ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ನ.12 ರಂದು ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ

|
Google Oneindia Kannada News

ಬೆಂಗಳೂರು, ನವೆಂಬರ್ 12: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನವೆಂಬರ್ 12 ರಂದು ಶುಕ್ರವಾರ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರವಾಗಿದೆ.

ಶುಕ್ರವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಪ್ರತಿ ಲೀಟರ್ ಗೆ 100.58 ರೂ. ಮತ್ತೆ ಡೀಸೆಲ್ ಪ್ರತಿ ಲೀಟರ್‌ಗೆ 85.01 ರೂ. ಇದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 103.97 ರೂ., ಡೀಸೆಲ್ ದರ 86.67 ರೂ. ಮುಂಬೈನಲ್ಲಿ, ಪೆಟ್ರೋಲ್ ಅನ್ನು ಲೀಟರ್‌ಗೆ 109.98 ರೂ.ಗೆ ಖರೀದಿಸಬಹುದು ಮತ್ತು ಡೀಸೆಲ್ ಬೆಲೆ ಒಂದು ಲೀಟರ್‌ಗೆ 94.14 ರೂ.

ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.40 ರೂ. ಶುಕ್ರವಾರ ಪ್ರತಿ ಲೀಟರ್ ಡೀಸೆಲ್ ಬೆಲೆ 91.43 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.67 ರೂ., ಡೀಸೆಲ್ ಬೆಲೆ ಲೀಟರ್‌ಗೆ 101.56 ರೂ., ಭೋಪಾಲ್‌ನಲ್ಲಿ 107.23 ರೂ.ಗೆ ಪೆಟ್ರೋಲ್ ಖರೀದಿಸಬಹುದು, ಅಂದರೆ 6.27 ರೂ. ಇಳಿಕೆಯಾಗಿದೆ, ಡೀಸೆಲ್ ಬೆಲೆ(Diesel price) ಲೀಟರ್‌ಗೆ 90.87 ರೂ.

ಕೇಂದ್ರದ ಅಬಕಾರಿ ಸುಂಕ ಕಡಿತ ಮತ್ತು 20ಕ್ಕೂ ಹೆಚ್ಚು ರಾಜ್ಯಗಳು ಕಡಿತಗೊಳಿಸಿರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮಧ್ಯೆ ದೇಶದಾದ್ಯಂತ ಸತತ 7ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವಾರ ಕೇಂದ್ರ ಸರ್ಕಾರ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.

ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ.ನಷ್ಟು ಕಡಿಮೆ ಮಾಡಿತ್ತು. ಬೆಲೆ ಕಡಿತದ ನಂತರ ಪೆಟ್ರೋಲ್ ಬೆಲೆ ಬಹುತೇಕ ಭಾಗದಲ್ಲಿ ಲೀಟರ್‌ಗೆ ರೂ 100 ರೂ.ಗಿಂತ ಕಡಿಮೆಯಾಗಿದೆ. ಆಡಳಿತಾರೂಢ ಬಿಜೆಪಿ ಸೇರಿದಂತೆ ಕೆಲವು ರಾಜ್ಯಗಳು ಇಂಧನ ದರದ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿವೆ.

Petrol Rates Stable On November 12 Across Karnataka

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.

ತೈಲ ಕಂಪನಿಗಳು ಅಳವಡಿಸಿಕೊಂಡ ಬೆಲೆ ಸೂತ್ರದ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್( BPCL ), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ( HPCL)ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಯನ್ನು ಪ್ರತಿದಿನ ಪರಿಷ್ಕರಿಸುತ್ತವೆ. ಪ್ರಸ್ತುತ ದೇಶದ 4 ಮೆಟ್ರೋ ನಗರಗಳಲ್ಲಿ ಇಂಧನ ದರ ಅತ್ಯಧಿಕವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಬದಲಾಗುತ್ತವೆ. ಸಂಜೆ 6 ರಿಂದ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ಅಬಕಾರಿ ತೆರಿಗೆ, ಡೀಲರ್ ಕಮಿಷನ್ ಮತ್ತು ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ.

ವಿದೇಶಿ ವಿನಿಮಯ ದರಗಳೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆ ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬದಲಾಗುತ್ತವೆ.

