ಜುಲೈ 27ಕ್ಕೆ ಮಕರದಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ, ಉಪಯುಕ್ತ ಮಾಹಿತಿ
Recommended Video

ಚಂದ್ರ ಗ್ರಹಣಕ್ಕೆ ಇನ್ನೇನು ದಿನ ಗಣನೆ ಆರಂಭವಾಗಿದೆ. ಇದೇ ತಿಂಗಳು, ಅಂದರೆ ಜುಲೈ ಇಪ್ಪತ್ತೇಳನೇ ತಾರೀಕು ಕೇತುಗ್ರಸ್ತ ಚಂದ್ರಗ್ರಹಣ ಇದ್ದು, ಶತಮಾನದ ಸುದೀರ್ಘ ಚಂದ್ರ ಗ್ರಹಣ ಇದಾಗಿರಲಿದೆ. ಶುಭಕರವಲ್ಲದ ಈ ವಿದ್ಯಮಾನದ ಬಗ್ಗೆ ಈಗಾಗಲೇ ಸಾಕಷ್ಟು ಎಚ್ಚರಿಕೆ, ಮುಂಜಾಗ್ರತೆ ನೀಡಲಾಗಿದೆ. ಆ ದಿನದ ಕೆಲವು ಮುಖ್ಯ ಸೂಚನೆಗಳು ಇಲ್ಲಿವೆ.
ಮುಖ್ಯವಾಗಿ ಮಕರ ರಾಶಿಯಲ್ಲಿ ಗ್ರಹಣ ಸಂಭವಿಸುವುದರಿಂದ ಉತ್ತರಾಷಾಢ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಶ್ರವಣ ನಕ್ಷತ್ರದ ಒಂದರಿಂದ ನಾಲ್ಕನೇ ಪಾದದವರು, ಧನಿಷ್ಠಾ ನಕ್ಷತ್ರದ ಒಂದು ಮತ್ತು ಎರಡನೇ ಪಾದದವರು ಬಹಳ ಎಚ್ಚರಿಕೆಯಿಂದ ಇರಲೇಬೇಕು ಎಂಬುದು ನೆನಪಿನಲ್ಲಿರಲಿ.
ಇನ್ನು ವೃಷಭ, ಸಿಂಹ ಹಾಗೂ ಧನು ರಾಶಿಯವರು ಸಹ ಬಹಳ ಹುಷಾರಾಗಿ ಇರಲೇಬೇಕು. ಈಗಾಗಲೇ ಹೇಳಿದ ನಕ್ಷತ್ರಗಳನ್ನು ಬಿಟ್ಟು ಪೂರ್ವಾಷಾಢ, ರೋಹಿಣಿ, ಹಸ್ತ, ಕೃತ್ತಿಕಾ ಹಾಗೂ ಉತ್ತರಾ ನಕ್ಷತ್ರದವರು ಹಿಂದೆಂದಿಗಿಂತ ಹುಷಾರಾಗಿರಿ. ಗ್ರಹಣ ಶಾಂತಿ ಮಾಡಿಸಿಕೊಂಡರೆ ಉತ್ತಮ. ಒಟ್ಟಾರೆ ಚಂದ್ರ ಗ್ರಹಣದ ಬಗ್ಗೆ ನಿಮಗೆ ಗೊತ್ತಿರಲೇ ಬೇಕಾದ ಮುಖ್ಯ ಸಂಗತಿಗಳು ಇಲ್ಲಿವೆ.













Click it and Unblock the Notifications