ರಾಜಸ್ಥಾನದ ವಿರಾಟನಗರಕ್ಕೆ ಚಕ್ರವರ್ತಿ ಯಾರು?
ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ವಿರಾಟನಗರ ಸಹ ಒಂದು. ಮೌರ್ಯ ಸಾಮ್ರಾಜ್ಯದ ಭಾಗವಾಗಿದ್ದ ವಿರಾಟನಗರವನ್ನು ಬೈರತ್ ಎಂದೂ ಕರೆಯಲಾಗುತ್ತದೆ. ಈ ಕ್ಷೇತ್ರ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.
ಈ ಕ್ಷೇತ್ರದಲ್ಲಿ ಒಟ್ಟು 314002 ಜನಸಂಖ್ಯೆ ಇದ್ದು, ಶೇ.99 ರಷ್ಟು ಹಿಂದುಗಳಿದ್ದರೆ, ಶೇ.1 ರಷ್ಟು ಮುಸ್ಲಿಮರಿದ್ದಾರೆ.
ಒಟ್ಟು 52.72 ಪ್ರತಿಶತ ಪುರುಷ ಮತ್ತು ಶೇ.47.28 ರಷ್ಟು ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
2013 ರ ಚುನಾವಣೆಯಲ್ಲಿ ಬಿಜೆಪಿಯ ಡಾ.ಪಿ ಸಿ ಭಿಂದಾ ಅವರು 57902 ಮತಗಳನ್ನು ಪಡೆದು, ಕಾಂಗ್ರೆಸ್ಸಿನ ರಾಮಚಂದ್ರ ಅವರನ್ನು ಸೋಲಿಸಿದ್ದರು. ರಾಮಚಂದ್ರ ಅವರು 48504 ಮತಗಳನ್ನು ಗಳಿಸಿದ್ದರು.
ಈ ವರ್ಷ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ರಾಮಚಂದ್ರ ಅವರ ವಿರುದ್ಧ ಬಿಜೆಪಿಯ ಡಾ.ಪಿ ಸಿ ಭಿಂದಾ ಅವರೇ ಸ್ಪರ್ಧಿಸಿದ್ದು, ಫಲಿತಾಂಶ ಕುತೂಹಲ ಕೆರಳಿಸಲಿದೆ. ಚುನಾವಣೆ ಡಿ.7 ರಂದು ನಡೆಯಲಿದ್ದು, ಫಲಿತಾಂಶ ಡಿ.11 ರಂದು ಹೊರಬೀಳಲಿದೆ.













Click it and Unblock the Notifications