Infographics: ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ

ಬೆಂಗಳೂರು, ಜನವರಿ 1: ದೇಶದಲ್ಲಿ ಕೊರೊನಾ ವೈರಸ್ ರೂಪಾಂತರ ತಳಿಯ ಹೊಸ ಪ್ರಕರಣಗಳು ವರದಿಯಾಗಿದ್ದರೂ ಇದುವರೆಗೂ ಅದು ಅಪಾಯಕಾರಿಯಾಗಿ ಪರಿಣಮಿಸಿಲ್ಲ. ದಿನದಿಂದ ದಿನಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದು ಮತ್ತು ಮರಣ ಪ್ರಮಾಣ ತಗ್ಗಿರುವುದು ಇದಕ್ಕೆ ಸಾಕ್ಷಿ.

ದೇಶದಲ್ಲಿ ದೈನಂದಿನ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ. ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಔಷಧ ಸಂಸ್ಥೆಯ ಸಹಯೋಗದೊಂದಿಗೆ ಭಾರತದಲ್ಲಿ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ದೊರಕಿರುವುದು ಮತ್ತೊಂದು ಸಂಗತಿ.

ಭಾರತದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಸುಸ್ಥಿರವಾಗಿ ಇಳಿಕೆಯಾಗುತ್ತಿದೆ. ಸಕ್ರಿಯ ಪ್ರಕರಣಗಳು ಈಗ 2.54 ಲಕ್ಷಕ್ಕೆ (2,54,254) ಕುಸಿದಿದೆ. 179 ದಿನಗಳ ನಂತರದಲ್ಲಿ ಇದು ಅತ್ಯಂತ ಕನಿಷ್ಠ ಸಂಖ್ಯೆಯಾಗಿದೆ. 2020 ಜುಲೈ 6ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 2,53,287 ದಾಖಲಾಗಿತ್ತು. ಆಗ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯ ಹಂತದಲ್ಲಿತ್ತು. ಪ್ರಸ್ತುತ ಭಾರತದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಶೇ 2.47% ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಮುಂದೆ ಓದಿ. (ಇನ್‌ಫೋಗ್ರಾಫ್ ಕೃಪೆ: ಪಿಐಬಿ ಬೆಂಗಳೂರು)

ಹೊಸ ಪ್ರಕರಣಗಳಲ್ಲಿ ಇಳಿಕೆ

ಹೊಸ ಪ್ರಕರಣಗಳಲ್ಲಿ ಇಳಿಕೆ

ಇತ್ತೀಚಿನ ಕೆಲವು ದಿನಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 20,000 ಆಸುಪಾಸಿನಲ್ಲಿ ಪತ್ತೆಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 20,035 ಹೊಸ ಪ್ರಕರಣಗಳು ಪತ್ತೆಯಾಗಿವೆ. 23,181 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಕಳೆದ 35 ದಿನಗಳಿಂದ ಹೊಸ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣಗಳು ಹೆಚ್ಚಾಗುತ್ತಿವೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಇಳಿಕೆ ಕಾಣುತ್ತಿದೆ.

ಚೇತರಿಕೆ ಪ್ರಮಾಣ ಏರಿಕೆ

ಚೇತರಿಕೆ ಪ್ರಮಾಣ ಏರಿಕೆ

ಇದುವರೆಗೂ ದೇಶದಲ್ಲಿ ಗುಣಮುಖ ಪ್ರಕರಣಗಳ ಸಂಖ್ಯೆ 99 ಲಕ್ಷಕ್ಕೆ (98,83,461) ಏರಿಕೆ ಕಂಡಿದೆ. ಚೇತರಿಕೆ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರ ಕೂಡ ಏರಿಕೆ ಕಾಣುತ್ತಿದ್ದು, ಅದೀಗ 96 ಲಕ್ಷಕ್ಕೆ (96,29,207) ತಲುಪಿದೆ. ಹೊಸ ಗುಣಮುಖ ಪ್ರಮಾಣವು ಸಕ್ರಿಯ ಪ್ರಕರಣಗಳನ್ನು ಹಿಂದಿಕ್ಕುತ್ತಿರುವುದರಿಂದ ಒಟ್ಟಾರೆ ಚೇತರಿಕೆ ದರ ಇದೀಗ 96.08%ಗೆ ಚೇತರಿಕೆ ಕಂಡಿದೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 77.61% ಹೊಸ ಚೇತರಿಕೆ ಪ್ರಕರಣಗಳು ದಾಖಲಾಗಿವೆ.

10 ರಾಜ್ಯಗಳಲ್ಲಿ ಶೇ 80ರಷ್ಟು ಪ್ರಕರಣ

10 ರಾಜ್ಯಗಳಲ್ಲಿ ಶೇ 80ರಷ್ಟು ಪ್ರಕರಣ

ಕೇರಳದಲ್ಲಿ ಒಂದೇ ದಿನ ಗರಿಷ್ಠ ಅಂದರೆ 5,376 ಚೇತರಿಕೆ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 3,612 ಮತ್ತು ಪಶ್ಚಿಮ ಬಂಗಾಳದಲ್ಲಿ 1,537 ಸೋಂಕಿತರು ಚೇತರಿಸಿಕೊಂಡಿದ್ದಾರೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 80.19% ಹೊಸ ಪ್ರಕರಣಗಳು ಪತ್ತೆಯಾಗಿವೆ. ಕೇರಳದಲ್ಲಿ ಒಂದೇ ದಿನ ಗರಿಷ್ಠ 5,215, ಮಹಾರಾಷ್ಟ್ರದಲ್ಲಿ 3,509 ಹೊಸ ಪ್ರಕರಣಗಳು ಪತ್ತೆಯಾಗಿವೆ.

256 ಹೊಸ ಸಾವುಗಳು

256 ಹೊಸ ಸಾವುಗಳು

ಕಳೆದ 24 ತಾಸುಗಳಲ್ಲಿ 256 ಹೊಸ ಸಾವುಗಳು ಸಂಭವಿಸಿವೆ. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 80.47% ಹೊಸ ಸಾವುಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ 58, ಕೇರಳದಲ್ಲಿ 30 ಮತ್ತು ಪಶ್ಚಿಮ ಬಂಗಾಳದಲ್ಲಿ 29 ಸಾವುಗಳು ವರದಿಯಾಗಿವೆ.

ಶೇ 1.45%ಕ್ಕೆ ತಗ್ಗಿದ ಮರಣ ಪ್ರಮಾಣ

ಶೇ 1.45%ಕ್ಕೆ ತಗ್ಗಿದ ಮರಣ ಪ್ರಮಾಣ

ಕಳೆದ 7 ದಿನಗಳಿಂದ ಪ್ರತಿನಿತ್ಯ 300ಕ್ಕಿಂತ ಕಡಿಮೆ ಸಾವುಗಳು ವರದಿಯಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಸಾವಿನ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗುತ್ತಿರುವುದನ್ನು ಇದು ಖಾತ್ರಿಪಡಿಸಿದ್ದು, ಪ್ರಸ್ತುತ ಮರಣ ದರ 1.45%ಗೆ ತಗ್ಗಿದೆ.

ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ದೆಹಲಿಯಲ್ಲಿ ಒಟ್ಟು ಸಾವಿನ ಶೇಕಡ 63ರಷ್ಟು ಮರಣಗಳು ಸಂಭವಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+