• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಖಾಲಿ ಇದೆ

|

ಬೆಂಗಳೂರು, ಅಕ್ಟೋಬರ್ 09: ಬೆಂಗಳೂರು ವಿಶ್ವವಿದ್ಯಾಲಯ ಸಹಾಯಕ ಗ್ರಂಥಪಾಲಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಲು 27/10/2020 ಸಂಜೆ 5.30 ಕೊನೆಯ ದಿನವಾಗಿದೆ.

2020-21ನೇ ಶೈಕ್ಷಣಿಕ ಸಾಲಿಗೆ ಒಂದು ವರ್ಷದ ಅವಧಿಗೆ ಸಹಾಯಕ ಗ್ರಂಥ ಪಾಲಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ನೇಮಕಾತಿ ತಾತ್ಕಾಲಿಕವಾಗಿದ್ದು, ಯಾವುದೇ ಕಾರಣಗಳನ್ನು ನೀಡದೆ ರದ್ದುಗೊಳಿಸಬಹುದಾಗಿದೆ.

ಜೀವ ವೈವಿಧ್ಯ ತಾಣದ ಭೂಮಿ ಪರಭಾರೆ; ಬೆಂಗಳೂರು ವಿವಿ ವಿವಾದ

ಒಟ್ಟು ಏಳು ಹುದ್ದೆಗಳಿವೆ (ಮಹಿಳೆ 2, ಕನ್ನಡ ಮಾಧ್ಯಮ 1, ಹೈ-ಕರ್ನಾಟಕ 1). ಅರ್ಜಿ ಸಲ್ಲಿಸುವ ಮಾಹಿತಿ ವಿಜ್ಞಾನ ಸ್ನಾತಕೋತ್ತರ ಪದವೀಧರರಿಗೆ 32,000 ಮತ್ತು ಪಿಹೆಚ್‌ಡಿ ಅಭ್ಯರ್ಥಿಗಳಿಗೆ 36,000 ರೂ. ವೇತನ ನಿಗದಿ ಮಾಡಲಾಗಿದೆ.

ಬಳ್ಳಾರಿ; ಕೆಲಸ ಖಾಲಿ ಇದೆ, ಅ. 15ರೊಳಗೆ ಅರ್ಜಿ ಹಾಕಿ

ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ವಿದ್ಯಾಭ್ಯಾಸದ ದಾಖಲಾತಿಗಳ ಜೊತೆ ಸ್ವ ವಿವರ ದೃಢೀಕರಿಸಿ ಸಲ್ಲಿಸಬೇಕು. ನೇಮಕಾತಿ ಸಂದರ್ಶನದ ಸಮಯದಲ್ಲಿ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು.

ಪ.ಜಾ ಮತ್ತು ಪ.ಪಂಗಡದ ಅಭ್ಯರ್ಥಿಗಳ ಉದ್ಯೋಗಕ್ಕೆ ಆಸರೆಯಾದ 'ಆಶಾದೀಪ'

ಆಯ್ಕೆಯಾದ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ರಾಮನಗರದಲ್ಲಿರುವ ಸ್ನಾತಕೋತ್ತರ ಕೇಂದ್ರ ಮತ್ತು ಜ್ಞಾನ ಭಾರತಿ ಗ್ರಂಥಾಲಯಗಳಲ್ಲಿ ಸೂಚಿಸಿರುವ ಸ್ಥಳಗಳಲ್ಲಿ ಕೆಲಸ ನಿರ್ವಹಣೆ ಮಾಡಬೇಕಿದೆ.

ಅರ್ಜಿ ಸಲ್ಲಿಸಲು ವಿಳಾಸ: ವಿಶ್ವವಿದ್ಯಾಲಯದ ಗ್ರಂಥಪಾಲಕರು, ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನ ಭಾರತಿ, ಬೆಂಗಳೂರು 560056.

ಅರ್ಜಿ ಡೌನ್ ಲೋಡ್‌ಗಾಗಿ ವೆಬ್ ಸೈಟ್

   Rain Alert : ರಾಜ್ಯದಂತ ಭಾರಿ ಮಳೆ ಸಾಧ್ಯತೆ | Oneindia Kannada

   English summary
   Applications invited for the assistant librarian post at Bangalore university. October 27, 2020 last date to submit applications.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X