Yadgir Zilla Panchayat Recruitment 2023 : ಯಾದಗಿರಿ; ಕೆಲಸ ಖಾಲಿ ಇದೆ, ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ
ಯಾದಗಿರಿ, ಜನವರಿ 04; ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳ ಭರ್ತಿಗೆ ಯಾದಗಿರಿ ಜಿಲ್ಲಾ ಪಂಚಾಯಿತಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು 7/1/2023ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮೆ. ಬಿ. ಕೆ. ಆರ್. ಸ್ವಾಮಿ ಸೆಕ್ಯೂರಿಟಿ ಏಜೆನ್ಸೀಸ್, ದಾವಣಗೆರೆ ಮೂಲಕ ಹುದ್ದೆ ಭರ್ತಿ ಮಾಡಲಾಗುತ್ತದೆ.
ತಾಂತ್ರಿಕ ಸಹಾಯಕ (ಅರಣ್ಯ) 4, ತಾಂತ್ರಿಕ ಸಹಾಯಕ (ತೋಟಗಾರಿಕೆ) 4, ತಾಂತ್ರಿಕ ಸಹಾಯಕ (ರೇಷ್ಮೆ) ಮತ್ತು ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ 6 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ತಾಂತ್ರಿಕ ಸಹಾಯಕ (ಅರಣ್ಯ) ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಬಿಎಸ್‌ಸಿ ಫಾರೆಸ್ಟರಿ, ಎಂಎಸ್‌ಸಿ ಫಾರೆಸ್ಟರಿ ಆಪೇಕ್ಷಣಿಯ. ಸಂಬಂಧಿಸಿದ ಕಾರ್ಯ ಕ್ಷೇತ್ರದಲ್ಲಿ 2 ವರ್ಷ ಅನುಭವ ಆಪೇಕ್ಷಣೀಯ. ವಯೋಮಿತಿ 21-40 ವರ್ಷಗಳು.
ತಾಂತ್ರಿಕ ಸಹಾಯಕ (ತೋಟಗಾರಿಕೆ), ಕನಿಷ್ಠ ವಿದ್ಯಾರ್ಹತೆ ಬಿಎಸ್‌ಸಿ ತೋಟಗಾರಿಕೆ. ಎಂಎಸ್‌ಸಿ ಹಾರ್ಟಿಕಲ್ಚರ್ ಮತ್ತು ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಅನುಭವ ಆಪೇಕ್ಷಣೀಯ. ವಯೋಮಿತಿ 21-40 ವರ್ಷಗಳು.
ತಾಂತ್ರಿಕ ಸಹಾಯಕ (ರೇಷ್ಮೆ). ಬಿಎಸ್‌ಸಿ ಸೆರಿಕಲ್ಚರ್. ಎಂಎಸ್‌ಸಿ ಸೆರಿಕಲ್ಚರ್ ಮತ್ತು ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ 2 ವರ್ಷ ಅನುಭವ ಅಪೇಕ್ಷಣಿಯ. ವಯೋಮಿತಿ 21-40 ವರ್ಷಗಳು.
ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಹುದ್ದೆಗೆ ಬಿಕಾಂ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಕನ್ನಡ ಮತ್ತು ಇಂಗ್ಲೀಶ್ ಟೈಪಿಂಗ್ ಪರಿಣಿತಿ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಕಾರ್ಯಾನುಭವ. ವಯೋಮಿತಿ 21-40.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. https://zpyadgiri.karnataka.gov.in/
ಮಹಿಳಾ ತರಬೇತುದಾರ ಹುದ್ದೆಗೆ ಅರ್ಜಿ ಹಾಕಿ; ಉಡುಪಿಯ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲಾಗುತ್ತಿರುವ ಜಿಲ್ಲೆಯ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆದಿರುವ ಬಾಲಕಿಯರಿಗೆ ಕರಾಟೆ, ಜೂಡೋ, ಟಿಕ್ವೆಂಡೋ ಇತ್ಯಾದಿ ಸ್ವಯಂ ರಕ್ಷಣಾ ಕೌಶಲ್ಯಗಳ 6 ತಿಂಗಳ ಅವಧಿಯ ತರಬೇತಿ ನೀಡಲಾಗುತ್ತದೆ.
ಇದಕ್ಕಾಗಿ ಅಂತಾರಾಷ್ಟ್ರೀಯ ಮನ್ನಣೆ ಹೊಂದಿದ ಮಾರ್ಷಲ್ ಆರ್ಟ್ಸ್‌ಗಳಲ್ಲಿ ಕನಿಷ್ಠ ಬ್ಲಾಕ್ ಬೆಲ್ಟ್ ಪೂರ್ಣಗೊಳಿಸಿರುವ ನುರಿತ ಮಹಿಳಾ ತರಬೇತುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಜನವರಿ 16 ಕೊನೆಯ ದಿನ.
ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ, ಮಣಿಪಾಲ ಇಲ್ಲಿಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆಗಳು 0820-2574892.












Click it and Unblock the Notifications