Infographics: ರಾಜ್ಯದಲ್ಲಿ ಮುಂದುವರಿಯಲಿರುವ ಭಾರಿ ಮಳೆ: ಅಲರ್ಟ್
ಬೆಂಗಳೂರು, ಆಗಸ್ಟ 04: ಕರ್ನಾಟಕದ ಕರಾವಳಿ ಸೇರಿದಂತೆ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಗುರುವಾರವೂ ಭಾರಿ ಮಳೆ ಮುಂದುವರಿದೆ. ಈ ಮಹಾಮಳೆ ಮುಂದಿನ ಆಗಸ್ಟ್ 9ರವರೆಗೂ ಮುಂದುವರಿಯುವ ಎಲ್ಲ ಸಾಧ್ಯತೆಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಗುರುವಾರ ಮಳೆ ದಾಖಲಾಗಿದೆ. ಈ ಪೈಕಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ಬೆಂಗಳೂರು ನಗರ, ಬೆಳಗಾವಿ, ಕಲಬುರಗಿ, ಯಾದಗಿರಿ ಸೇರಿದಂತೆ ಎಲ್ಲ ಜಿಲ್ಲೆಗಳ ಅನೇಕ ಕಡೆಗಳಲ್ಲಿ ವರುಣ ಅಬ್ಬರಿಸಿದ್ದಾರೆ. ಇದರಿಂದ ರಸ್ತೆಗಳು,ತಗ್ಗುಪ್ರದೇಶಗಳು ಜಾಲವೃತಗೊಂಡಿವೆ. ರೈತರು ಆಸೆಕಂಗಳಿಂದ ಕಾಯುತ್ತಿದ್ದ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ.
ಈ ಗುಡುಗು ಸಹಿತ ಗಾಳಿ ಮಳೆಯು ರಾಜ್ಯದಲ್ಲಿ ಶನಿವಾರ (ಆಗಸ್ಟ 6)ರಂದು ಒಂದು ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಇವೆ. ಅಂದು ಕರಾವಳಿಯ ಮೂರು ಜಿಲ್ಲೆ, ಮಲೆನಾಡಿನ ಎರಡು ಜಿಲ್ಲೆ ಸೇರಿದಂತೆ ಒಟ್ಟು ಐದು ಜಿಲ್ಲೆಗಳಿಗೆ ಅತ್ಯಧಿಕ ಭಾರಿ ಮಳೆ ಆಗಮಿಸಲಿದೆ. ಹೀಗಾಗಿ ಐದು ಜಿಲ್ಲೆಗಳಿಗೆ ರಾಜ್ಯ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ತಿಳಿದು ಬಂದಿದೆ.

