ಚಿತ್ರ ಮಾಹಿತಿ: ಜ.8-9 ಭಾರತ್ ಬಂದ್: ಯಾವಸೇವೆ ಲಭ್ಯ? ಯಾವುದು ಅಲಭ್ಯ?
ಬೆಂಗಳೂರು, ಜನವರಿ 07: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಜ.8-9 ರಂದು ಎರಡು ದಿನಗಳ ಬಂದ್ ಗೆ ಕರೆ ನೀಡಿವೆ.
ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶವ್ಯಾಪಿ ಮುಷ್ಕರ ನಡೆಸಲಾಗುತ್ತಿದ್ದು, ಜನವರಿ 8 ರ ಬೆಳಿಗ್ಗೆ 6 ರಿಂದ ಜನವರಿ 9 ರ ಸಂಜೆ 5 ರವರೆಗೆ ಬಂದ್ ನಡೆಯಲಿದೆ. ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ 2017 ಅನ್ನು ವಿರೋಧಿಸಿ ಬಂದ್ ಗೆ ಕರೆ ನೀಡಲಾಗಿರುವುದರಿಂದ ದೇಶವ್ಯಾಪಿ ಸಾರಿಗೆ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇದೆ.
ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬುಲೆನ್ಸ್ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಆದರೆ ಕೆಲವು ಸೇವೆಗಳು ವ್ಯತ್ಯಯವಾಗಲಿವೆ. ಜ 8-9 ರಂದು ಯಾವೆಲ್ಲ ಸೇವೆ ಅಭಾದಿತ ಮತ್ತು ಯಾವೆಲ್ಲ ಸೇವೆ ಲಭ್ಯವಿಲ್ಲ ಎಂಬ ಚಿತ್ರ ಮಾಹಿತಿ ಇಲ್ಲಿದೆ.













Click it and Unblock the Notifications