CRPF Recuitment 2023: ಸಿಆರ್‌ಪಿಎಫ್‌ನ 1458 ಹುದ್ದೆಗಳ ಅರ್ಜಿಗೆ ಅವಧಿ ವಿಸ್ತರಣೆ !
ಕೇಂದ್ರ ಮೀಸಲು ಪೊಲೀಸ್ ಪಡೆಯು 2023ರ ಸಾಲಿನ 1458 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನಾಂಕ ನಿಗದಿ ಪಡಿಸಲಾಗಿದೆ.
ನವದೆಹಲಿ,ಜನವರಿ.27: ಕೇಂದ್ರ ಮೀಸಲು ಪೊಲೀಸ್ ಪಡೆ(CRPF)ಯಿಂದ 2023ರ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಖಾಲಿ ಇರುವ ಒಟ್ಟು 1458 (ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಸ್ಟೆನೋ) ಮತ್ತು ಹೆಡ್ ಕಾನ್‌ಸ್ಟೆಬಲ್ (ಮಿನಿಸ್ಟೇರಿಯಲ್) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆಯು 2023ರ ಸಾಲಿನ 1458 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು 25ರಂದು ಕೊನೆಯ ದಿನ ನಿಗದಿ ಪಡಿಸಲಾಗಿತ್ತು. ಈ ಅವಧಿಯನ್ನು 6 ದಿನಗಳ ಕಾಲ ಅಂದರೇ ಜನವರಿ 31ರ ವರೆಗೆ ಮುಂದೂಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ www.crpf.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಖಾಲಿ ಇರುವ 143 ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು 1315 ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜನವರಿ 4 ರಂದು ಪ್ರಾರಂಭಿಸಲಾಗಿತ್ತು.

ಅರ್ಜಿ ಸಲ್ಲಿಸಲು ಅರ್ಹತೆ :
ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೇಂದ್ರ/ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ / ತತ್ಸಮಾನ ಪರೀಕ್ಷೆಯನ್ನು ಪಾಸ್ ಮಾಡಿರಬೇಕು.
ವಯೋಮಿತಿ :
ಅರ್ಜಿಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷವಾಗಿರಬೇಕು. ಗರಿಷ್ಠವಾಗಿ 25 ವರ್ಷ ವಯಸ್ಸು ಮೀರಿರಬಾರದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಲಿಕೆ ನಿಯಮಗಳು ಅನ್ವಯವಾಗಲಿದೆ. ಅಭ್ಯರ್ಥಿಗಳು 26-01-1998 ಕ್ಕಿಂತ ಮೊದಲು ಜನಿಸಿರಬಾರದು. ಹಾಗು 25-01-2005 ನಂತರವು ಜನಿಸಿರಬಾರದು. ಅರ್ಜಿಯ ಸ್ವೀಕೃತಿಯ ಅಂತಿಮ ದಿನಾಂಕದಂದು ವಯಸ್ಸಿನ ಮಿತಿಯು 18 ರಿಂದ 25 ವರ್ಷಗಳವರೆಗೆ ಇರಬೇಕು.
ಹುದ್ದೆವಾರು ಸಂಬಳದ ವಿವರ:
ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಸ್ಟೆನೋ): ರೂ 29,200 ರಿಂದ 92, 300ರ ವರೆಗೆ
ಹೆಡ್ ಕಾನ್‌ಸ್ಟೆಬಲ್ (ಸಚಿವಾಲಯ): ರೂ 25,500 ರಿಂದ 81,100ರ ವರೆಗೆ

ಪ್ರಮುಖ ದಿನಾಂಕಗಳು:
ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ: ಜನವರಿ 31, 2023
ಪ್ರವೇಶ ಕಾರ್ಡ್ ಬಿಡುಗಡೆ : ಫೆಬ್ರವರಿ 15, 2023
ಪರೀಕ್ಷೆಯ ನಡೆಯುವ ದಿನಾಂಕ: ಫೆಬ್ರವರಿ 22-28, 2023ರ ನಡುವೆ(ಅಂದಾಜಿಸಲಾಗಿದೆ)
ಅರ್ಜಿ ಸಲ್ಲಿಸುವ ವಿಧಾನ :
* ಸಿಆರ್‌ಪಿಎಫ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣ www.crpf.nic.in ಗೆ ಭೇಟಿ ನೀಡಿ ಸೂಕ್ತ ಅರ್ಜಿ ನಮೂನೆ ಆಯ್ಕೆ ಮಾಡಿಕೊಳ್ಳಬೇಕು.
* ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕಚೇರಿಗೆ ಯಾವುದೇ ರೀತಿ ಪತ್ರ ಅಥವಾ ಅರ್ಜಿಯಲ್ಲಿ ಬದಲಾವಣೆಗೆ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ.
* ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್ ಮೂಲಕ ನೋಂದಾಯಿಸಿಕೊಳ್ಳುವುದು ಮುಖ್ಯ.












Click it and Unblock the Notifications