ಗ್ರಾ. ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಸೆಪ್ಟೆಂಬರ್ 07: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.
Recommended Video
ಒಟ್ಟು ನಾಲ್ಕು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ. ಹೊರಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಸಾಫ್ಟ್‌ವೇರ್ ಡವಲಪರ್, ಮೊಬೈಲ್ ಅಪ್ಲಿಕೇಶನ್ ಡವಲಪರ್, ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ (ಸೋಶಿಯಲ್ ಮೀಡಿಯಾ), ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ (ಪ್ರೊಡಕ್ಷನ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಸಾಫ್ಟ್‌ವೇರ್ ಡವಲಪರ್ ಹುದ್ದೆಗೆ ಬಿಇ/ ಬಿ.ಟೆಕ್/ಎಂ.ಇ. ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಬಹುದು. ಮಾಸಿಕ ವೇತನ 50 ಸಾವಿರ ರೂ.. ಮೊಬೈಲ್ ಅಪ್ಲಿಕೇಶನ್ ಡವಲಪರ್ ಹುದ್ದೆಗೆ ಎಂಟೆಕ್/ ಎಂಸಿಎ/ ಎಂಎಸ್‌ಸಿ ಆದವರು ಅರ್ಜಿ ಹಾಕಬಹುದು. ಮಾಸಿಕ ವೇತನ 40 ಸಾವಿರ ರೂ..
ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ (ಸೋಶಿಯಲ್ ಮೀಡಿಯಾ) ಹುದ್ದೆಗೆ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಹಾಕಬಹುದು. ಪ್ರಾಜೆಕ್ಟ್ ಎಕ್ಸಿಕ್ಯೂಟಿವ್ (ಪ್ರೊಡಕ್ಷನ್) ಹುದ್ದೆಗೆ ಪತ್ರಿಕೋದ್ಯಮದಲ್ಲಿ, ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಹಾಕಬಹುದು. ವೇತನ 30 ಸಾವಿರ ರೂ.ಗಳು..












Click it and Unblock the Notifications