ರಾಜ್ಯದಲ್ಲಿ ಎಲ್ಲಿ ಮಳೆ ಮುನ್ಸೂಚನೆ, ಜಲಾಶಯದ ಪ್ರಮಾಣ?
ಮಲೆನಾಡು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆ ಅಬ್ಬರ ತಗ್ಗಿದೆ. ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 3 ರವರೆಗೆ ಸಾಧಾರಣದಿಂದ ವ್ಯಾಪಕ ಮಳೆಯಾದರೆ, ಸೆಪ್ಟೆಂಬರ್ 2 ಮತ್ತು 3 ರಂದು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಬೆಂಗಳೂರಿನ ಐಎಂಡಿ ವಿಜ್ಞಾನಿ ಮತ್ತು ನಿರ್ದೇಶಕ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಬಿಬಿಎಂಪಿ ಮಳೆ ಮುನ್ಸೂಚನೆ: ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಗುಡುಗು ಸಹಿತ ಬಲವಾದ ಮೈಲ್ಮೈಸುಳಿಗಾಳಿ ಬೀಸುತ್ತಿದ್ದು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಹೊರವಲಯದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ಮತ್ತಿತರೆ ಕಡೆಗಳಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ.
ಕಳೆದ 24 ಗಂಟೆಗಳಲ್ಲಿ ಅತ್ಯಧಿಕ ಮಳೆ 125.5 ಮಿ.ಮೀರಷ್ಟು ಬೆಂಗಳೂರು ದಕ್ಷಿಣ ಜಿಲ್ಲೆಯ ನೆಲಗುಳಿ ಎಂಬಲ್ಲಿ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೇಳಿದೆ.
ಮಳೆ ಮುನ್ಸೂಚನೆ: ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆ. ಮಲೆನಾಡು ಜಿಲ್ಲೆಗಳಿಗೆ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆ. ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಈ ನಡುವೆ ಕರ್ನಾಟಕದಲ್ಲಿ ಇಂದಿನ (ಆಗಸ್ಟ್ 31) ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಇಲ್ಲಿ ತಿಳಿಯಿರಿ...ಕೃಷ್ಣರಾಜಸಾಗರ, ಹೇಮಾವತಿ, ಲಿಂಗನಮಕ್ಕಿ, ಭದ್ರಾ, ಬಸವಸಾಗರ(ನಾರಾಯಣಪುರ), ಹಾರಂಗಿ, ಕಬಿನಿ, ತುಂಗಭದ್ರಾ, ಆಲಮಟ್ಟಿ, ಸೂಪಾ, ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ..
ಅಣೆಕಟ್ಟಿನ ಪ್ರತಿದಿನ ನೀರಿನ ಮಟ್ಟ(ಆಗಸ್ಟ್ 31 ಅಂಕಿ ಅಂಶ ಕೃಪೆ: KSNMDC) ತಿಳಿಯಲು ಕ್ಲಿಕ್ ಮಾಡಿ: ವಿನ್ಯಾಸ: ಭರತ್ ಎಚ್. ಸಿ.













Click it and Unblock the Notifications