ಮಿಜೋರಾಂನಲ್ಲಿ ಕನಿಷ್ಠ ಮತಗಳ ಅಂತರದಿಂದ ಗೆದ್ದವರು ಇವರು
ಐಜ್ವಾಲ್, ಡಿಸೆಂಬರ್ 11 : ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮಿಜೋ ನ್ಯಾಷನಲ್ ಫ್ರಂಟ್ ಭರ್ಜರಿ ಹೊಡೆತ ಕೊಟ್ಟಿದ್ದು, 40 ಸೀಟುಗಳಲ್ಲಿ 26 ಸೀಟುಗಳಲ್ಲಿ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಈ ಫಲಿತಾಂಶ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿಗೆ ಭಾರೀ ಮುಖಭಂಗವೇ ಸರಿ. ಏಕೆಂದರೆ, 2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 34ರಲ್ಲಿ ಗೆದ್ದು ಸರಕಾರ ರಚಿಸಿತ್ತು. ಈ ಸೋಲಿನಿಂದಾಗಿ ಈಶಾನ್ಯ ಭಾರತದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನಿರ್ನಾಮವಾದಂತಾಗಿದೆ.
ಅಂತಿಮವಾಗಿ ಕಾಂಗ್ರೆಸ್ ಕೇವಲ 5 ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿರುವ ಭಾರತೀಯ ಜನತಾ ಪಕ್ಷ ಕೂಡ ಮೊದಲ ಬಾರಿ ಗೆದ್ದು ಇತಿಹಾಸ ನಿರ್ಮಿಸಿದೆ. ಉಳಿದ 8 ಸ್ಥಾನಗಳು ಸ್ವತಂತ್ರ ಅಭ್ಯರ್ಥಿಗಳ ಪಾಲಾಗಿವೆ.
ಇಲ್ಲಿ ಗೆದ್ದಿರುವ ಮಿಜೋ ನ್ಯಾಷನಲ್ ಫ್ರಂಟ್ ನ ಅಧ್ಯಕ್ಷ ಜೋರಂತಂಗ ಅವರು ರಾಜ್ಯಪಾಲ ಕುಮ್ಮನಮ್ ರಾಜಶೇಖರನ್ ಅವರನ್ನು ಈಗಾಗಲೆ ಭೇಟಿಯಾಗಿದ್ದು, ಸರಕಾರ ರಚಿಸುವ ಕುರಿತು ಮಾತುಕತೆ ನಡೆಸಿದ್ದಾರೆ.
ಇಲ್ಲಿ ಹಲವಾರು ಕ್ಷೇತ್ರಗಳಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟು, ಕನಿಷ್ಠ ಮತಗಳಿಂದ ಜಯಶಾಲಿಯಾದ ಶಾಸಕರ ವಿವರಗಳನ್ನು ಇಲ್ಲಿ ನೀಡಲಾಗಿದೆ. ಅತ್ಯಂತ ಕಡಿಮೆ ಅಂತರದಿಂದ ಗೆದ್ದವರು ಮಿಜೋ ನ್ಯಾಷನಲ್ ಫ್ರಂಟ್ ನ ಲಾಲ್ ಛಂದ್ಮ ರಾಲ್ಟೆ. ಅವರು ಕೇವಲ 3 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಆರ್ ಎಲ್ ಪಿಯಾನ್ಮಾವಿಯಾ ವಿರುದ್ಧ ಗೆದ್ದಿದ್ದಾರೆ. ಉಳಿದವರ ವಿವರಗಳು ಇಲ್ಲಿವೆ.













Click it and Unblock the Notifications