Get Updates
Get notified of breaking news, exclusive insights, and must-see stories!

Infographics: ಕರ್ನಾಟಕ ತಾಪಮಾನ: ಇನ್ನೆರಡು ದಿನ ಚಳಿ, ಮಂಜು, ಗಾಳಿ

ಬೆಂಗಳೂರು, ಡಿಸೆಂಬರ್ 30: ರಾಜ್ಯದ ಹಲವು ಭಾಗಗಳಲ್ಲಿ ಹೊಸ ವರ್ಷಾಚರಣೆಯ ಸಿದ್ಧತೆ ಜೊತೆಗೆ ಚಳಿ ಗಾಳಿ ಕಾಡುತ್ತಿದೆ. ಬೆಂಗಳೂರು, ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲೂ ದಾಖಲೆಯ ಚಳಿ ಉಂಟಾಗಿದೆ. ಇನ್ನೆರಡು ದಿನಗಳ ಕಾಲ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೀದರ್, ವಿಜಯಪುರ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಚಳಿಯು ಹೆಚ್ಚಾಗಿ ಸಾಮಾನ್ಯಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಚಳಿಯು ಸಹಜ ತಾಪಮಾನಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಆದರೆ, ಇಂದು ಮಂಗಳೂರು (31 ಡಿಗ್ರಿ ಸೆಲ್ಸಿಯಸ್) ಕಾರವಾರದಲ್ಲಿ 33.2 ಡಿಗ್ರಿ ತಾಪಮಾನ ದಾಖಲಿದೆ.

ಆದರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಡಿಸೆಂಬರ್ 22, 2020 ರಂದು ಬೆಂಗಳೂರಿನಲ್ಲಿ ಕನಿಷ್ಠ ಕನಿಷ್ಠ 14.20 ದಾಖಲಾಗಿತ್ತು. ಹಾಸನ ಜಿಲ್ಲೆಯಲ್ಲಿ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಡಿ.30ರ ತಾಪಮಾನ ವರದಿ: ರಾಜ್ಯದಲ್ಲಿ ಇನ್ನೂ ಎರಡು ದಿನ ವಿಪರೀತ ಚಳಿ ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಂತೂ ಮಂಜು ಕವಿದ ಚಳಿಗೆ ಜನರು ತತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತಾಪಮಾನ ತಗ್ಗಿಲ್ಲ ಹಾಗೂ ಮೈ ನಡುಗುವಷ್ಟು ಚಳಿ ಉಂಟಾಗಿಲ್ಲ, ಚೆನ್ನಾಗಿ ಬಿಸಿಲು ಜೊತೆಗೆ ಗಾಳಿ ಬೀಸುತ್ತಿದೆ.

ಕರ್ನಾಟಕದಲ್ಲಿ ದಾಖಲೆಯ ಚಳಿ

ಕರ್ನಾಟಕದಲ್ಲಿ ದಾಖಲೆಯ ಚಳಿ

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇನ್ನೆರಡು ದಿನ ಚಳಿ ಹೆಚ್ಚಾಗಲಿದ್ದು, ಮಲೆನಾಡು, ಕರಾವಳಿ, ಕೊಡಗು, ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕದಲ್ಲಿ ಜನವರಿ 1ರ ಬಳಿಕ ಕರ್ನಾಟಕದಲ್ಲಿ ಶೀತ ಗಾಳಿ ಕಡಿಮೆಯಾಗುವ ಸಾಧ್ಯತೆಯಿದೆ.ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗ್ಗೆ ಸುಮಾರು 9 ಗಂಟೆವರೆಗೂ ದಟ್ಟವಾದ ಮಂಜು ಆವರಿಸಿ ಮಲೆನಾಡಿನ ಅನುಭವ ನೀಡುತ್ತಿದೆ. ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಆವರಿಸುತ್ತಿರುವ ಮಂಜಿನಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಬೆಳೆ ಹಾಳಾಗುವ ಭಯದಲ್ಲಿದ್ದಾರೆ. ಮಧ್ಯಾಹ್ನದ ನಂತರ ಎಂದಿನಂತೆ ಸೂರ್ಯದೇವ ಅಬ್ಬರಿಸಲಿದ್ದಾನೆ.

