ಡಿಸೆಂಬರ್ 17ರಂದು ಕರ್ನಾಟಕದ ಡ್ಯಾಂಗಳ ನೀರಿನ ಮಟ್ಟ
ಬೆಂಗಳೂರು, ಡಿಸೆಂಬರ್ 17; ನವೆಂಬರ್‌ನಲ್ಲಿ ಕರ್ನಾಟಕದಲ್ಲಿ ಅಕಾಲಿಕ ಮಳೆ ಸುರಿದಿತ್ತು. ಮಳೆಯಿಂದಾಗಿ ಕೃಷಿ, ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿತ್ತು. ಹಾನಿಯ ಬಗ್ಗೆ ಅಂದಾಜು ನಡೆಸಲು ಕೇಂದ್ರ ಸರ್ಕಾರದ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದೆ. ವಿವಿಧ ಜಿಲ್ಲೆಗಳಲ್ಲಿ ತಂಡ ಹಾನಿಯ ಅಂದಾಜು ನಡೆಸುತ್ತಿದೆ.
ಅಕಾಲಿಕ ಮಳೆಯಿಂದಾಗಿ ಕೊಯ್ಲಿಗೆ ಬಂದ ಕೃಷಿ, ತೋಟಗಾರಿಕಾ ಬೆಗಳಿಗೆ ಹಾನಿಯಾಗಿತ್ತು. ಮನೆಗಳಿಗೆ ಹಾನಿಯಾಗಿತ್ತು. ಕರ್ನಾಟಕ ಸರ್ಕಾರ ಮಾರ್ಗಸೂಚಿ ಪ್ರಕಾರ ಮನೆಗಳಿಗೆ ಹಾನಿಯಾಗಿರುವುದಕ್ಕೆ ಪರಿಹಾರ ನೀಡಿದೆ. ಕೇಂದ್ರ ತಂಡ ನಷ್ಟದ ಅಂದಾಜು ನಡೆಸಿ, ಸರ್ಕಾರಕ್ಕೆ ವರದಿ ನೀಡಲಿದ್ದು, ಬಳಿಕ ಕೇಂದ್ರ ಪರಿಹಾರ ಘೋಷಣೆ ಮಾಡಲಿದೆ.
ಧಾರವಾಡ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತಿದೆ. ಜಿಲ್ಲಾಡಳಿತ ಜೊತೆ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಮಾಡುತ್ತಿದೆ. ರೈತರ ಹೊಲಗಳಿಗೆ ಭೇಟಿ ನೀಡಿ, ಸಂವಾದ ಮಾಡುತ್ತಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ಸಹ ತಾವು ತಯಾರು ಮಾಡಿದ ವರದಿಯನ್ನು ಅಧಿಕಾರಿಗಳಿಗೆ ನೀಡುತ್ತಿದ್ದಾರೆ.
ವಿವಿಧ ಜಿಲ್ಲೆಗಳಿಗೆ ಮಳೆಹಾನಿ ಪರಿಶೀಲನೆಗಾಗಿ ಕೇಂದ್ರ ಸರ್ಕಾರದ ಆಂತರಿಕ ಇಲಾಖಾ ಅಧಿಕಾರಿಗಳ ಅಧ್ಯಯನ ತಂಡದಲ್ಲಿ ಜಲಶಕ್ತಿ ಮಂತ್ರಾಲಯ, ಹಣಕಾಸು ಮಂತ್ರಾಲಯದ ಅಧಿಕಾರಿಗಳು ಆಗಮಿಸಿದ್ದಾರೆ. ಶನಿವಾರ ಸಹ ರಾಜ್ಯದಲ್ಲಿ ಪರಿಶೀಲನೆ ನಡೆಸಲಿದ್ದಾರೆ.

ಲಿಂಗನಮಕ್ಕಿ, ಹಾರಂಗಿ, ಹೇಮಾವತಿ
ಲಿಂಗನಮಕ್ಕಿ ಜಲಾಶಯದ ಶುಕ್ರವಾರದ ನೀರಿನ ಮಟ್ಟ 551.74 ಮೀಟರ್. ಡ್ಯಾಂನ ಪೂರ್ಣ ಮಟ್ಟ 554.44 ಮೀಟರ್. ಜಲಾಶಯಕ್ಕೆ ಒಳಹರಿವು 1275 ಕ್ಯುಸೆಕ್. ಡ್ಯಾಂನಿಂದ ಹೊರ ಹರಿವು 4587 ಕ್ಯುಸೆಕ್ ದಾಖಲಾಗಿದೆ.
ಹಾರಂಗಿ ಜಲಾಶಯದ ಪೂರ್ಣ ಮಟ್ಟ 871.38 ಮೀಟರ್. ಶುಕ್ರವಾರ ಜಲಾಶಯದಲ್ಲಿ 869.81 ಮೀಟರ್ ನೀರಿನ ಸಂಗ್ರಹವಿದೆ. 65 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೊರ ಹರಿವು 350 ಕ್ಯುಸೆಕ್ ಆಗಿದೆ.
ಹೇಮಾವತಿ ಜಲಾಶಯದ ಶುಕ್ರವಾರದ ನೀರಿನ ಮಟ್ಟ 887.62 ಮೀಟರ್ ಆಗಿದೆ. ಜಲಾಶಯದ ಪೂರ್ಣ ಮಟ್ಟ 890.58 ಮೀಟರ್. 484 ಕ್ಯುಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಹೊರ ಹರಿವು 2550 ಕ್ಯುಸೆಕ್ ಆಗಿದೆ.

