• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಾವಣಗೆರೆ; ಕೆಲಸ ಖಾಲಿ ಇದೆ, ಜ.23ರೊಳಗೆ ಅರ್ಜಿ ಹಾಕಿ

|
Google Oneindia Kannada News

ದಾವಣಗೆರೆ, ಜನವರಿ 14; ದಾವಣಗೆರೆಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿ 16 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಜನವರಿ 23 ಕೊನೆಯ ದಿನವಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ದಾವಣಗೆರೆ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2021-22ನೇ ಸಾಲಿಗೆ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕಾತಿ ಮಾಡಲಾಗುತ್ತಿದೆ.

ಗ್ರಾಮ ಲೆಕ್ಕಿಗರ ನೇಮಕಾತಿ; ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿಗ್ರಾಮ ಲೆಕ್ಕಿಗರ ನೇಮಕಾತಿ; ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿ

ಅರ್ಜಿಗಳನ್ನು ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್/ ಪೋಸ್ಟ್ ಬಿಎಸ್ಸಿ ನರ್ಸಿಂಗ್ ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ ಕೆ.ಎನ್.ಸಿ/ ಐ.ಎನ್.ಸಿ ನಿಂದ ನೋಂದಣಿ ಹೊಂದಿರಬೇಕು.

ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಕರೆದ ಧಾರವಾಡ ಜಿಲ್ಲಾ ಪಂಚಾಯಿತಿ ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಕರೆದ ಧಾರವಾಡ ಜಿಲ್ಲಾ ಪಂಚಾಯಿತಿ

ಕನ್ನಡ ಹಾಗೂ ಇಂಗ್ಲಿಶ್‌ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ರಾಜ್ಯದಲ್ಲಿ 10 ವರ್ಷ ವಾಸದ ದೃಢೀಕರಣ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸಂಭಾವನೆ ಪ್ರತಿ ತಿಂಗಳಿಗೆ 22,000 ರೂ. ಜೊತೆಗೆ ಹೆಚ್ಚುವರಿಯಾಗಿ ಪರಫಾರ್‌ಮೆನ್ಸ್ ಬೇಸ್ ಇನ್ಸೆಂಟಿವ್ 8000 ರೂ. ತನಕ (ಸೇವಾ ಆಧಾರ ಪರಿಗಣಿಸಿ) ನೀಡಲಾಗುವುದು.

ಬಳ್ಳಾರಿ; ವಿವಿಧ ಹುದ್ದೆಗಳ ಭರ್ತಿ, ಆಸಕ್ತರು ಅರ್ಜಿ ಹಾಕಿಬಳ್ಳಾರಿ; ವಿವಿಧ ಹುದ್ದೆಗಳ ಭರ್ತಿ, ಆಸಕ್ತರು ಅರ್ಜಿ ಹಾಕಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿ 35 ವರ್ಷ. ಎಸ್‍ಸಿ/ ಎಸ್‍ಟಿ/ ಪ್ರ.ವರ್ಗ 1/ ಮಾಜಿ ಸೈನಿಕರಿಗೆ 40 ವರ್ಷ, 2ಎ/ 2ಬಿ/ 3ಎ/ 3ಬಿ/ ಹಾಗೂ ಇತರೆ ಹಿಂದುಳಿದ ವರ್ಗ (ರಾಜ್ಯ) 38 ವರ್ಷಗಳು.

ಅರ್ಜಿಯನ್ನು ಆನ್‍ಲೈನ್ ಮುಖಾಂತರ ಮಾತ್ರ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಲ್ಲಿಸಬೇಕು ಹಾಗೂ ಪರೀಕ್ಷೆಯನ್ನು ಆನ್‍ಲೈನ್ ಮುಖಾಂತರ ನಡೆಸಲಾಗುತ್ತದೆ. ಜನವರಿ 29ರಂದು ಲಿಖಿತ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸಲಾಗುವುದು. ಫೆಬ್ರವರಿ 1 ರಂದು ಮೂಲದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ http://karunadu.karnataka.gov.in/hfw/pages/home.aspx ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಎಸ್‍ಎಸ್ ಆಸ್ಪತ್ರೆ ಹಿಂಭಾಗ , ಎನ್‍ಸಿಸಿ ಕ್ಯಾಂಪ್ ಹತ್ತಿರ, ಶ್ರೀ ರಾಮನಗರ ರಸ್ತೆ ದಾವಣಗೆರೆ 577005 ಇವರನ್ನು ಸಂಪರ್ಕಿಸಬಹುದು.

