• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಕೆ ಸ್ಟಾಲಿನ್ ಸಚಿವ ಸಂಪುಟ: ಯಾರಿಗೆ ಯಾವ ಖಾತೆ?

|
Google Oneindia Kannada News

ಚೆನ್ನೈ, ಮೇ 7: ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮುಖ್ಯಸ್ಥ, ಶಾಸಕಾಂಗ ಪಕ್ಷದ ನಾಯಕ ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್ ಅವರ ಆಸೆ ಕೊನೆಗೂ ಈಡೇರಿದೆ. ತಮಿಳುನಾಡಿನಲ್ಲಿ ಮತ್ತೊಮ್ಮೆ ಡಿಎಂಕೆ ಅಧಿಕಾರಾವಧಿ ಆರಂಭವಾಗಿದೆ.

ತಮಿಳುನಾಡಿನ ರಾಜಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಸ್ಟಾಲಿನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಭನ್ವಾರಿಲಾಲ್ ಪುರೋಹಿತ್ ಅವರು ಸ್ಟಾಲಿನ್ ಹಾಗೂ ಸಚಿವ ಸಂಪುಟ ಸದಸ್ಯರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ತಮಿಳುನಾಡು ವಿಧಾನಸಭೆ ಚುನಾವಣೆ 2021ರಲ್ಲಿ ಎಐಎಡಿಎಂಕೆ- ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವ ಮೂಲಕ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಜಯಭೇರಿ ಬಾರಿಸಿದೆ. ಈ ಮೂಲಕ ದಶಕದ ಬಳಿಕ ಡಿಎಂಕೆ ಅಧಿಕಾರ ಪಡೆದುಕೊಂಡಿದೆ. ಏಪ್ರಿಲ್ 6ರಂದು ನಡೆದ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟವು 234 ಸ್ಥಾನಗಳ ಪೈಕಿ ಡಿಎಂಕೆ 133 ಸ್ಥಾನ ಗಳಿಸಿದರೆ, ಕಾಂಗ್ರೆಸ್ 18 ಸ್ಥಾನ, ವಿಸಿಕೆ 4 ಹಾಗೂ ಎಡಪಕ್ಷಗಳು ತಲಾ 2 ಸ್ಥಾನ ಗಳಿಸಿವೆ. ಎಐಎಡಿಎಂಕೆ 66, ಬಿಜೆಪಿ 4 ಸ್ಥಾನ ಪಡೆದುಕೊಂಡಿವೆ.

ಸ್ಟಾಲಿನ್ ಸಚಿವ ಸಂಪುಟದಲ್ಲಿ 33 ಸದಸ್ಯರಿದ್ದು, ಹಿರಿಯರಾದ ದೊರೈಮುರುಗನ್ ಅವರಿಗೆ ಜಲ ಸಂಪನ್ಮೂಲ ಖಾತೆ ನೀಡಲಾಗಿದೆ. ಚೆನ್ನೈನ ಮಾಜಿ ಮೇಯರ್ ಸುಬ್ರಮಣಿಯನ್, ಪಿಕೆ ಶೇಖರ್ ಬಾಬು ಮುಂತಾದವರು ಮೊದಲ ಬಾರಿಗೆ ಸಚಿವರಾಗುತ್ತಿದ್ದಾರೆ. ಸ್ಟಾಲಿನ್ ಕ್ಯಾಬಿನೆಟ್‌ನಲ್ಲಿ ಇಬ್ಬರು ಶಾಸಕಿಯರಿಗೆ ಸ್ಥಾನ ಸಿಕ್ಕಿದೆ. ಸಮಾಜ ಕಲ್ಯಾಣ ಹಾಗೂ ಮಹಿಳಾ ಸಬಲೀಕರಣ ಖಾತೆಯನ್ನು ಪಿ ಗೀತಾ ಅವರಿಗೆ ವಹಿಸಲಾಗಿದೆ. ಆದಿ ದ್ರಾವಿಡರ ಕಲ್ಯಾಣ ಖಾತೆಯನ್ನು ಎನ್ ಕಯಾಲ್ ವಿಳಿ ಸೆಲ್ವರಾಜ್ ಅವರಿಗೆ ನೀಡಲಾಗಿದೆ.

English summary
DMK president MK Stalin on Friday taken oath as the chief minister of Tamil Nadu.Check Full List of 34 New Cabinet Ministers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X