Infographics: ಅ.1ರಂದು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಎಲ್ಲಿ? ಎಷ್ಟು?
ನವದೆಹಲಿ, ಅಕ್ಟೋಬರ್ 1: ದೇಶಾದ್ಯಂತ ಇಂದು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
22 ಕ್ಯಾರೇಟ್‌ನ 10 ಗ್ರಾಂ ಚಿನ್ನದ ಮೇಲೆ 980 ರೂ. ಏರಿಕೆಯಾಗಿ 44,490 ರೂ. ಆಗಿದೆ. 24 ಕ್ಯಾರೇಟ್‌ನ 10 ಗ್ರಾಂ ಚಿನ್ನದ ಬೆಲೆಯೂ 980 ರೂ, ಏರಿಕೆಯಾಗಿ 45,490 ರೂ. ಆಗಿದೆ.
ಆಗಸ್ಟ್‌ನಲ್ಲಿ ಭಾರತದಲ್ಲಿ ಚಿನ್ನದ ಬೆಲೆಯು ಅಧಿಕವಾಗಿದೆ. ಆದರೆ ಅದಕ್ಕೂ ಅಧಿಕ ಬಾರಿ ಇಳಿಕೆಯನ್ನು ಕಂಡಿದೆ. ಜುಲೈನಲ್ಲಿ ಚಿನ್ನದ ಬೆಲೆ ಬದಲಾವಣೆ ದರವು ಶೇಕಡ 2.58 ಇತ್ತು. ಆಗಸ್ಟ್ ಆಗುವಷ್ಟರದಲ್ಲಿ ದರವು ಶೇ.2.11 ಆಗಿದೆ. ಸೆಪ್ಟೆಂಬರ್‌ನಲ್ಲಿ ಶೇ. 4.08 ಆಗಿದೆ.
ಚಿನ್ನ ಹಾಗೂ ಸ್ಪಾಟ್ ಗೋಲ್ಡ್ ಬೆಲೆಯು ನಿನ್ನೆ ಸರಿಸುಮಾರು ಔನ್ಸ್‌ಗೆ 1722 ಡಾಲರ್ ಹಾಗೂ ಔನ್ಸ್‌ಗೆ 1735 ಡಾಲರ್ ಆಗಿದೆ. ಆದರೆ ಸಂಜೆಯ ಹೊತ್ತಿಗೆ ಪರಿಸ್ಥಿತಿಯು ಬದಲಾಗಿದೆ. ಚಿನ್ನದ ಬೆಲೆಯು ಅಧಿಕವಾಗಲು ಆರಂಭವಾಯಿತು. ಮತ್ತೆ ಔನ್ಸ್‌ಗೆ 1755 ಡಾಲರ್ ಅನ್ನು ದಾಟಿದೆ. ದೇಶದ ಉದ್ಯೋಗ ಸನ್ನಿವೇಶದ ಬಗ್ಗೆ ಯುಎಸ್ ಫೆಡರಲ್ ರಿಸರ್ವ್ ಚೇರ್ ಜೆರೋಮ್ ಪೊವೆಲ್ ನೀಡಿದ ಒಂದು ಸುಳಿವು ಈ ಹಠಾತ್ ಬದಲಾವಣೆಯ ಹಿಂದಿನ ಕಾರಣವಾಗಿದೆ.
ಚಿನ್ನದ ಬೆಲೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಔನ್ಸ್‌ಗೆ 1755 ಡಾಲರ್‌ನಿಂದ ಔನ್ಸ್‌ಗೆ 1765 ಡಾಲರ್ ಅಥವಾ ಅದಕ್ಕಿಂತ ಅಧಿಕ ಇರಲಿದೆ. ಆದರೆ ಚಿನ್ನದ ಬೆಲೆಯು ಮತ್ತೆ ಇಳಿಕೆಯಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆಯು ಔನ್ಸ್‌ಗೆ 1725 ಡಾಲರ್‌ರಿಂದ 1700 ಡಾಲರ್‌ವರೆಗೆ ಇರಲಿದೆ.
ಇನ್ನು ಈಗ ಭಾರತದಲ್ಲಿ ಹಬ್ಬಗಳ ಸೀಸನ್ ಆಗಿದೆ. ಆದ್ದರಿಂದ ಚಿನ್ನದ ಬೆಲೆಯು ಅಧಿಕವಾಗುವ ನಿರೀಕ್ಷೆಯಿದೆ. ಆದರೆ ಚಿನ್ನದ ಬೆಲೆಯು ಡಾಲರ್ ಮೇಲೆ ಅವಲಂಭಿತವಾಗಿರುವ ಕಾರಣದಿಂದಾಗಿ ಅಮೆರಿಕದಲ್ಲಿ ಯಾವುದೇ ಆರ್ಥಿಕ ಬದಲಾವಣೆಯಾದರೂ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರಲಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಬೆಂಗಳೂರಿನಲ್ಲಿ 22 ಕ್ಯಾರೇಟ್‌ನ 10 ಗ್ರಾಂ ಚಿನ್ನದ ದರ 43,400 ರೂ.ಗಳಿವೆ.350 ರೂ. ಏರಿಕೆಯಾಗಿದೆ, 24 ಕ್ಯಾರೇಟ್‌ನ 10 ಗ್ರಾಂ ಚಿನ್ನದ ದರ 47,350 ರೂ.ಗಳಿವೆ. 390 ರೂ. ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ) ಅಕ್ಟೋಬರ್ 01: 43,400 ರೂ (350 ರೂ ಏರಿಕೆ) 47,350 ರೂ (390 ರೂ ಏರಿಕೆ)
ಸೆಪ್ಟೆಂಬರ್ 30: 43,050 ರೂ (150 ರೂ ಇಳಿಕೆ) 47,960 ರೂ (170 ರೂ ಇಳಿಕೆ) ಸೆಪ್ಟೆಂಬರ್ 29: 43,200 ರೂ(50ರೂ. ಇಳಿಕೆ) 47, 130 ರೂ. ಸೆಪ್ಟೆಂಬರ್ 28: 43,250 ರೂ (150 ರೂ ಇಳಿಕೆ) 47,130 ರೂ (160 ರೂ ಇಳಿಕೆ)
ಸೆಪ್ಟೆಂಬರ್ 27: 43,350 ರೂ (150 ರೂ ಏರಿಕೆ) 47,290 ರೂ (160 ರೂ ಏರಿಕೆ)
ಸೆಪ್ಟೆಂಬರ್ 26: 43,200 ರೂ (-) 47,130 ರೂ (-) ಬೆಳ್ಳಿ: 1 ಕೆ.ಜಿಗೆ 59,500 ರೂಪಾಯಿ (1200 ರೂ ಏರಿಕೆ)

