Harangi Dam Water Level Today | ಹಾರಂಗಿ ಅಣೆಕಟ್ಟು ಇಂದಿನ ನೀರಿನ ಮಟ್ಟ
ಹಾರಂಗಿ ಜಲಾಶಯದ ಇತಿಹಾಸ:
ಹಾರಂಗಿ ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದಾಗಿದೆ. ಇದಕ್ಕೆ ಸುವರ್ಣಾವತಿ ಎನ್ನುವ ಹೆಸರೂ ಕೂಡ ಇದೆ. ಹುದುಗೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ 67 ಮೀಟರ್ ಎತ್ತರದ ಅಣೆ ಕಟ್ಟಲಾಗಿದ್ದು ಇದು ಕೊಡಗಿನ ಅತಿ ದೊಡ್ಡ ನೀರಾವರಿ ಯೋಜನೆಯಾಗಿದೆ.
2019 ಜೂನ್ ಸಮಯದಲ್ಲಿ ನೀರಿಲ್ಲದೆ ಜಲಾಶಯ ಒಣಗಿ ಹೋಗಿತ್ತು. ಕೊಡಗು ಜಿಲ್ಲೆ ಎರಡು ವರ್ಷಗಳಿಂದ ನಿರಂತರವಾಗಿ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. 2018 ರಲ್ಲಿ ಭೂಕುಸಿತ ಮತ್ತು ಪ್ರವಾಹ ಎರಡು ಒಟ್ಟೊಟ್ಟಿಗೆ ಸಂಭವಿಸಿತ್ತು. ಈ ವೇಳೆ ಇಡೀ ಬೆಟ್ಟಗಳ ಮಣ್ಣು ಜಲಾಶಯ, ನದಿಗಳಲ್ಲಿ ತುಂಬಿ ಹೋಗಿತ್ತು. ಕೊಡಗಿನ ಏಕೈಕ ಜಲಾಶಯದಲ್ಲಿ 7 ರಿಂದ 8 ಅಡಿಯಷ್ಟು ಮಣ್ಣು ತುಂಬಿತ್ತು.
ಜಲಾಶಯದ ಹುಟ್ಟು:
ಹಾರಂಗಿ ಜಲಾಶಯವು ಮಡಿಕೇರಿ ತಾಲೂಕಿನ ಬೋರೋ ಬೆಟ್ಟದಲ್ಲಿ ಉಗಮವಾಗಿ ಕುಶಾಲನಗರಕ್ಕೆ ಸ್ವಲ್ಪ ಉತ್ತರದಲ್ಲಿ ಕೂಡಿಗೆ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.
Almatti Dam Water Level Today | ಆಲಮಟ್ಟಿ ಅಣೆಕಟ್ಟು ಇಂದಿನ ನೀರಿನ ಮಟ್ಟ
ಹಾರಂಗಿ ಜಲಾಶಯದ ವಿಸ್ತೀರ್ಣ:
ಅಣೆಕಟ್ಟೆಯ ಕೆಲಸ 1962 ರಲ್ಲಿ ಪ್ರಾರಂಭವಾಗಿತ್ತು, 1982 ರಲ್ಲಿ ಮುಗಿದಿತ್ತು. ಅಣೆಕಟ್ಟೆಯ ಎತ್ತರ - 174 ಅಡಿ, ಉದ್ದ - 2775 ಅಡಿ. ಜಲಾನಯನ ವಿಸ್ತೀರ್ಣ - 259 ಚದುರು ಕಿಲೋಮೀಟರ್. 1,60,000 ಎಕರೆಗಳಿಗೆ ನೀರುಣಿಸುತ್ತದೆ. ಒಟ್ಟು ಮುಳುಗಡೆಯ ಪ್ರದೇಶ - 4712 ಎಕರೆ ಇದೆ.
ಹಾರಂಗಿ ಜಲಾಶಯದ ಸಾಮರ್ಥ್ಯ:
ಹಾರಂಗಿ ಜಲಾಶಯದಲ್ಲಿ 8.07 ಟಿಎಂಸಿಯಷ್ಟು ಸಾಮರ್ಥ್ಯವಿದೆ. 2019 ರ ಮೇ ತಿಂಗಳಿನಲ್ಲಿ 1.13 ಟಿಎಂಸಿಯಷ್ಟು ನೀರಿತ್ತು. ಈ ವರ್ಷ 2.96ರಷ್ಟು ನೀರಿದೆ. ಒಳಹರಿವು 94 ಕ್ಯೂಸೆಕ್ಗಳಿವೆ. ಹೊರ ಹರಿವು 70 ಕ್ಯೂಸೆಕ್ನಷ್ಟಿದೆ.
ಪ್ರೇಕ್ಷಣೀಯ ಸ್ಥಳಗಳು:
ಹಾರಂಗಿ ಹಿನ್ನೀರು, ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ನಿಸರ್ಗಧಾಮ.
ಹಾರಂಗಿ ಜಲಾಶಯ ಭೇಟಿ ನೀಡುಬಹುದಾದ ಸಮಯ:
ವಾರದ ಎಲ್ಲಾ ದಿನಗಳಲ್ಲೂ ಹಾರಂಗಿ ಜಲಾಶಯ ವೀಕ್ಷಣೆ ಮಾಡಬಹುದಾಗಿದೆ. ಬೆಳಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೂ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶವಿದೆ. ಆಗಸ್ಟ್ನಿಂದ ಸೆಪ್ಟೆಂಬರ್ ತಿಂಗಳು ಪ್ರವಾಸಕ್ಕೆ ಒಳ್ಳೆಯ ಕಾಲ. ಹಾರಂಗಿ ಜಲಾಶಯ ನೋಡಲು ಬಸ್ ಹಾಗೂ ಸ್ವಂತ ವಾಹನಗಳ ಮೂಲಕ ತೆರಳಬಹುದಾಗಿದೆ. ಬೆಂಗಳೂರು- ಮಂಡ್ಯ, ಶ್ರೀರಂಗಪಟ್ಟಣ, ಕುಶಾಲನಗರ ಮೂಲಕ ಹಾರಂಗಿ ಜಲಾಶಯಕ್ಕೆ ತೆರಳಬಹುದು