ಇಷ್ಟಕ್ಕೂ ಪ್ರೇಮ ನಿವೇದನೆಗೆ ಚೆಂಗುಲಾಬಿಯೇ ಏಕೆ?

By: ಬಿ.ಎಂ.ಲವಕುಮಾರ್
Subscribe to Oneindia Kannada
ಪ್ರೇಮಿಯೊಬ್ಬ ತನ್ನ ಪ್ರಿಯತಮೆಯ ಕೈಗೆ ಚೆಂಗುಲಾಬಿಯನ್ನಿಟ್ಟು ಮೆಲ್ಲಗೆ 'ಐ ಲವ್ ಯೂ' ಎಂದು ಉಸುರುತ್ತಾನೆ. ಅವಳು ನಾಚಿ ನೀರಾಗಿ ಬಿಡುತ್ತಾಳೆ. ಇಂಥ ದೃಶ್ಯಗಳನ್ನು ಆಗಾಗ್ಗೆ ಸಿನಿಮಾಗಳಲ್ಲಿ ನಾವು ನೋಡಿರುತ್ತೇವೆ. ಆದರೂ ನಮ್ಮೆಲ್ಲರನ್ನು ಪ್ರಶ್ನೆಯೊಂದು ಆಗಾಗ್ಗೆ ಕಾಡುತ್ತಿರುತ್ತದೆ ಅದೇನೆಂದರೆ ಇಷ್ಟಕ್ಕೂ ಪ್ರೇಮ ನಿವೇದನೆಗೆ ಚೆಂಗುಲಾಬಿಯೇ ಏಕೆ ಬೇಕು?

ನಾವು ಪ್ರೇಮ ಲೋಕಕ್ಕೊಂದು ಗಿರಕಿ ಹೊಡೆದು ಗುಲಾಬಿಯತ್ತ ಬಂದು ದಿಟ್ಟಿಸಿ ನೋಡಿದರೆ ಚೆಂಗುಲಾಬಿ ತನ್ನ ಸುಂದರ ಕಥೆ ಹೇಳಿದರೆ, ಇತರೆ ಬಣ್ಣದ ಗುಲಾಬಿ ಹೂಗಳು ಪ್ರೇಮಲೋಕದಲ್ಲಿ ತಾವು ಸೃಷ್ಟಿಸಿದ ಹವಾವನ್ನು ತೆರೆದಿಡುತ್ತವೆ.[ಫೆ.14: ಯುವಪ್ರೇಮಿಗಳಿಗೆ ಸೀಮಿತವಾಗಬೇಕೇಕೆ?]

ಪ್ರೇಮ ನಿವೇದನೆಗೆ ಸೇತುವಾಗಿ ನಿಲ್ಲೋದು ಚೆಂಗುಲಾಬಿಯೇ. ಇದು ಸಾಮಾನ್ಯದ್ದಲ್ಲ. ಲಕ್ಷಾಂತರ ರೂಪಾಯಿಗಳ ಉಡುಗೊರೆಗಳು ಮಾಡಲಾಗದ ಕೆಲಸವೊಂದನ್ನು ಸದ್ದಿಲ್ಲದೆ ಮಾಡಿ ಮುಗಿಸಿ ಬಿಡುವ ಶಕ್ತಿಯಿದೆ ಇದಕ್ಕೆ. ಆ ಶಕ್ತಿ ಬಂದಿದ್ದು ಒಂದು ಹಕ್ಕಿಯಿಂದ ಎಂದರೆ ನಂಬುತ್ತೀರ ನಂಬಲೇ ಬೇಕು.

