ವಿಜಯಪುರ & ಬಾಗಲಕೋಟೆ ಹಾಲು ಒಕ್ಕೂಟದಲ್ಲಿ ಕೆಲಸ ಖಾಲಿ ಇದೆ

ವಿಜಯಪುರ, ಡಿಸೆಂಬರ್ 17; ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟನ ನಿ. ವಿಜಯಪುರ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 20/1/2022 ಕೊನೆಯ ದಿನವಾಗಿದೆ.

ಒಟ್ಟು 39 ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಖುದ್ದಾಗಿ/ ಅಂಚೆ/ ಕೋರಿಯರ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಹುದ್ದೆಗಳ ವಿವರ; ಸಹಾಯಕ ವ್ಯವಸ್ಥಾಪಕರು (ಎ.ಎಹ್ & ಎಐ) 3, ಸಹಾಯಕ ವ್ಯವಸ್ಥಾಪಕರು (ಎಫ್‌ & ಎಫ್) 2, ಸಿಸ್ಟ್ಂ ಅಧಿಕಾರಿ 1 ಹುದ್ದೆಗಳು.

Apply For Jobs At Vijayapura & Bagalkot Milk Union Ltd

ತಾಂತ್ರಿಕ ಅಧಿಕಾರಿ; ಡಿಟಿ 1, ಅಭಿಯಂತರ 1, ಮಾರುಕಟ್ಟೆ ಅಧೀಕ್ಷಕರು 1, ವಿಸ್ತರಣಾಧಿಕಾರಿ ದರ್ಜೆ -3 8, ಮಾರುಕಟ್ಟೆ ಸಹಾಯಕರು ದರ್ಜೆ -2 2, ಕೆಮಿಸ್ಟ್ ದರ್ಜೆ-2 2, ಆಡಳಿತ ಸಹಾಯಕ ದರ್ಜೆ -2 1, ಲೆಕ್ಕ ಸಹಾಯಕ ದರ್ಜೆ-2 4, ಕಿರಿಯ ಸಿಸ್ಟ್ಂ ಅಪರೇಟರ್ 2 ಹುದ್ದೆಗಳು.

ಕಿರಿಯ ತಾಂತ್ರಿಕ; ಬಾಯ್ಲರ್ ಅಟೆಂಡೆಂಟ್ 2, ಇಲ್‌ಕ್ರ್ಟೀಷಿಯನ್ 3, ರೆಫ್ರಿಜಿರೇಷನ್ 1, ಫಿಟ್ಟರ್ 1, ಹಾಲು ರವಾನೆಗಾರರು 4 ಹುದ್ದೆಗಳು.

ಪದವಿ; ಪದವಿ ಎಂದರೆ ಅಭ್ಯರ್ಥಿಯು 10+2 ವಿದ್ಯಾಭ್ಯಾಸದ ನಂತರ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾಗಿರುವ ಯಾವುದೇ ಅಂಗೀಕೃತ ವಿಶ್ವವಿದ್ಯಾಲದಿಂದ ನಿಯತವಾಗಿ ತರಗತಿಗೆ ಹಾಜರಾಗಿ ಪಡೆದ ಕನಿಷ್ಠ ಮೂರು ವರ್ಷಗಳ ಅವಧಿಯ ಸಾಂಪ್ರದಾಯಿಕ ಪದವಿ (10+2+3 ಅಥವ 4).

ಸ್ನಾತಕೋತ್ತರ ಪದವಿ; ಸ್ನಾತಕೋತ್ತರ ಪದವಿ ಎಂದರೆ ಮೇಲೆ ತಿಳಿಸಿದಂತೆ ಪದವಿಯ ನಂತರ ನಿಯತವಾಗಿ ತರಗತಿಗೆ ಹಾಜರಾಗಿ ಪಡೆದ ಸ್ನಾತಕೋತ್ತರ ಪದವಿ (10+2+3 ಅಥವ 4+2).

ಐ.ಟಿ.ಐ./ಬಾಯ್ಲರ್ ಅಟೆಂಡೆಂಟ್; ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಎಸ್. ಎಸ್‌.ಎಲ್‌. ಸಿ. ಉತ್ತೀರ್ಣತೆಯ ನಂತರ ಕರ್ನಾಟಕ ಸರ್ಕಾರದಿಂದ ಅಂಗೀಕೃತಗೊಂಡ ಉದ್ಯೋಗ ಮತ್ತು ಕೈಗಾರಿಕಾ ತರಬೇತಿ ಇಲಾಖೆ/ ಸಂಸ್ಥೆಯಿಂದ ಇಲೆಕ್ಟ್ರೀಷಿಯನ್/ ರೆಫ್ರೀಜಿರೇಷನ್/ ಫಿಟ್ಟರ್‌ ಇದರಲ್ಲಿ ಐ.ಟಿ.ಐ. ಸರ್ಟಿಫಿಕೇಟ್ ಹೊಂದಿರಬೇಕು. ಕರ್ನಾಟಕ ಸರ್ಕಾರದ ಬಾಯ್ಲರ್ ಅಟೆಂಡೆಂಟ್ ಪರೀಕ್ಷಾ ಮಂಡಳಿಯಿಂದ ಪಡೆದ ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್‌ ಹೊಂದಿರಬೇಕು.

ವಯೋಮಿತಿ ವಿವರಗಳು; ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳ ಕನಿಷ್ಠ/ ಗರಿಷ್ಠ ವಯೋಮಿತಿ ಕೆಳಕಂಡಂತೆ ಇರತಕ್ಕದ್ದು. ಕನಿಷ್ಠ ವಯೋಮಿತಿ 18 ವರ್ಷಗಳು.

ಸಾಮಾನ್ಯ ವರ್ಗ ಗರಿಷ್ಠ 35. 2ಎ/ 2ಬಿ/ 3ಎ/3ಬಿ 38. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 40 ವರ್ಷಗಳು. ಅಂಗವಿಕಲರು/ ವಿಧವೆಯರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಮಾಜಿ ಸೈನಿಕರಿಗೆ ಮಿಲಿಟರಿ ಸೇವೆಯಲ್ಲಿ ಸಲ್ಲಿಸಿದ ಅವಧಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕಗಳು; ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ. 500 (ಬ್ಯಾಂಕ್ ಶುಲ್ಕ ಪ್ರತ್ಯೇಕ). ಇತರೆ ವರ್ಗದ ಅಭ್ಯರ್ಥಿಗಳು 1000 ರೂ. ಶುಲ್ಕ ಪಾವತಿ ಮಾಡಬೇಕು( ಬ್ಯಾಂಕ್ ಶುಲ್ಕ ಪ್ರತ್ಯೇಕ). ಅರ್ಜಿ ಶುಲ್ಕಗಳನ್ನು ಪಾವತಿಸುವುದಕ್ಕೆ ಡೆಬಿಟ್/ ಕ್ರೆಡಿಟ್/ ಆನ್‌ಲೈನ್/ಯುಪಿಐ ಮೂಲಕ ನಿಗದಿತ ಶುಲ್ಕ + ಬ್ಯಾಂಕ್ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿ ಮಾಡಬೇಕು.

ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡುವ ಮೊದಲು ಅಭ್ಯರ್ಥಿಗಳು ಸೂಚನೆಗಳನ್ನು ಕಡ್ಡಾಯವಾಗಿ ಓದಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಒಕ್ಕೂಟದ ಅಧಿಕೃತ ವೆಬ್‌ಸೈಟ್ www.bimul.coop ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+