ಕೆಆರ್‌ಎಸ್, ಕಬಿನಿ, ಭದ್ರಾ ಡ್ಯಾಂ
ಕಬಿನಿ ಜಲಾಶಯದಲ್ಲಿ ಶುಕ್ರವಾರ 695.98 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 696.13 ಮೀಟರ್. ಜಲಾಶಯಕ್ಕೆ ಕ್ಯುಸೆಕ್ ಒಳಹರಿವು 780 ಕ್ಯುಸೆಕ್, ಹೊರ ಹರಿವು 1000 ಕ್ಯುಸೆಕ್ ಆಗಿದೆ.
ಮಂಡ್ಯದಲ್ಲಿರುವ ಕೆಆರ್‌ಎಸ್ ಈಗಾಗಲೇ ಭರ್ತಿಯಾಗಿದೆ. ಶುಕ್ರವಾರ ಡ್ಯಾಂನಲ್ಲಿ 38.04 ಮೀಟರ್ ನೀರಿನ ಸಂಗ್ರಹವಿದೆ. ಜಲಾಶಯದ ಪೂರ್ಣ ಮಟ್ಟ 38.04 ಮೀಟರ್ ಆಗಿದೆ. ಒಳಹರಿವು 3434 ಕ್ಯುಸೆಕ್ ಮತ್ತು ಹೊರ ಹರಿವು 3224 ಕ್ಯುಸೆಕ್.
ಭದ್ರಾ ಜಲಾಶಯದಲ್ಲಿ ಶುಕ್ರವಾರ 657.73 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣಮಟ್ಟ 657.73 ಮೀಟರ್. ಜಲಾಶಯಕ್ಕೆ ಒಳಹರಿವು 1057 ಕ್ಯುಸೆಕ್ ಆಗಿದೆ. ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ
ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಶುಕ್ರವಾರ ಡ್ಯಾಂನಲ್ಲಿ 497.67 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂನ ಪೂರ್ಣಮಟ್ಟ 497.71 ಮೀಟರ್. ಜಲಾಶಯಕ್ಕೆ 2788 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೊರ ಹರಿವು 6350 ಕ್ಯುಸೆಕ್ ಆಗಿದೆ.
ಆಲಮಟ್ಟಿ ಜಲಾಶಯದ ಪೂರ್ಣ ಮಟ್ಟ 519.60 ಮೀಟರ್. ಶುಕ್ರವಾರ ಜಲಾಶಯದ ನೀರಿನ ಮಟ್ಟ 519.26 ಮೀಟರ್ ಆಗಿದೆ. ಒಳ ಹರಿವು 3522 ಕ್ಯುಸೆಕ್, ಹೊರ ಹರಿವು 9390 ಕ್ಯುಸೆಕ್ ಆಗಿದೆ.
ನಾರಾಯಣಪುರ ಜಲಾಶಯದ ಶುಕ್ರವಾರದ ನೀರಿನ ಮಟ್ಟ 491.45 ಮೀಟರ್. ಡ್ಯಾಂ ಪೂರ್ಣ ಮಟ್ಟ 492.25 ಮೀಟರ್. ಒಳಹರಿವು 8315 ಕ್ಯುಸೆಕ್ ಆಗಿದೆ. ಹೊರ ಹರವು 7820 ಕ್ಯುಸೆಕ್.

ಸೂಪ, ಘಟಪ್ರಭಾ, ಮಲಪ್ರಭಾ
ಸೂಪಾ ಜಲಾಶಯದಲ್ಲಿ ಶುಕ್ರವಾರ 553.68 ಮೀಟರ್ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 564.00 ಮೀಟರ್ ಆಗಿದೆ. ಜಲಾಶಯದ ಒಳ ಹರಿವು 400 ಕ್ಯುಸೆಕ್, ಹೊರ ಹರಿವು 2929 ಕ್ಯುಸೆಕ್ ಆಗಿದೆ.
ಘಟಪ್ರಭಾ ಜಲಾಯಶದ ಪೂರ್ಣ ಮಟ್ಟ 662.91 ಮೀಟರ್. ಶುಕ್ರವಾರ ಜಲಾಶಯದಲ್ಲಿ 660.22 ಮೀಟರ್ ನೀರಿದೆ. ಜಲಾಶಯದ ಹೊರ ಹರಿವು 170 ಕ್ಯುಸೆಕ್ ಆಗಿದೆ.
ಮಲಪ್ರಭಾ ಜಲಾಶಯದಲ್ಲಿ ಶುಕ್ರವಾರ 633.02 ಮೀಟರ್ ನೀರಿನ ಸಂಗ್ರಹವಿದೆ. ಪೂರ್ಣ ಮಟ್ಟ 633.80 ಮೀಟರ್. ಹೊರ ಹರಿವು 769 ಕ್ಯುಸೆಕ್ ಆಗಿದೆ.












Click it and Unblock the Notifications