Petrol Rates Stable On November 12 Across Karnataka

ವಿವಿಧ ಜಿಲ್ಲೆಗಳ ಪೆಟ್ರೋಲ್ ದರ

ಬಾಗಲಕೋಟೆ - 101.53 ರೂ.
ಬೆಂಗಳೂರು - 100.58 ರೂ.
ಬೆಂಗಳೂರು ಗ್ರಾಮಾಂತರ -100.38
ಬೆಳಗಾವಿ - 100.82 ರೂ.
ಬಳ್ಳಾರಿ - 102.57ರೂ.
ಬೀದರ್ - 101.04
ವಿಜಯಪುರ-100.92 ರೂ.
ಚಾಮರಾಜನಗರ - 100.99 ರೂ.
ಚಿಕ್ಕಬಳ್ಳಾಪುರ - 101.64ರೂ.
ಚಿಕ್ಕಮಗಳೂರು - 101.59ರೂ.
ಚಿತ್ರದುರ್ಗ - 102.03 ರೂ.
ದಕ್ಷಿಣ ಕನ್ನಡ - 99.76
ದಾವಣಗೆರೆ - 102.75 ರೂ.
ಧಾರವಾಡ - 100.31ರೂ.
ಗದಗ - 100.87 ರೂ.
ಕಲಬುರಗಿ - 100.58ರೂ.
ಹಾಸನ - 100.63 ರೂ.
ಹಾವೇರಿ - 101.38 ರೂ.
ಕೊಡಗು - 101.92 ರೂ.
ಕೋಲಾರ - 100.71 ರೂ.
ಕೊಪ್ಪಳ- 101.77 ರೂ.
ಮಂಡ್ಯ - 100.46 ರೂ.
ಮೈಸೂರು - 100.08 ರೂ.
ರಾಯಚೂರು - 101ರೂ.
ರಾಮನಗರ - 100.93 ರೂ.
ಶಿವಮೊಗ್ಗ - 102.10 ರೂ.
ತುಮಕೂರು - 101.15 ರೂ.
ಉಡುಪಿ - 100.23ರೂ.
ಉತ್ತರಕನ್ನಡ - 101.04ರೂ
ಯಾದಗಿರಿ - 101.25ರೂ.

ಡೀಸೆಲ್ ದರ
ಬಾಗಲಕೋಟೆ - 85.90
ಬೆಂಗಳೂರು - 85.01
ಬೆಂಗಳೂರು ಗ್ರಾಮಾಂತರ - 84.83
ಬೆಳಗಾವಿ - 85.26
ಬಳ್ಳಾರಿ - 86.83
ಬೀದರ್ - 85.45
ಬಿಜಾಪುರ - 85.35
ಚಾಮರಾಜನಗರ - 85.38
ಚಿಕ್ಕಬಳ್ಳಾಪುರ - 85.07
ಚಿಕ್ಕಮಗಳೂರು - 86.82
ಚಿತ್ರದುರ್ಗ - 86.20
ದಕ್ಷಿಣ ಕನ್ನಡ - 84.24
ದಾವಣಗೆರೆ - 86.55
ಧಾರವಾಡ - 84.79
ಗದಗ - 85.29
ಕಲಬುರಗಿ - 85.04
ಹಾಸನ - 84.93
ಹಾವೇರಿ - 85.76
ಕೊಡಗು - 86.05
ಕೋಲಾರ - 85.76
ಕೊಪ್ಪಳ- 86.11
ಮಂಡ್ಯ - 84.90
ಮೈಸೂರು -84.56
ರಾಯಚೂರು - 84.87
ರಾಮನಗರ - 85.33
ಶಿವಮೊಗ್ಗ - 86.30
ತುಮಕೂರು - 85.53
ಉಡುಪಿ - 84.66
ಉತ್ತರಕನ್ನಡ - 85.66
ಯಾದಗಿರಿ - 85.39

English summary
Petrol rates stable on November 12 Across Karnataka. A litre of petrol now costs Rs 100.58 ರೂ, Diesel at Rs 85.01 ರೂ per litre in Bengaluru. Check out prices of other towns of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X