ಕಲಬುರಗಿಯಲ್ಲಿ 32 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ
ಕಲಬುರಗಿ, ಮೇ 26 : ಕಲಬುರಗಿ ಜಿಲ್ಲೆಯಲ್ಲಿ ಖಾಲಿಯಿರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಮೂವತ್ತೆರಡು ಹುದ್ದೆಗಳು ಖಾಲಿ ಇವೆ ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ್ ಘೋಷ್ ಅವರು ತಿಳಿಸಿದ್ದಾರೆ.
ಈ ಎಲ್ಲ ಮೂವತ್ತೆರಡು ಹುದ್ದೆಗಳು ಹೈದರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗಾಗಿಯೇ ಮೀಸಲಾಗಿವೆ. ದ್ವಿತೀಯ ಪಿಯುಸಿ, ಸಿಬಿಎಸ್ ಇ ಹಾಗೂ ಐಸಿಎಸ್ ಇ ನಡೆಸುವ ಹನ್ನೆರಡನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.[ಬೆಂಗ್ಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನಲ್ಲಿ ಟೀಚರ್ ಹುದ್ದೆ ಖಾಲಿ]

ವಯೋಮಿತಿ ಹದಿನೆಂಟರಿಂದ ಮೂವತ್ತೈದು ವರ್ಷದೊಳಗಿರಬೇಕು. ಅರ್ಜಿಗಳನ್ನು ವೆಬ್ ಸೈಟ್ ವಿಳಾಸ kalaburgiva.kar.nic.in ಮೂಲಕ ಜೂನ್ ಇಪ್ಪತ್ನಾಲ್ಕನೇ ತಾರೀಕಿನ ಒಳಗೆ ಸಲ್ಲಿಸಬೇಕು. ಮತ್ತಷ್ಟು ಮಾಹಿತಿಗಳು ಬೇಕಿದ್ದಲ್ಲಿ ಇದೇ ವೆಬ್ ಸೈಟ್ ನಲ್ಲಿ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ












Click it and Unblock the Notifications