ಲೆಪ್ಟೋಸ್ಪಿರೊಸಿಸ್ ಅಥವಾ ಇಲಿಜ್ವರ: ಚಿತ್ರಗಳಲ್ಲಿ ನೋಡಿ ಕಾರಣ, ಲಕ್ಷಣ
ತಿರುವನಂತಪುರಂ, ಸೆಪ್ಟೆಂಬರ್ 04: ಕೇರಳದಲ್ಲಿ ಪ್ರವಾಹದ ದುರಂತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜನತೆಗೆ ಲೆಪ್ಟೋಸ್ಪಿರೊಸಿಸ್ ಎಂಬ ಹೊಸ ಆಘಾತ ಬಂದೆರಗಿದೆ. ಲೆಪ್ಟೋಸ್ಪಿರೊಸಿಸ್ ಅಥವಾ ಇಲಿಜ್ವರ ಎಂಬ ಈ ಮಾರಣಾಂತಿಕ ಕಾಯಿಲೆಗೆ ಕೇರಳದಲ್ಲಿ ಇದುವರೆಗೆ 41 ಮಂದಿ ಬಲಿಯಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಲೆಪ್ಟೋಸ್ಪಿರಾ ಇಂಟರಾಗನ್ಸ್ ಎಂಬ ಬ್ಯಾಕ್ಟೀರಿಯಾದಿಂದ ಬರುವ ಈ ರೋಗ ಮುಖ್ಯವಾಗಿ ಮಣ್ಣು ಮತ್ತು ನೀರಿನಿಂದ ಹರಡುತ್ತದೆ.
ನಿಫಾಹ್ ವೈರಸ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಕಂಗೆಟ್ಟಿದ್ದ ಕೇರಳಕ್ಕೆ ಇದು ಮತ್ತೊಂದು ಆಘಾತ.
ಅಷ್ಟಕ್ಕೂ ಇದೀಗ ಕೇರಳಿಗರ ನಿದ್ದೆ ಕೆಡಿಸಿರುವ ಈ ಇಲಿಜ್ವರಕ್ಕೆ ಕಾರಣವೇನು? ಲಕ್ಷಣವೇನು? ಮನೆಮದ್ದು, ಮುನ್ನೆಚ್ಚರಿಕೆ ಕ್ರಮಗಳು ಯಾವವು. ಇಲ್ಲಿವೆ ಮಾಹಿತಿ.
















Click it and Unblock the Notifications