದೆ, ಅ. 22ಕ್ಕೆ ನೇರ ಸಂದರ್ಶನ

ನವದೆಹಲಿ, ಅಕ್ಟೋಬರ್ 15; ಬೀದರ್ ಜಿಲ್ಲೆಯಲ್ಲಿ ಯೋಗ ತರಬೇತಿದಾರರ ಹುದ್ದೆಗೆ ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 22ರಂದು ಸಂದರ್ಶನಕ್ಕೆ ಹಾಜರಾಗಬಹುದು.

ಜಿಲ್ಲಾ ಆಯುಷ್ ಕಚೇರಿ ವ್ಯಾಪ್ತಿಯಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಿರುವ 3 ಆಯುರ್ವೇದ ಕ್ಷೇಮ ಕೇಂದ್ರಗಳಿಗೆ ಸಂಪೂರ್ಣವಾಗಿ ತಾತ್ಕಾಲಿಕವಾಗಿ ಆಯ್ಕೆ ಸಮಿತಿಯ ಮೂಲಕ ಯೋಗ ತರಬೇತಿದಾರರು 1 ಮತ್ತು ಯೋಗ ತರಬೇತಿದಾರರು-2 (ಪಾರ್ಟ ಟೈಮ್) ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಸಂದರ್ಶನಕ್ಕೆ ಬರುವಾಗ ದ್ವಿಪ್ರತಿಯಲ್ಲಿ ಅವಶ್ಯಕ ಮೂಲ ದಾಖಲಾತಿಗಳನ್ನು ಲಗತ್ತಿಸಿ ಭರ್ತಿ ಮಾಡಿದ ಅರ್ಜಿಯನ್ನು ತರಬೇಕು. ಜಿಲ್ಲಾ ಆಯುಷ್ ಕಛೇರಿ, ಜಿಲ್ಲಾ ಪಂಚಾಯತಿ ಎದುರು, ಬೀದರ್ ಇಲ್ಲಿ ಅಕ್ಟೋಬರ್ 22ರಂದು ನೇರ ಸಂದರ್ಶನ ನಡೆಯಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿಗಳು ಹಾಗೂ ನೇಮಕಾತಿ ಸಮಿತಿಯ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.

Apply For Yoga Trainer Post At Bidar Walk In Interview On October 22

ದಾಖಲಾತಿಗಳು; ಅಭ್ಯಥಿಗಳ ಹೆಸರು, ತಂದೆಯ ಹೆಸರು, ಖಾಯಂ ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಅನುಭವ ಹಾಗೂ ಯೋಗ ತರಬೇತಿಗೆ ಸಂಬಂಧಿಸಿದ ಇತರೆ ಮಾಹಿತಿಗಳನ್ನು ಒಳಗೊಂಡ ಅರ್ಜಿ ಮತ್ತು ಮೂಲ ದಾಖಲಾತಿಗಳನ್ನು ತರಬೇಕು. ಇತ್ತೀಚಿನ ಎರಡು ಭಾವಚಿತ್ರಗಳು ಇರಬೇಕು.

ಷರತ್ತು ಮತ್ತು ನಿಬಂಧನೆ; ಇದು ಗುತ್ತಿಗೆ ಆಧಾರದ ನೇಮಕಾತಿ ಆಗಿರುತ್ತದೆ. ಯೋಗ ತರಬೇತಿದಾರರು-1 ಮತ್ತು ಯೋಗ ತರಬೇತಿದಾರರು-2 ಹುದ್ದೆಯು ಪಾರ್ಟ ಟೈಮ್ ಆಗಿದ್ದು, ಸಂಪೂರ್ಣ ತಾತ್ಕಾಲಿಕ ಹುದ್ದೆಯಾಗಿದ್ದು, ನೇಮಕಾತಿ ಅವಧಿಯು 11 ತಿಂಗಳಿಗೆ ಕೊನೆಗೊಳ್ಳಲಿದೆ.

