ಚಿತ್ರವಿವರ: ದ್ವಿತೀಯ ಪಿಯುಸಿ ಫಲಿತಾಂಶ- ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?
ಬೆಂಗಳೂರು, ಏಪ್ರಿಲ್ 15: ಬಹುನಿರೀಕ್ಷಿತ ದ್ವಿತೀಯ ಪದವಿ ಪೂರ್ವ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮೊದಲೆರಡು ಸ್ಥಾನ ಗಳಿಸಿವೆ.
ದ್ವಿತೀಯ ಪಿಯು ಪರೀಕ್ಷೆ ಮಾ.1ರಿಂದ ಮಾರ್ಚ್ 18ರವರೆಗೆ ನಡೆದಿತ್ತು. ಪ್ರಸಕ್ತ ಸಾಲಿನಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ವಿಜ್ಞಾನ ವಿಭಾಗದಲ್ಲಿ 597(600) ಅಂಕ ಪಡೆದು ಕೃತಿ ಮುತ್ತಗಿ, ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ವರ್ಷಿಣಿ ಮತ್ತು ಅಮೃತಾ ಎಂಬ ಇಬ್ಬರು ವಿದ್ಯಾರ್ಥಿನಿಯರು ತಲಾ 595(600) ಅಂಕ ಪಡೆದು, ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದು ಪಿಯು ಕಾಲೇಜ್ ಸ್ವಾತಿ ಎಸ್. 595(600) ಅಂಕ ಪಡೆದು ಟಾಪರ್ಸ್ ಗಳಾಗಿದ್ದಾರೆ.
ಉಡುಪಿ ಪಟ್ಟಿಯ ಮೊದಲ ಸ್ಥಾನದಲ್ಲಿದ್ದರೆ, ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ. ಜಿಲ್ಲಾವಾರು ಫಲಿತಾಂಶದ ಚಿತ್ರ ವಿವರ ಇಲ್ಲಿದೆ.













Click it and Unblock the Notifications