ಕರ್ನಾಟಕದ ಹವಾಮಾನ: ಕಲಬುರಗಿಯಲ್ಲಿ ಸುಡು ಬಿಸಿಲು, ಕರಾವಳಿಯಲ್ಲಿ ಮಳೆ

ಈಶಾನ್ಯ ಮಾರುತಗಳು ಅರಬ್ಬೀಸಮುದ್ರವನ್ನು ಆವರಿಸುತ್ತಿದ್ದು, ಕರ್ನಾಟಕ -ಕೇರಳ ಗಡಿ ಭಾಗದ ಕರಾವಳಿ ಜಿಲ್ಲೆಗಳಲ್ಲಿ ಸೈಕ್ಲೋನ್ ಮಾದರಿ ಗಾಳಿ ಮಳೆ ಸುರಿಯಲಿದೆ. ಈ ಮೂಲಕ ಮುಂಗಾರು ಪೂರ್ವ ಮಳೆ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಎರಡು ದಿನಗಳಿಂದ ಮಲೆನಾಡು, ಕರಾವಳಿ ಭಾಗ ತಂಪಾಗಿದೆ. ಇದೇ ವೇಳೆ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೂರ್ಯ ಪ್ರಕಾಶಮಾನವಾಗಿದ್ದು, ಸುಡು ಬಿಸಿಲಿನಿಂದ ಚುಚ್ಚುತ್ತಿದ್ದಾನೆ.

ಬೆಂಗಳೂರಿನಲ್ಲಿ ಶುಭ್ರ ಆಕಾಶವಿದ್ದು, ಭಾಗಶಃ ಮೋಡವಿದ್ದರೂ ಮಧ್ಯಾಹ್ನದ ವೇಳೆಗೆ ಬಿಸಿಲು ಜೋರಾಗಲಿದೆ. ಮಾರ್ಚ್ 12ರಂದು ಬೆಂಗಳೂರು ನಗರದಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್‌ಎಎಲ್‌ನಲ್ಲಿ 32.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಮುಂದುವರೆಯಲಿದೆ. ಮಧ್ಯ ಕರ್ನಾಟಕ ಭಾಗದಲ್ಲೂ ಒಣ ಹವೆ ಇರಲಿದೆ. ದಾವಣಗೆರೆಯಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ತನಕ ತಲುಪಿ ಇಂದು ಬಿಸಿಲು ಬಾಧಿಸಲಿದೆ.

ಕರ್ನಾಟಕದ ವಿವಿಧ ಪಟ್ಟಣಗಳಲ್ಲಿ ತಾಪಮಾನ ವಿವರ ಇಲ್ಲಿದೆ:(ವಿನ್ಯಾಸ: ಭರತ್ ಎಚ್.ಸಿ)

Karnataka Weather Forecast: Rain in Malenadu, Karavali, mercury on rise North Karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+