ಸಮುದಾಯ ಸಂಪನ್ಮೂಲ ಹುದ್ದೆಗೆ ಅರ್ಜಿ ಹಾಕಿ; ಕಂಪ್ಲಿ ಪುರಸಭೆ ವತಿಯಿಂದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿ ದೀನ್‍ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಗೌರವಧನ ಆಧಾರದ ಮೇಲೆ ಸ್ವ-ಸಹಾಯ ಸಂಘ (ಗುಂಪು) ಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ನೇಮಕಾತಿ ಆದೇಶ ತಿಳಿಸಿದೆ.

ಒಟ್ಟು 2 ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವಧನ 8000 ರೂ. ನಿಗದಿ ಮಾಡಲಾಗಿದೆ. ಸಾರಿಗೆ ಭತ್ಯೆ 2000 ರೂ. ತನಕ (ಅಗತ್ಯತೆಗೆ ತಕ್ಕಂತೆ) ನೀಡಲಾಗುತ್ತದೆ.

ಅರ್ಹತೆಗಳು: ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ ದ್ವಿತೀಯ ಪಿಯುಸಿ ಪಾಸಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಿರಬೇಕು (ಪ್ರಮಾಣ ಪತ್ರ ಹೊಂದಿರಬೇಕು).

ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಖಾಯಂ ವಾಸವಿದ್ದು, ಕನಿಷ್ಠ 3 ವರ್ಷಗಳಿಂದ ಸ್ವ-ಸಹಾಯ ಸಂಘ (ಗುಂಪಿನಲ್ಲಿ) ಸದಸ್ಯರಾಗಿರಬೇಕು. ಆಂತರಿಕ ಸಾಲ ಪಡೆದು ಕಟುಬಾಕಿದಾರರಾಗಿರಬಾರದು, ಸರ್ಕಾರಿ/ ಅರೇ ಸರ್ಕಾರಿ/ ಎನ್.ಜಿ.ಒ ಗಳಲ್ಲಿ ಉದ್ಯೋಗಸ್ಥರಾಗಿರಬಾರದು.

ಅಭ್ಯರ್ಥಿಗಳು ಉತ್ತಮ ಸಂವಹನ ಕೌಶಲ್ಯ ಜೊತೆಗೆ ಸಮುದಾಯ ಚಟುವಟಿಕೆ ತರಬೇತಿಗಳಲ್ಲಿ ಪಾಲ್ಗೊಳ್ಳುವ ಇಚ್ಛಾಶಕ್ತಿ ಹೊಂದಿರಬೇಕು, ಕಾರ್ಯನಿಮಿತ್ತ ಅಗತ್ಯವಿದ್ದಲ್ಲಿ ಹೊರ ಜಿಲ್ಲೆಗೆ ಸಂಚಾರಕ್ಕೆ ಸಿದ್ದರಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 45 ವರ್ಷಗಳು.

ಕಂಪ್ಲಿ ಪುರಸಭೆ ವ್ಯಾಪ್ತಿಯ ಗುಂಪಿನ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ, ಆಸಕ್ತ ಅರ್ಜಿದಾರರು ಕಛೇರಿಯ ಅವಧಿಯಲ್ಲಿ ಸಮುದಾಯ ಸಂಘಟನಾಧಿಕಾರಿ ಮೊಬೈಲ್ ನಂಬರ್ 9845452154 ಇವರನ್ನು ಸಂಪರ್ಕಿಸಿ ಜನವರಿ 28 ರೊಳಗೆ ಅರ್ಜಿ ಸಲ್ಲಿಸಬಹುದು.

English summary
Apply for 16 community health officer post at Davanagere. Candidates can apply online till January 23, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X