ಹಕ್ಕಿ ಮತ್ತು ಗುಲಾಬಿ

ಹಕ್ಕಿ ಮತ್ತು ಗುಲಾಬಿ

ಪುಟ್ಟ ಹಕ್ಕಿಯೊಂದು ಬಿಳಿ ಗುಲಾಬಿಯನ್ನು ಗಾಢವಾಗಿ ಪ್ರೀತಿಸುತ್ತಿತ್ತು. ಅದನ್ನು ಹೇಳಿಯೂ ಇತ್ತು. ಆದರೆ ಹಕ್ಕಿಯ ಪ್ರೀತಿಯನ್ನು ಅರಿಯದ ಗುಲಾಬಿ ಮಾತ್ರ ಉದ್ದಟತನದಿಂದ ವರ್ತಿಸುತ್ತಿತ್ತು. ಒಂದು ದಿನ ಗೋಗರೆದು ಕೇಳಿದ್ದಕ್ಕೆ ಬಿಳಿ ಗುಲಾಬಿ ನನ್ನ ಬಣ್ಣ ಕೆಂಪಾಗಿ ಬದಲಾದ ದಿನದಿಂದಲೇ ನಿನ್ನನ್ನು ಪ್ರೀತಿಸುತ್ತೇನೆಂದು ಭಾಷೆ ನೀಡಿ ತಪ್ಪಿಸಿಕೊಳ್ಳುವ ಜಾಣ್ಮೆ ತೋರಿತ್ತು. ಆದರೆ ಈ ಬಗ್ಗೆ ಅರಿಯದ ಹಕ್ಕಿ ಮಾತ್ರ ಗುಲಾಬಿ ಹೂ ಕೆಂಪಾಗುವುದನ್ನೇ ಕಾಯತೊಡಗಿತು. ಆದರೆ ದಿನ ಉರುಳಿ ವಾರವಾಯಿತು. ವಾರ, ತಿಂಗಳಾಗಿ ಕೊನೆಗೆ ವರ್ಷವಾದರೂ ಬಿಳಿ ಗುಲಾಬಿ ಮಾತ್ರ ಕೆಂಪಾಗಲಿಲ್ಲ.[ಪ್ರೇಮಿಗಳ ದಿನ: ಒನ್ ಲೈನ್ ಕನವರಿಕೆಗಳು]

ದೇವದಾಸ ಹಕ್ಕಿ

ದೇವದಾಸ ಹಕ್ಕಿ

ಇದರಿಂದ ನಿರಾಶೆಗೊಂಡ ಹಕ್ಕಿಯು ಹೂವಿನ ಮೇಲೆ ಕುಳಿತು ಗಿಡದಿಂದ ಮುಳ್ಳನ್ನು ಕಿತ್ತು ತನ್ನ ಎದೆಗೆ ಚುಚ್ಚಿಕೊಂಡಿತು. ಆಗ ಹಕ್ಕಿಯ ಎದೆಯಿಂದ ಹೊರಬಂದ ರಕ್ತ ಬಿಳಿ ಗುಲಾಬಿಯನ್ನೆಲ್ಲಾ ತೊಯ್ದು ಕೆಂಪಾಗಿಸಿತು. ಆಗ ಗುಲಾಬಿಗೆ ಜ್ಞಾನೋದಯವಾಗಿತ್ತು. ಎಂಥ ತಪ್ಪು ಮಾಡಿಬಿಟ್ಟೆನಲ್ಲ ಎಂದು ಕೊರಗುತ್ತಾ ಹಕ್ಕಿ ಬಳಿ ಹೇಳಿಕೊಂಡಿತು. ಆದರೆ ಅಷ್ಟರಲ್ಲಿಯೇ ಹಕ್ಕಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ನೆನಪಿನ ಕಾಣಿಕೆ

ನೆನಪಿನ ಕಾಣಿಕೆ

ಇಷ್ಟೆಲ್ಲಾ ನಡೆದ ಮೇಲೆ ಗುಲಾಬಿ ತನ್ನ ಅಹಂಕಾರದಿಂದ ಹಕ್ಕಿಯ ಪ್ರಾಣ ಹೋಯಿತಲ್ಲ ಎಂದು ಮಮ್ಮಲ ಮರುಗತೊಡಗಿತ್ತು. ತನಗೋಸ್ಕರ ಪ್ರಾಣವನ್ನೇ ತೆತ್ತ ಗೆಳೆಯನ ನೆನಪಿಗಾಗಿ ಇನ್ನು ಮುಂದೆ ಕೆಂಪು ಬಣ್ಣದಲ್ಲಿದ್ದುಕೊಂಡೇ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯ ನಿರ್ವಹಿಸುವುದಾಗಿ ಶಪಥ ಮಾಡಿತಂತೆ. ಅಂದಿನಿಂದ ಇಂದಿನವರೆಗೂ ಪ್ರೇಮಿಗಳ ಹೃದಯ ಬೆಸೆಯುವ ಕಾರ್ಯ ಮಾಡುತ್ತಾ ಅಗಲಿದ ಗೆಳೆಯನಿಗೆ ನೆನಪಿನ ಕಾಣಿಕೆಯಾಗಿ ನಿಂತಿದೆಯಂತೆ ಈ ಚೆಂಗುಲಾಬಿ...

