ಸಚಿತ್ರ ವರದಿ : 10 ಕೋಟಿ ಬಡವರಿಗೆ ಆಶಾಕಿರಣವಾದ 'ಮೋದಿ ಕೇರ್'

Recommended Video

      ನರೇಂದ್ರ ಮೋದಿಯಿಂದ ವಿಶ್ವದ ಅತಿ ದೊಡ್ಡ ಅರೋಗ್ಯ ವಿಮೆ ಯೋಜನೆ ಅಯುಷ್ಮಾನ್ ಭಾರತ್ ಉದ್ಘಾಟನೆ | Oneindia Kannada

      ರಾಂಚಿ, ಸೆಪ್ಟೆಂಬರ್ 24: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಯುಷ್ಮಾನ್ ಭಾರತ್ ಬಗ್ಗೆ ವಿಪಕ್ಷಗಳು ಎಂದಿನಂತೆ ಅಪಸ್ವರ ಎತ್ತಿವೆ. ಆದರೆ, ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಯೋಜನೆ ಎನಿಸಿರುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾತಿ, ಉಚ್ಚ-ನೀಚ ಎಂಬ ಪಕ್ಷಪಾತ ಮಾಡದೆ, ಅರ್ಥಿಕವಾಗಿ ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ರೂಪಿಸಲಾಗಿದೆ. ಇದು ವೋಟ್ ಬ್ಯಾಂಕ್ ರಾಜಕೀಯವಲ್ಲ ಎಂದು ಮೋದಿ ಹೇಳಿದ್ದಾರೆ.

      ಸಾಮಾಜಿಕ ಆರ್ಥಿಕ ಜಾತಿ ಸಮೀಕ್ಷೆ (ಎಸ್ ಇ ಸಿಸಿ) 2011ರ ವರದಿಯಂತೆ 26 ರಾಜ್ಯಗಳ 444 ಜಿಲ್ಲೆಗಳಲ್ಲಿನ 10.74 ಕುಟುಂಬಗಳು ಆರೋಗ್ಯ ವಿಮೆ ನೆರವು ಪಡೆಯಲು ಯೋಗ್ಯವಾಗಿವೆ.

      ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(PMJAY) ಮೂಲಕ ವಾರ್ಷಿಕವಾಗಿ ಫಲಾನುಭವಿ ಕುಟುಂಬಕ್ಕೆ 5 ಲಕ್ಷ ರು ತನಕ ಸಿಗಲಿದೆ. ಸುಮಾರು 10 ಕೋಟಿ ಬಡ ಕುಟುಂಬಗಳಿಗೆ ಇದರಿಂದ ನೆರವಾಗಲಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಪ್ರತಿಯೊಂದು ರೋಗಕ್ಕೂ ಒಂದು ದರ ನಿರ್ಧರಿಸಲಾಗಿದೆ. ಈ ದರ ಪಟ್ಟಿಯಂತೆ ನೇರವಾಗಿ ಆಸ್ಪತ್ರೆಗಳಿಗೆ ಹಣ ಪಾವತಿಯಾಗಲಿದೆ.

      ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್ ಎಚ್ಎ) ಯು ಆಯುಷ್ಮಾನ್ ಭಾರತ್ ಯೋಜನೆ ಅಥವಾ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗಾಗಿ ವೆಬ್ ಸೈಟ್ ರೂಪಿಸಿದೆ. ಈ ವೆಬ್ ಸೈಟ್ ಮೂಲಕ ಫಲಾನುಭವಿಗಳು ವಿವರ ಪಡೆಯಬಹುದು. ತಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದೆಯೆ ಎಂದು ಪರಿಶೀಲಿಸಬಹುದು. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಹೇಗೆ? ಮುಂದೆ ಇನ್ಫೋಗ್ರಾಫಿಕ್ಸ್ ನಲ್ಲಿ ನೋಡಿ

      Infographics : PM Modi rolls out world’s largest health insurance scheme

      Infographics : PM Modi rolls out world’s largest health insurance scheme

      Infographics : PM Modi rolls out world’s largest health insurance scheme

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+