ರಾಜ್ಯದ ನಗರಗಳ ಹವಾಮಾನ ವರದಿ ಹೀಗಿದೆ

ರಾಜ್ಯದ ನಗರಗಳ ಹವಾಮಾನ ವರದಿ ಹೀಗಿದೆ

ರಾಜ್ಯದ ನಗರಗಳ ಹವಾಮಾನ ವರದಿ ಹೀಗಿದೆ: ಬೆಂಗಳೂರು 27-17, ಮೈಸೂರು 29.-17, ಚಾಮರಾಜನಗರ 29-17, ರಾಮನಗರ 28-17, ಮಂಡ್ಯ 29-17, ಬೆಂಗಳೂರು ಗ್ರಾಮಾಂತರ 27-17, ಚಿಕ್ಕಬಳ್ಳಾಪುರ 26-14, ಕೋಲಾರ 26-16, ಹಾಸನ 28-16, ಚಿಕ್ಕಮಗಳೂರು 28-15, ದಾವಣಗೆರೆ 26-21, ಶಿವಮೊಗ್ಗ 30-18, ಕೊಡಗು 29-15, ತುಮಕೂರು 28-17 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿ 32-25, ಮಂಗಳೂರು 33-23, ಉತ್ತರ ಕನ್ನಡ 32-18, ಧಾರವಾಡ 30-17, ಹಾವೇರಿ 31-18, ಹುಬ್ಬಳ್ಳಿ 31-17, ಬೆಳಗಾವಿ 29-17, ಗದಗ 29-17, ಕೊಪ್ಪಳ 29-18, ವಿಜಯಪುರ 29-17, ಬಾಗಲಕೋಟ 30-17, ಕಲಬುರಗಿ 30-17, ಬೀದರ್ 26-15, ಯಾದಗಿರಿ 30-18, ರಾಯಚೂರ 30-18, ಬಳ್ಳಾರಿ 29-18 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಭಾರತದೆಲ್ಲೆಡೆ ಚಳಿ

ಭಾರತದೆಲ್ಲೆಡೆ ಚಳಿ

ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮಂಜು ಕವಿದ ವಾತಾವರಣ ಮುಂದುವರೆಯಲಿದ್ದು, ಇನ್ನೂ ಐದು ದಿನಗಳ ಕಾಲ ಚಳಿ ಗಾಳಿ ಹೊಡೆತಕ್ಕೆ ಜನರು ಮೈಯೊಡ್ಡಬೇಕಾಗತ್ತದೆ. ಕಣಿವೆ ರಾಜ್ಯದಲ್ಲಿ ಚಳಿ ಬಾಧಿಸುತ್ತಿದ್ದು, ಶ್ರೀನಗರದಲ್ಲಿ ಇಂದು ಮೈನಸ್ 4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದೆಹಲಿಯಲ್ಲಿ ಹೊಂಜು, ಮಂಜು ಕವಿದ ವಾತಾವರಣದಿಂದ ಸಂಚಾರ ಕಷ್ಟವಾಗಿದೆ. ಬೆಂಗಳೂರು ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇದೇ ಪರಿಸ್ಥಿತಿ ಮುಂಜಾನೆ ವೇಳೆ ಕಾಣಿಸಲಿದೆ.

ಉತ್ತರ ಕರ್ನಾಟಕದಲ್ಲೂ ಚಳಿ ವಿಪರೀತ

ಉತ್ತರ ಕರ್ನಾಟಕದಲ್ಲೂ ಚಳಿ ವಿಪರೀತ

ಕರ್ನಾಟಕದಲ್ಲಿ ಮೈ ನಡುಗುವ ಚಳಿ ಕರ್ನಾಟಕದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಚಳಿ ವಿಪರೀತ ಹೆಚ್ಚಾಗಿದೆ. ಸದಾ ಬಿಸಿಲಿನಿಂದ ಕೂಡಿರುವ ಉತ್ತರ ಕರ್ನಾಟಕದಲ್ಲೂ ಚಳಿ ವಿಪರೀತವಾಗಿದೆ. ಉತ್ತರ ಕರ್ನಾಟಕದ ಧಾರವಾಡ, ಹುಬ್ಬಳ್ಳಿ, ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ಇನ್ನೂ 2 ದಿನ ಚಳಿ ಹೆಚ್ಚಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+