ಒಂದೊಂದು ಹೂವಿಗೂ ಒಂದೊಂದು ಅರ್ಥ

ಒಂದೊಂದು ಹೂವಿಗೂ ಒಂದೊಂದು ಅರ್ಥ

ಚೆಂಗುಲಾಬಿ ಹೃದಯ ಬೆಸೆದರೆ ಉಳಿದ ಬಣ್ಣದ ಗುಲಾಬಿಗಳೇನು ತೆಪ್ಪಗೆ ಕುಳಿತುಕೊಂಡಿಲ್ಲ. ಪ್ರೇಮಲೋಕದಲ್ಲಿ ತಮ್ಮದೇ ಆದ ಹವಾ ಬೆಳೆಸಿಕೊಂಡಿವೆ. ತಮ್ಮ ಒಂದೊಂದು ಬಣ್ಣಕ್ಕೂ ಪ್ರೇಮಭಾಷ್ಯ ಬರೆದಿವೆ. ಇದೇನು ಅಂಥ ಅಚ್ಚರಿನಾ ಹಾಗಿದ್ದರೆ ಬಣ್ಣಕ್ಕೂ ಪ್ರೇಮಕ್ಕೂ ಎಂತಹ ಅನುಬಂಧ ಎನ್ನುವುದು ಗೊತ್ತಾಗಬೇಕಾದರೆ ಮುಂದೆ ಓದಿಬಿಡಿ..

ಬಣ್ಣದಲ್ಲೇ ಎಲ್ಲಾ..

ಬಣ್ಣದಲ್ಲೇ ಎಲ್ಲಾ..

ಪ್ರೇಮಲೋಕದಲ್ಲಿ ಎಲ್ಲವೂ ವಿಚಿತ್ರ ವಿಭಿನ್ನ ಇಲ್ಲಿ ಚೆಂಗುಲಾಬಿ ನೀಡಿದರೆ ‘ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದರ್ಥ. ಹೀಗಾಗಿ ಚೆಂಗುಲಾಬಿ ಅಂದ್ರೆ ಪ್ರೀತಿ. ಹಳದಿ ಬಣ್ಣದ ಹೂ ನೀಡಿದರೆ ನಾನು ನಿನ್ನ ಸ್ನೇಹವನ್ನು ಬಯಸುತ್ತೇನೆ ಎಂದರ್ಥ ಆದ್ದರಿಂದ ಹಳದಿ ಅಂದ್ರೆ ಸ್ನೇಹ. ಇನ್ನು ಬಿಳಿ ಗುಲಾಬಿ ನೀಡಿದರೆ ನಿನ್ನ ಲವ್‍ಗಿವ್ ಅಂಥ ಪೀಡಿಸಲ್ಲ ಎಂಬ ಅರ್ಥ ಅಂದ್ರೆ ನಿರಂತರ ಸ್ನೇಹ.. ತಿಳಿಗುಲಾಬಿ ಯೋಚಿಸೋಕೆ ಸಮಯ ಬೇಕು ನೋಡೋಣ ಮುಂದಿನ ವರ್ಷದ ವೇಳೆಗೆ. ಸಂಕ್ಷಿಪ್ತವಾಗಿ ಹೇಳೋದಾದ್ರೆ ಈಗಷ್ಟೇ ಮನಸ್ಸು ಅರಳುತ್ತಿದೆ ಎಂದರ್ಥ.

ಹಾಗೆಂದು ಗುಲಾಬಿ ಹಿಡಿದು ಕಾಡಬೇಡಿ.. ಪ್ರೀತಿ ಕಾಡಿ ಬೇಡಿ ಪಡೆಯೋದಲ್ಲ. ಶ್! ಅದು ಹೃದಯಗಳ ವಿಷ್ಯ.(ಚಿತ್ರ ಕೃಪೆ: ಶಟರ್ ಸ್ಟಾಕ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Meaning of every color rose in a love proposal is different. And red rose is so much important for proposing a love. What is the history and meaning of red rose in love?
Please Wait while comments are loading...