ಮಳೆಗೆ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಪ್ರವಾಹ ಸ್ಥಿತಿ
ಮುಂಗಾರು ಆರಂಭವಾದಾಗಿನಿಂದ ಸುಮಾರು ಭಾರಿ ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡು ಜಿಲ್ಲೆಗಳಲ್ಲಿ ಪ್ರವಾಸೆ, ನೆರೆ ಪರಿಸ್ಥಿತಿ ಉಂಟಾಗಿದೆ. ಅದೇ ರೀತಿ ದೇಶದ ಅಸ್ಸಾಂ, ಹಿಮಾಚಲಯ ಪ್ರದೇಶ, ದೆಹಲಿ, ಗೋವಾ, ಕೇರಳ, ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ ಉತ್ತರ ಭಾರತ, ಮಧ್ಯ ಭಾರತದ ಹಾಗೂ ದ್ವೀಪ ಪ್ರದೇಶಗಳಲ್ಲಿ ಎಡೆಬಿಡೆದೆ ಮಳೆ ಸುರಿಯುತ್ತಿದೆ. ಇದರಿಂದ ಆ ರಾಜ್ಯಗಳಲ್ಲಿ ಆಗಾಗ ಪ್ರವಾಹ ಪರಿಸ್ಥಿತಿ ನಿರ್ಮಾವಾಗುತ್ತಿದೆ. ಇದರಿಂದ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ಈ ಪರಿಸ್ಥಿತಿ ಇನ್ನು ಕೆಲವು ದಿನ ಮುಂದುವರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯಲ್ಲಿ ಗಾಳಿ ವೇಗ ಅಧಿಕ: ಎಚ್ಚರಿಕೆ
ಕರ್ನಾಟಕದ ಕರಾವಳಿ ಭಾಗದಲ್ಲಿ ಎಂದಿನಂತೆ ಮಳೆ ಹೆಚ್ಚು ಸುರಿಯಲಿದೆ. ಈ ವೇಳೆ ಸಮುದ್ರ ತೀರದ ಪ್ರದೇಶಗಳಲ್ಲಿ ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸಲಿವೆ. ಅಲ್ಲದೇ ಈ ಪ್ರದೇಶದಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 45ರಿಂದ 55ಕಿ.ಮೀ. ಇದ್ದು, ಇದು ಪ್ರತಿ ಗಂಟೆಗೆ 65ಕಿ.ಮೀ.ಹೆಚ್ಚಾಗುವ ಸಾಧ್ಯತೆಯೂ ಇದೆ. ಹೀಗಾಗಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ 2ದಿನ 'ಯೆಲ್ಲೋ ಅಲರ್ಟ್'
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಗುರುವಾರ ಬೆಳಗ್ಗೆಯಿಂದ ಮಳೆ ಅಬ್ಬರ ಶುರುವಾಗಿತ್ತು. ಸಂಜೆ ನಂತರವು ನಗರದ ಹಲವು ಬಡಾವಣೆಗಳಲ್ಲು ತುಂತುರು ರೂಪದಲ್ಲಿ ಸುರಿದಿದೆ. ಇಡಿ ದಿನ ಚಳಿಯ ವಾತಾವರಣ ಕಂಡು ಬಂತು. ಇದೇ ರೀತಿಯ ವಾತಾವರಣ ಮುಂದಿನ 48ಗಂಟೆ ಮುಂದುವರಿಯುವ ಸಾಧ್ಯತೆಯ ಕಾರಣಕ್ಕೆ ಬೆಂಗಳೂರಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ನೀಡಲಾಗಿದೆ. ಈ ಎರಡು ದಿನದ ಅವಧಿಯಲ್ಲಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಅಂದರೆ 11.5ಸೆಂ.ಮೀ.ವರೆಗೆ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಗರಿಷ್ಠ ತಾಪಮಾನ 24 ಮತ್ತು ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎನ್ನಲಾಗಿದೆ.

ಕರ್ನಾಟಕದ ಉಷ್ಣಾಂಶ/ತೇವಾಂಶ ಅಂಕಿ ಅಂಶ
ಬೆಂಗಳೂರಿನಲ್ಲಿ 25ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶವಿದ್ದರೆ, ತೇವಾಂಶ 74ರಷ್ಟು, ಗಾಳಿಯ ವೇಗ ಗಂಟೆಗೆ 26ಕಿ.ಮೀ.ಗೆ ಇಳಿಕೆ ಆಗಿದೆ. ಬಾಗಲಕೋಟೆ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 75ರಷ್ಟು ತೇವಾಂಶ, ಮಂಗಳೂರಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 91ರಷ್ಟು ತೇವಾಂಶ ಇದೆ. ಶಿವಮೊಗ್ಗದಲ್ಲಿ 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 73ರಷ್ಟು ತೇವಾಂಶ ದಾಖಲಾಗಿದೆ. ಮೈಸೂರಲ್ಲಿ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 73ದಾಖಲಾಗಿದೆ. ಬಳ್ಳಾರಿಯಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮತ್ತು ತೇವಾಂಶ 65ರಷ್ಟು ದಾಖಲಾಗಿದೆ.
ರಾಯಚೂರಲ್ಲಿ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 72ರಷ್ಟು ತೇವಾಂಶ ಇದ್ದು, ಚಿತ್ರದುರ್ಗದಲ್ಲಿ 32ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 61ರಷ್ಟು ತೇವಾಂಶ ಇದೆ. ಇನ್ನು ಕಲಬುರಗಿಯ್ಲಲಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ 63ರಷ್ಟು ತೇವಾಂಶ, ಚಿಕ್ಕಮಗಳೂರು 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ 74ರಷ್ಟು ತೇವಾಂಶ ದಾಖಲಾಗಿದೆ.












Click it and Unblock the Notifications