ಅಭ್ಯರ್ಥಿಗಳಿಗೆ ವಯೋಮಿತಿ ಕನಿಷ್ಠ 21 ವರ್ಷ, ಗರಿಷ್ಠ 60 ವರ್ಷಗಳು. ಯೋಗ ತರಬೇತಿದಾರರು-1 (3 ಹುದ್ದೆ) ಮತ್ತು ಯೋಗ ತರಬೇತಿದಾರರು-2 (3 ಹುದ್ದೆ) ಭರ್ತಿ ಮಾಡಲಾಗುತ್ತಿದೆ.

ಯೋಗ ತರಬೇತಿದಾರರಿಗೆ ಗೌರವ ಧನ ಪ್ರತಿ ಗಂಟೆಗೆ 250 ರೂ.ರಂತೆ ಪ್ರತಿ ಮಾಹೆ ಯೋಗ ತರಬೇತಿದಾರರು-1 ಗರಿಷ್ಠ 32 ಗಂಟೆಗಳು ಮತ್ತು ಯೋಗ ತರಬೇತಿದಾರರು-2 ರವರಿಗೆ ಗರಿಷ್ಠ 20 ಗಂಟೆಗಳ ಅವಧಿಗೆ ನೀಡಲಾಗುವುದು.

ಯೋಗ ತರಬೇತಿದಾರರ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಯಾವುದೇ ಸಂದರ್ಭದಲ್ಲೂ ಕೂಡ ಸದರಿ ಹುದ್ದೆಗಳನ್ನು ಖಾಯಂ ಎಂದು ಪರಿಗಣಿಸಲಾಗುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು ಸೇವೆಯನ್ನು ತಾತ್ಕಾಲಿಕವೆಂದು ಯಾವುದೇ ಸಂದರ್ಭದಲ್ಲಾದರೂ ಗುತ್ತಿಗೆಯನ್ನು ಕೈಬಿಡುವ ಹಕ್ಕನ್ನು ನಿರ್ದೇಶನಾಲಯಕ್ಕೆ ಇರುವ ಬಗ್ಗೆ ಬಾಂಡ್ ನೀಡಬೇಕು.

ಮೈಸೂರಿನಲ್ಲಿ ಕೆಲಸ ಖಾಲಿ ಇದೆ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಖೇಲೋ ಇಂಡಿಯಾ ಯೋಜನೆಯಡಿ ರಾಜ್ಯ ಉತ್ಕೃಷ್ಟತಾ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ High Performance Manager & Head Coach (Swimming Athletics and Shooting) ನೇಮಕಾತಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಸೂಕ್ತ ವಿವರಗಳನ್ನು ಭರ್ತಿ ಮಾಡಿ ಸಂಬಂಧಿಸಿದ ದಾಖಲೆಗಳನ್ನು ನೋಟರಿ ಮಾಡಿಸಿ ಅರ್ಜಿಗಳನ್ನು ಅಕ್ಟೋಬರ್ 22ರೊಳಗೆ ಕಛೇರಿಗೆ ಸಲ್ಲಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‌ಬಾದ್, ಮೈಸೂರು ಇಲ್ಲಿನ ನೋಟಿಸ್ ಬೋರ್ಡ್ ನೋಡಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆ 0821-2564179.

ಸೆಕ್ಯುರಿಟಿ ಗಾರ್ಡ್‌ ಹುದ್ದೆಗೆ ಅರ್ಜಿ ಹಾಕಿ; ಬೆಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಖಾಲಿ ಇರುವ ಸೆಕ್ಯೂರಿಟಿ ಹುದ್ದೆಗಾಗಿ ಮಾಜಿ ಸೈನಿಕರಿಂದ (ಹವಾಲ್ದಾರ್ ಮತ್ತು ಅದಕ್ಕಿಂತ ಕೆಳಗಿನ rank) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 21/10/2021 ಕೊನೆಯ ದಿನ.

ಆಸಕ್ತರು ಶಿವಮೊಗ್ಗದ ಸೈನಿಕ ಮತ್ತು ಪುನರ್ವಸತಿ ಇಲಾಖೆಯ ಕಛೇರಿಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಕಛೇರಿಗೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-220925ಕ್ಕೆ ಕರೆ ಮಾಡಬಹುದು ಎಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+