Infographics: ವೈವಿಧ್ಯಮಯ, ವಿಸ್ತೃತ, ವಿನೂತನ ಸಂಸತ್ ಭವನ
ನವದೆಹಲಿ, ಡಿ. 10: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ(ಡಿಸೆಂಬರ್ 10)ದಂದು ನವದೆಹಲಿಯ ಸಂಸದ್ ಮಾರ್ಗದಲ್ಲಿ ನೂತನ ಸಂಸತ್ ಭವನದ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಟಾಟಾ ಸಮೂಹ ಸಂಸ್ಥೆಯಿಂದ ನಿರ್ಮಾಣಗೊಳ್ಳುತ್ತಿರುವ ಈ ತ್ರಿಕೋನಾಕಾರದ ಕಟ್ಟಡದ ಯೋಜನಾ ವೆಚ್ಚ 971 ಕೋಟಿ ರು.
ನೂತನ ಸಂಸತ್ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದ ನೇರ ಪ್ರಸಾರ ವಿಡಿಯೋ :
2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿದ್ದು, ಜನತೆಗೆ ಕೊಡುಗೆ ಎಂದು ಮೋದಿ ಹೇಳಿದ್ದಾರೆ. ಈ ಕಟ್ಟಡ ವಿಶೇಷಗಳತ್ತ ಒಂದು ನೋಟ ಇಲ್ಲಿದೆ...
ಲೋಕಸಭೆಯ ಒಳಾಂಗಣ ಪ್ರದೇಶ ಹಾಲಿ ಇರುವುದಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ ಮತ್ತು ರಾಜ್ಯಸಭೆಯ ವಿಸ್ತ್ರೀರ್ಣ ಗಣನೀಯವಾಗಿ ಹೆಚ್ಚಾಗಲಿದೆ. ಹೊಸ ಭವನ ಒಳಾಂಗಣ ವಿನ್ಯಾಸದಲ್ಲಿ ಭಾರತೀಯ ಸಂಸ್ಕೃತಿ ಮತ್ತು ನಮ್ಮ ಪ್ರಾದೇಶಿಕ ಕಲೆ, ಕರಕುಶಲಕಲೆ, ಜವಳಿ ಮತ್ತು ವಾಸ್ತುಶಿಲ್ಪ ಸೇರಿದಂತೆ ವೈವಿಧ್ಯತೆಯ ಸಮ್ಮಿಶ್ರಣವಾಗಿರಲಿದೆ. ಇದರ ವಿನ್ಯಾಸದಲ್ಲಿ ಅದ್ಭುತ ಕೇಂದ್ರೀಯ ಸಂವಿಧಾನ ಗ್ಯಾಲರಿಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಅದಕ್ಕೆ ಸಾರ್ವಜನಿಕರ ಭೇಟಿ ನೀಡಲು ಅವಕಾಶವಿರಲಿದೆ.

ಕಟ್ಟಡದ ವಿಸ್ತೀರ್ಣ: 64,500 ಚದರ ಮೀಟರ್.
ಲೋಕಸಭೆ ಆಸನ ಸಂಖ್ಯೆ: 888 ಸದಸ್ಯರಿಗೆ
ರಾಜ್ಯಸಭೆ ಆಸನ ಸಂಖ್ಯೆ: 384ಕ್ಕೇರಿದೆ
ಜಂಟಿ ಅಧಿವೇಶನದಲ್ಲಿ ಒಮ್ಮೆಗೆ 1,224 ಕುಳಿತುಕೊಳ್ಳುವ ವ್ಯವಸ್ಥೆಯೂ ಇರಲಿದೆ.

ನೂತನ ಸಂಸತ್ ಭವನದ ನಿರ್ಮಾಣದಲ್ಲಿ ಹಸಿರು ತಂತ್ರಜ್ಞಾನದ ಪರಿಣಾಮಕಾರಿ ಸಂಪನ್ಮೂಲವನ್ನು ಬಳಸಿಕೊಳ್ಳಲಾಗುತ್ತಿದ್ದು, ಪರಿಸರಸ್ನೇಹಿ ಪದ್ಧತಿಗಳಿಗೆ ಉತ್ತೇಜನ ನೀಡಲಾಗುತ್ತಿದೆ.

ಈ ಕಟ್ಟಡದಲ್ಲಿ ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳಲಾಗುತ್ತಿದ್ದು, ಭೂಕಂಪನ ವಲಯದ ಐದು ಅಗತ್ಯತೆಗಳನ್ನು ಅನುಸರಿಸಲಾಗುತ್ತಿದೆ.












Click it and Unblock the Notifications