Infographics: ಜೂನ್ 10ರಂದು ಕಡಿಮೆ ಆಗಿದ್ದೆಷ್ಟು ಚಿನ್ನದ ದರ?
ನವದೆಹಲಿ, ಜೂನ್ 10: ಭಾರತದಲ್ಲಿ ಚಿನ್ನದ ಬೆಲೆ ಯಾವಾಗ ಇಳಿಕೆಯಾಗುತ್ತೆ ಅಂತಾ ಎದುರು ನೋಡುತ್ತಿರುವವರಿಗೆ ಇದು ಖುಷಿಯ ಸುದ್ದಿ. ಕಳೆದ ಎರಡು ದಿನಗಳಿಂದ ಏರಿಕೆ ಕಂಡಿದ್ದ ಬಂಗಾರದ ಬೆಲೆಯಲ್ಲಿ ಶುಕ್ರವಾರ ಇಳಿಕೆಯಾಗಿದೆ. ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಿದ್ದು, 47,750 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂಪಾಯಿ ಕಡಿಮೆಯಾಗಿದ್ದು, 52,100 ರೂಪಾಯಿ ಆಗಿದೆ. ಬೆಳ್ಳಿ ದರದಲ್ಲಿ ಬರೋಬ್ಬರಿ 1000 ರೂಪಾಯಿ ಕಡಿಮೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 67,000 ರೂಪಾಯಿ ಇದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,750 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,100 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,750 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,100 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,750 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,100 ರೂ. ಇದೆ. ಚೆನ್ನೈನಲ್ಲಿ 47,850 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 52,200 ರೂಪಾಯಿ ಆಗಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 47,750 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 52,100 ರೂ ಇದೆ. ಇದೇ ರೀತಿ ಚಂಡೀಗಢ, ಸೂರತ್, ನಾಸಿಕ್‌ನಲ್ಲೂ 49 ಸಾವಿರಕ್ಕಿಂತ ಹೆಚ್ಚಾಗಿದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ 51 ಸಾವಿರಕ್ಕಿಂತ ಹೆಚ್ಚಾಗಿದೆ.

ಚಿನ್ನ ಬೆಳ್ಳಿ ದರ
ಬೆಳಗ್ಗೆ ವೇಳೆಗೆ ದೇಶದ ಕೆಲವು ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದರೆ ಬೆಳ್ಳಿ ಬೆಲೆಯಲ್ಲಿಯೂ ಕೆಲವು ಕಡೆಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಚಿನ್ನ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ನಿಮ್ಮ ನಗರಗಳಲ್ಲಿ ಇಂದಿನ ದಿನ ಚಿನ್ನ ಮತ್ತು ಬೆಳಿಗೆ ಎಷ್ಟು ದರ ಇವೆ ಅನ್ನೋದನ್ನು ಇಲ್ಲಿ ನೀವು ಪ್ರತಿ ದಿನ ತಿಳಿದುಕೊಳ್ಳಬಹುದು.

ಚಿನ್ನದ ಏರಿಳಿತಕ್ಕೆ ಕಾರಣ
"ರಷ್ಯಾ-ಉಕ್ರೇನ್ ಯುದ್ಧದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅನಿಶ್ಚಿತತೆಯ ನಡುವೆ ಚಿನ್ನವು ಹೆಚ್ಚು ಮಾರಾಟವಾಗುತ್ತಿದೆ. ಮಾರುಕಟ್ಟೆಗಳಲ್ಲಿ ಪ್ರಾಬಲ್ಯ ಸಾಧಿಸುವವರೆಗೆ, ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯ ಸಾಧ್ಯತೆ ಇದೆ. ನಾವು ಹೂಡಿಕೆ ಮಾಡಲು ಇದು ಉತ್ತಮ ಅವಕಾಶ," ಎಂದು ಶೇರ್ ಇಂಡಿಯಾದ ಉಪಾಧ್ಯಕ್ಷ ಮತ್ತು ಸಂಶೋಧನಾ ಮುಖ್ಯಸ್ಥ ರವಿ ಸಿಂಗ್ ಹೇಳಿದ್ದಾರೆ. "ಡಾಲರ್ ಬಲಗೊಂಡ ಬಳಿಕ ಗುರುವಾರ ಚಿನ್ನ ಕಡಿಮೆಯಾಯಿತು. ಹೂಡಿಕೆದಾರರು ಯುಎಸ್ ಬಡ್ಡಿದರ ಹೆಚ್ಚಳಕ್ಕೆ ಸಜ್ಜಾಗುತ್ತಿದ್ದಂತೆ ಚಿನ್ನ ಹೆಚ್ಚಳವಾಗಿದೆ," ಎಂದು ಮೆಹ್ತಾ ಈಕ್ವಿಟೀಸ್‌ನ ರಾಹುಲ್ ಕಲಂತ್ರಿ ತಿಳಿಸಿದ್ದಾರೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.ನ ಈ ನಡುವೆ ಎಂಸಿಎಕ್ಸ್‌ನಲ್ಲಿ ಜೂನ್ 10ರ ವಹಿವಾಟು ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು, 50860 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 0.14ರಷ್ಟು ಇಳಿಕೆಯಾಗಿದ್ದು, 1,844.65 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.19ರಷ್ಟು ಇಳಿಕೆಯಾಗಿದ್ದು, 21.61 ಯುಎಸ್ ಡಾಲರ್ ಆಗಿದೆ.

ಬೆಂಗಳೂರಲ್ಲಿ ಕಳೆದ 7 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 10: 47,750 ರೂ, 52,100 ರೂ
ಜೂನ್ 09: 47,950 ರೂ, 52,310 ರೂ
ಜೂನ್ 08: 47,700 ರೂ, 52,040 ರೂ
ಜೂನ್ 07: 47,600 ರೂ, 51,930 ರೂ
ಜೂನ್ 06: 47,850 ರೂ, 52,200 ರೂ
ಜೂನ್ 05: 47,740 ರೂ, 52,090 ರೂ
ಜೂನ್ 04: 47,750 ರೂ, 52,100 ರೂ
ಬೆಳ್ಳಿ ಬೆಲೆ ಕೆ.ಜಿಗೆ 67,000 ರೂಪಾಯಿ

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಚಿನ್ನದ ಬೆಲೆ ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಾಗುತ್ತದೆ. ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಚಿನ್ನದ ದರಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೇ ಇದು. ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications