ಕರೂರ್ ವೈಶ್ಯ ಬ್ಯಾಂಕ್ ನೇಮಕಾತಿ; ಜ. 31ರ ತನಕ ಅರ್ಜಿ ಹಾಕಿ
ಬೆಂಗಳೂರು, ಜನವರಿ 10; ಕರೂರ್ ವೈಶ್ಯ ಬ್ಯಾಂಕ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು ಜನವರಿ 31, 2022 ಕೊನೆಯ ದಿನವಾಗಿದೆ.
ಸೇಲ್ಸ್ ಮತ್ತು ಸರ್ವೀಸ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಶಾಖೆಯಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಒಟ್ಟು ಎಷ್ಟು ಹುದ್ದೆಗಳಿವೆ? ಎಂದು ನೇಮಕಾತಿ ಆದೇಶದಲ್ಲಿ ತಿಳಿಸಿಲ್ಲ.
ಕರೂರ್ ವೈಶ್ಯ ಬ್ಯಾಂಕ್ ನೇಮಕಾತಿ ನಿಯಮಗಳ ಪ್ರಕಾರ ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ 50ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಖುದ್ದಾರಿ ಅಥವ ಅಂಚೆ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅರ್ಜಿಗಳನ್ನು ಸಲ್ಲಿಸುವವರು ಬಿಎಫ್‌ಎಸ್‌ಐ ಪಾಡಕ್ಟ್ ಸೇಲ್ಸ್‌ನಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು. ಇಂಗ್ಲೀಶ್ ಭಾಷಾ ಜ್ಞಾನ ಕಡ್ಡಾಯವಾಗಿದೆ. ಕೆಲಸಕ್ಕೆ ನಿಯೋಜನೆ ಮಾಡಿದ ಸ್ಥಳದಲ್ಲಿನ ಸ್ಥಳೀಯ ಭಾಷೆ ಮಾತನಾಡಲು ಅರ್ಹರಾಗಿರಬೇಕು.
ಕರೂರ್ ವೈಶ್ಯ ಬ್ಯಾಂಕ್ ನೇಮಕಾತಿ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ 21 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಡಿಸೆಂಬರ್ 31, 2021ಕ್ಕೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿ 28 ವರ್ಷಗಳು.
ಬ್ಯಾಂಕ್ ನೇಮಕಾತಿ ನಿಯಮಗಳ ಅನ್ವಯ ವಯೋಮಿತಿ ಸಡಿಲಿಕೆ ಇರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡುವವರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ kvb.co.in
ಭೂ ಮಾಪಕರ ಹುದ್ದೆಗೆ ಅರ್ಜಿ ಆಹ್ವಾನ; ಭೂಮಾಪನ ಇಲಾಖೆಯಲ್ಲಿ ಭೂಮಾಪಕರ ಕೊರತೆಯಿರುವುದರಿಂದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಕೊಡಗು ಜಿಲ್ಲೆಯಲ್ಲಿ 100 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಈ ಅರ್ಜಿಗಳನ್ನು rdservices.karnataka.gov.in ವೆಬ್‌ಸೈಟ್ ಮೂಲಕ ಸಲ್ಲಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಜನವರಿ 21ರ ಸಂಜೆ 5 ಗಂಟೆ ಕೊನೆಯ ದಿನವಾಗಿದೆ.
ಅರ್ಜಿ ಶುಲ್ಕ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ ವಿವರ, ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಆಸಕ್ತರು ಭೂದಾಖಲೆಗಳ ಉಪ ನಿರ್ದೇಶಕರ ಕಚೇರಿ, ಜಿಲ್ಲಾಡಳಿತ ಭವನ, 2 ನೇ ಮಹಡಿ ಕೊಠಡಿ ಸಂಖ್ಯೆ 15ರಲ್ಲಿ ಕಚೇರಿ ಸಮಯದಲ್ಲಿ ಹಾಜರಾಗಿ ಮಾಹಿತಿಯನ್ನು ಪಡೆಯಬಹುದು. ವಿವಿಧ ಜಿಲ್ಲೆಗಳಲ್ಲಿ ಸೇರಿ 3 ಸಾವಿರ ಭೂ ಮಾಪಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ; ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧೀನದಲ್ಲಿ ಹೊಸದಾಗಿ ಮಡಿಲು ಸರ್ಕಾರಿ ವಿಶೇಷ ದತ್ತು ಸಂಸ್ಥೆ ಪ್ರಾರಂಭಿಸಲಾಗಿದೆ. ಈ ಸಂಸ್ಥೆಯಲ್ಲಿ 0-6 ವರ್ಷದ ಅನಾಥ, ಪರಿತ್ಯಜಿಸಲ್ಪಟ್ಟ ಹಾಗೂ ಒಪ್ಪಿಸಲ್ಪಟ್ಟ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳು ಈ ಸಂಸ್ಥೆಯಲ್ಲಿದ್ದು, ಈ ಮಕ್ಕಳನ್ನು ಪೋಷಿಸಲು 3 ಆಯಾ ಹುದ್ದೆ ಹಾಗೂ 1 ರಕ್ಷಕ ಹುದ್ದೆಗಳ ಅವಶ್ಯಕತೆ ಇದೆ.
ಈ ಹುದ್ದೆಗಳ ಭರ್ತಿಗೆ ಅರ್ಹ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಲಸಕ್ಕೆ ಬರುವ ಸಿಬ್ಬಂದಿಗಳು ಹಗಲು, ರಾತ್ರಿ ಪಾಳಿ ರೀತಿಯಲ್ಲಿ ಕೆಲಸ ನಿರ್ವಹಿಸಲು ಸಿದ್ಧರಿರಬೇಕು.
ಅರ್ಜಿ ಸಲ್ಲಿಸುವವರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಡಿಕೇರಿ ಇವರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ 08272-228800.












Click it and Unblock the Notifications