Infographics: ಕರ್ನಾಟಕ ಹವಾಮಾನ ವರದಿ: ವಿವಿಧ ಜಿಲ್ಲೆಗಳಲ್ಲಿ ಚಳಿ ಚಳಿ
ಬೆಂಗಳೂರು, ಡಿಸೆಂಬರ್ 27: ಡಿಸೆಂಬರ್ ಅಂತ್ಯದವರೆಗೂ ರಾಜ್ಯದ ಹಲವು ಭಾಗಗಳಲ್ಲಿ ಚಳಿ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೀದರ್, ವಿಜಯಪುರ ಸೇರಿದಂತೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಚಳಿಯು ಹೆಚ್ಚಾಗಿ ಸಾಮಾನ್ಯಕ್ಕಿಂತ 5 ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಚಳಿಯು ಸಹಜ ತಾಪಮಾನಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.
ರಾಜ್ಯದಾದ್ಯಂತ ಹೆಚ್ಚಿನ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 29, 1883 ರಂದು ಅತ್ಯಂತ ಕಡಿಮೆ ಕನಿಷ್ಠ 8.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ನಗರದಲ್ಲಿ 2011 ರಲ್ಲಿ 12.8 ಡಿಗ್ರಿ, ಡಿಸೆಂಬರ್ 11, 2016 ರಂದು 12 ಡಿಗ್ರಿ ಸೆಲ್ಸಿಯಸ್. ಡಿಸೆಂಬರ್ 22, 2020 ರಂದು ಬೆಂಗಳೂರಿನಲ್ಲಿ ಕನಿಷ್ಠ ಕನಿಷ್ಠ 14.20 ದಾಖಲಾಗಿದೆ. ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಂತೂ ಮಂಜು ಕವಿದ ಚಳಿಗೆ ಜನರು ತತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತಾಪಮಾನ ತಗ್ಗಿಲ್ಲ ಹಾಗೂ ಮೈ ನಡುಗುವಷ್ಟು ಚಳಿ ಉಂಟಾಗಿಲ್ಲ, ಚೆನ್ನಾಗಿ ಬಿಸಿಲು ಜೊತೆಗೆ ಗಾಳಿ ಬೀಸುತ್ತಿದೆ.

ಕರ್ನಾಟಕದಲ್ಲಿ ದಾಖಲೆಯ ಚಳಿ ಉಂಟಾಗಿದೆ
ಬೆಂಗಳೂರು, ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲೂ ದಾಖಲೆಯ ಚಳಿ ಉಂಟಾಗಿದೆ. ಬೀದರ್ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳ ಕನಿಷ್ಠ ತಾಪಮಾನ ದಾಖಲೆಯ ಮಟ್ಟಕ್ಕೆ ಕುಸಿದಿದೆ. ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಚಳಿ ಗಾಳಿ ಹೆಚ್ಚಾಗಲಿದೆ ಎಂಬ ವರದಿ ಬಂದಿದೆ. ಬೀದರ್ನಲ್ಲಿ ಕನಿಷ್ಠ ತಾಪಮಾನ 6.7 ಡಿಗ್ರಿ ಸೆಲ್ಸಿಯಸ್ಗೆ ಇಳಿದಿತ್ತು. ಬೆಂಗಳೂರಿನಲ್ಲೂ ಈ ವಾರಾಂತ್ಯಕ್ಕೆ ಚಳಿ ತೀವ್ರವಾಗುತ್ತಿದೆ.

ರಾಜ್ಯದ ನಗರಗಳ ಹವಾಮಾನ ವರದಿ
ರಾಜ್ಯದ ನಗರಗಳ ಹವಾಮಾನ ವರದಿ ಹೀಗಿದೆ: ಬೆಂಗಳೂರು 27-15, ಮಂಗಳೂರು 32-22, ಶಿವಮೊಗ್ಗ 32-16, ಬೆಳಗಾವಿ 31-16, ಮೈಸೂರು 29-13, ಮಂಡ್ಯ 30-15, ರಾಮನಗರ 30-15, ಮಡಿಕೇರಿ 29-13, ಹಾಸನ 29-14, ಚಾಮರಾಜನಗರ 30-16, ಚಿಕ್ಕಬಳ್ಳಾಪುರ 27-13, ಕೋಲಾರ 28-14, ತುಮಕೂರು 29-14, ಉಡುಪಿ 31-22, ಕಾರವಾರ 31-22, ಚಿಕ್ಕಮಗಳೂರು 29-14, ದಾವಣಗೆರೆ 32-16, ಚಿತ್ರದುರ್ಗ 31-16, ಹಾವೇರಿ 32-16, ಬಳ್ಳಾರಿ 32-17, ಗದಗ 31-17, ಕೊಪ್ಪಳ 31-17, ರಾಯಚೂರು 32-17, ಯಾದಗಿರಿ 31-17, ವಿಜಯಪುರ 32-17, ಬೀದರ್ 30-14, ಕಲಬುರಗಿ 32-16, ಬಾಗಲಕೋಟೆ 32-17 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇನ್ನೂ 3 ದಿನ ಚಳಿ ಹೆಚ್ಚಾಗಲಿದೆ
ಕರ್ನಾಟಕದಲ್ಲಿ ಮೈ ನಡುಗುವ ಚಳಿ ಕರ್ನಾಟಕದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಚಳಿ ವಿಪರೀತ ಹೆಚ್ಚಾಗಿದೆ. ಸದಾ ಬಿಸಿಲಿನಿಂದ ಕೂಡಿರುವ ಉತ್ತರ ಕರ್ನಾಟಕದಲ್ಲೂ ಚಳಿ ವಿಪರೀತವಾಗಿದೆ. ಉತ್ತರ ಕರ್ನಾಟಕದ ಧಾರವಾಡ, ಹುಬ್ಬಳ್ಳಿ, ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ಇನ್ನೂ 3 ದಿನ ಚಳಿ ಹೆಚ್ಚಾಗಲಿದೆ.

ಚದುರಿದ ಮಳೆಯಾಗುವ ಸಾಧ್ಯತೆಯಿದೆ
ಡಿಸೆಂಬರ್ 26ರಿಂದ 29ರವರೆಗೆ ವಾಯುವ್ಯ ಭಾರತದ ಪಕ್ಕದ ಬಯಲು ಪ್ರದೇಶಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಇಂದಿನಿಂದ ವಾಯುವ್ಯ ಮತ್ತು ಮಧ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಶೀತ ಅಲೆ ಉಂಟಾಗಲಿದೆ. ಇಂದು ಉತ್ತರಾಖಂಡ, ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ಮತ್ತು ಪಂಜಾಬ್, ಹರಿಯಾಣ, ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ವಿದರ್ಭ, ಸೌರಾಷ್ಟ್ರ ಮತ್ತು ಕಚ್, ತೆಲಂಗಾಣ, ಬಿಹಾರ, ಜಾರ್ಖಂಡ್‌ನಲ್ಲಿ ಮಳೆಯಾಗಲಿದೆ. ಇಂದಿನಿಂದ ಡಿಸೆಂಬರ್ 29ರವರೆಗೆ ಪಶ್ಚಿಮ ಹಿಮಾಲಯದ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಡಿಸೆಂಬರ್ 27ರಂದು ಕಾಶ್ಮೀರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ.












Click it and Unblock the Notifications