ಬಳ್ಳಾರಿಯಲ್ಲಿ ಕೆಲಸ ಖಾಲಿ ಇದೆ, ಹುದ್ದೆಗಳ ಮಾಹಿತಿ
ಬೆಂಗಳೂರು, ಜೂನ್ 11: ಬಳ್ಳಾರಿಯಲ್ಲಿ ಸಮಗ್ರ ಶಿಕ್ಷಣ ಅಭಿಯಾನದ ವತಿಯಿಂದ 2024-25ನೇ ಶೈಕ್ಷಣಿಕ ಸಾಲಿಗೆ ಬಳ್ಳಾರಿ ಸಮನ್ವಯ ಶಿಕ್ಷಣ ವಿಭಾಗದಡಿ ಖಾಲಿ ಇರುವ ಬಿಐಇಆರ್‌ಟಿ ಪ್ರಾಥಮಿಕ, ಪ್ರೌಢ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇರಗುತ್ತಿಗೆ ಅಡಿ ನೇಮಕಾತಿ ಮಾಡಿಕೊಳ್ಳಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 15ಕೊನೆಯ ದಿನವಾಗಿದೆ.

ಪ್ರಾಥಮಿಕ 1-5 (ಡಿ.ಇಡಿ ವಿಶೇಷ ಶಿಕ್ಷಣದೊಂದಿಗೆ ಸಿಆರ್‍ಆರ್ ಸಂಖ್ಯೆ ಮಾನ್ಯತೆ ಹೊಂದಿರಬೇಕು), ಪ್ರಾಥಮಿಕ 6-8 (ಬಿ.ಇಡಿ ವಿಶೇಷ ಶಿಕ್ಷಣದೊಂದಿಗೆ ಸಿಆರ್‍ಆರ್ ಸಂಖ್ಯೆ ಮಾನ್ಯತೆ ಹೊಂದಿರಬೇಕು) ಮತ್ತು ಪ್ರೌಢ 9-12 (ಬಿ.ಇಡಿ ವಿಶೇಷ ಶಿಕ್ಷಣದೊಂದಿಗೆ ಸಿಆರ್‍ಆರ್ ಸಂಖ್ಯೆ ಮಾನ್ಯತೆ ಹೊಂದಿರಬೇಕು).
ಈ ಹಿಂದೆ ಈ ಇಲಾಖೆಯಲ್ಲಿ ಬಿಐಇಆರ್‌ಟಿಯಾಗಿ ಕಾರ್ಯನಿರ್ವಹಿಸಿರುವ ಅಭ್ಯರ್ಥಿಗಳಿಗೆ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಗರದ ಕೋಟೆ ಪ್ರದೇಶದ ಸಮಗ್ರ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಮತ್ತು ಉಪನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.
ಮಂಗಳೂರು ಅತಿಥಿ ಶಿಕ್ಷಕರ ನೇಮಕಾತಿ; ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಿರ್ವಹಿಸುತ್ತಿರುವ ಮಂಗಳೂರು ತಾಲೂಕಿನ ಬೋಳಿ ಯಾರ್‌ನ ಅಮ್ಮೆಂಬಳದ ಮೌಲಾನಾ ಆಜಾದ್ ಮಾದರಿ ಶಾಲೆಗೆ ಕನ್ನಡ, ಸಮಾಜ ವಿಜ್ಞಾನ, ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಅತಿಥಿ ಶಿಕ್ಷಕರಿಂದ ಅರ್ಜಿ ಕರೆಯಲಾಗಿದೆ.
6 ರಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಬಿ.ಎ., ಬಿ.ಎಡ್ ಮತ್ತು ಬಿಎಸ್ಸಿ, ಬಿ.ಎಡ್ ಪದವೀಧರರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 9449937134, 9945176137 ಅನ್ನು ಸಂಪರ್ಕಿಸಬಹುದು.
ಧಾರವಾಡದಲ್ಲಿ ಕೆಲಸ ಖಾಲಿ ಇದೆ: ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2024-25ನೇ ಸಾಲಿಗೆ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಖಾಲಿ ಇರುವ ಒಟ್ಟು 16 ಹುದ್ದೆಗಳಿಗೆ ವಿಶೇಷ ಸಂಪನ್ಮೂಲ ಶಿಕ್ಷಕರನ್ನು ಇಲಾಖೆಯಿಂದ ನೇರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಡಿಇಡಿ, ಬಿಇಡಿ ಪ್ರಮಾಣ ಪತ್ರ ಹಾಗೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಜೂನ್ 12ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಈ ಹುದ್ದೆಗಳಲ್ಲಿ ನೇರಗುತ್ತಿಗೆಯ ಸಮನ್ವಯ ಶಿಕ್ಷಕರು ಮಾರ್ಚ್ 31, 2025ರ ವರೆಗೂ ಕರ್ತವ್ಯ ನಿರ್ವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 0836270554 ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ, ಕಚೇರಿಯನ್ನು ಸಂಪರ್ಕಿಸಬಹುದು.












Click it and Unblock the Notifications