Infographics: ರಾಜ್ಯದ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?
ಬೆಂಗಳೂರು, ಫೆಬ್ರವರಿ 20: ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆಯಾಗುತ್ತಲೇ ಇದೆ. ಕಳೆದ 12 ದಿನಗಳಿಂದ ಪ್ರತಿ ದಿನವೂ ಬೆಲೆ ಹೆಚ್ಚುತ್ತಿದೆ. ಇದರ ಪರಿಣಾಮ ಜನಸಾಮಾನ್ಯರ ಪರ್ಸ್ ಖಾಲಿಯಾಗುತ್ತಲೇ ಇದೆ. ಖಾಸಗಿ ವಾಹನಗಳನ್ನು ಮುಟ್ಟಲೂ ಭಯವಾಗುವಂತಾಗಿದೆ.
ಕೆಲವು ರಾಜ್ಯಗಳ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂ ಗಡಿ ದಾಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕರ್ನಾಟಕದಲ್ಲಿಯೂ ಕೆಲವೇ ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100 ರೂ ದಾಟಿದರೆ ಅಚ್ಚರಿಯಿಲ್ಲ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 93.61 ರೂ ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 97 ರೂ ತಲುಪಿದೆ.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಪೆಟ್ರೋಲ್ ದರ ಲೀಟರ್‌ಗೆ 93 ರೂ ಗಡಿ ದಾಟಿದೆ. ಶನಿವಾರ ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 95 ರೂಪಾಯಿ ತಲುಪಿದೆ. ಭಾನುವಾರವೂ ಇದೇ ರೀತಿ ಬೆಲೆ ಏರಿಕೆಯಾದರೆ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪೆಟ್ರೋಲ್ ದರ 95 ರೂ ದಾಟಲಿದೆ.

ಇನ್ನು ಡೀಸೆಲ್ ಬೆಲೆಯಲ್ಲಿಯೂ ಬೆಂಗಳೂರಿನಲ್ಲಿ ಹತ್ತು ಪೈಸೆಯಷ್ಟು ಹೆಚ್ಚಳವಾಗಿದೆ. ವಿವಿಧ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನ ದರದಲ್ಲಿ ಡೀಸೆಲ್ ಮಾರಾಟವಾಗುತ್ತಿದೆ. ಕೊಪ್ಪಳ, ಉತ್ತರ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 87 ರೂಪಾಯಿಗಿಂತ ಹೆಚ್ಚಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ 85 ರೂ. ಗಿಂತ ಅಧಿಕವಿದೆ.













Click it and Unblock the Notifications