ಚಿನ್ನದ ಬೆಲೆ ಆಧಾರಿತವಾಗಿರುವ ಎರಡು ಅಂಶಗಳು
ಅಕ್ಟೋಬರ್ ಚಿನ್ನದ ಬೆಲೆಯು ಎರಡು ಅಂಶಗಳ ಮೇಲೆ ಆಧಾರಿತವಾಗಿರುವ ಸಾಧ್ಯತೆ ಇದೆ. ಹಣದುಬ್ಬರದ ಸಂದರ್ಭ ಯುಎಸ್ ವೈಯಕ್ತಿಕ ಬಳಕೆ ವೆಚ್ಚ (ಪಿಸಿಇ) ಸೂಚ್ಯಂಕ ಹಾಗೂ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸಲಾಗುವ ಆಗಸ್ಟ್ ಕೃಷಿಯೇತರ ವೇತನದಾರರ ಡೇಟಾದ ಮೇಲೆ ಚಿನ್ನದ ಬೆಲೆಯು ಆಧಾರಿತವಾಗಿರಲಿದೆ. ಉದ್ಯೋಗ ಡೇಟಾದಲ್ಲಿ ಯಾವುದೇ ಪಾಸಿಟಿವ್ ಅಂಶ ಹಾಗೂ ಯುಎಸ್ ಹಣದುಬ್ಬರವು ಮಾತ್ರ ಚಿನ್ನದ ಬೆಲೆಯು ಮತ್ತಷ್ಟು ಇಳಿಕೆಯಾಗುವಂತೆ ಮಾಡಲಿದೆ. ಅದನ್ನು ಹೊರತುಪಡಿಸಿದರೆ, ಚಿನ್ನದ ಬೆಲೆಯು ಮತ್ತಷ್ಟು ಅಧಿಕವಾಗುವ ಎಲ್ಲಾ ಸಾಧ್ಯತೆಗಳು ಇದೆ.

ಚಿನ್ನದ ಏರಿಳಿತಕ್ಕೆ ಕಾರಣ
ಜಾಗತಿಕ ರಾಜಕೀಯ ವಿದ್ಯಮಾನ, ಡಾಲರ್ ಮೌಲ್ಯ ಏರಿಕೆ, ಕೊರೊನಾ ಲಸಿಕೆ ಅಭಿಯಾನ, ಜಾಗತಿಕ ಆರ್ಥಿಕ ಚೇತರಿಕೆ, ಹಲವು ಪ್ರಮುಖ ಬ್ಯಾಂಕುಗಳ ಆರ್ಥಿಕ ನೀತಿ ಎಲ್ಲವೂ ಚಿನ್ನದ ಏರಿಳಿತಕ್ಕೆ ಕಾರಣವಾಗಿವೆ ಎಂದು ಕೋಟಕ್ ಸೆಕ್ಯುರಿಟೀಸ್ ಉಪಾಧ್ಯಕ್ಷ ರವೀಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್ ತಿಂಗಳಲ್ಲಿ ಚಿನ್ನದ ಆಮದು ಹೆಚ್ಚಿನ ಪ್ರಮಾಣದಲ್ಲಿದ್ದರೂ ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹಿಗ್ಗಿಲ್ಲ, ಹಬ್ಬದ ಋತುವಿನಲ್ಲಿ ಹೆಚ್ಚಿನ ಹೂಡಿಕೆ, ವ್ಯವಹಾರದ ನಿರೀಕ್ಷೆಯಂತೂ ಇದ್ದೇ ಇದೆ.

ಚಿನ್ನದ ಬೆಲೆ ನಿರ್ಧರಿಸುವುದು ಹೇಗೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.












Click it and Unblock the Notifications